ಇನ್ನು ಸಾಲಿನಿಂದ ಸಾಲಿ ಹತ್ತು ಅಡಿ ಹಾಗೂ ಗಿಡದಿಂದ ಗಿಡಕ್ಕೆ ಆರು ಅಡಿ ಅಂತರದಲ್ಲಿ ಸಸಿಯನ್ನು ನೆಡಲಾಗಿದೆ. ನಂತರ ನಾಲ್ಕು ಎಕರೆ ಸರಾಸರಿ 2000 ಸಸಿಗಳನ್ನು ತಂದು ನೆಡಲಾಗಿದೆ, ಸೀಬೆ ಸಸಿ ಬೆಳೆಯುತ್ತಿದ್ದಂತೆ, ಸೀಬೆ ಸಸಿಗಳ ಸಾಲಿನ ಮಧ್ಯದಲ್ಲಿ, ಟೊಮ್ಯಾಟೋ, ಎಲೆಕೋಸು, ಆಲೂಗಡ್ಡೆ, ಸೇರಿದಂತೆ ವಿವಿದ ಬೆಳೆಗಳನ್ನು ಕೂಡಾ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿದೆ. ಈ ಮೂಲಕ ಸೀಬೆಯಿಂದ ನಿತ್ಯ ನಿರಂತರ ಆದಾಯ ತರುತ್ತಿದೆ. ಅದರ ಜೊತೆಗೆ ಮೂರು ತಿಂಗಳ ಅವದಿಯಲ್ಲಿ ಒಳ್ಳೆಯ ಆದಾಯ ತರುವ ವಿವಿದ ಟೊಮ್ಯಾಟೋ ಸೇರಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮ ಆದಾಯ ಬರುತ್ತಿದೆ. ಈ ಮೂಲಕ ರೈತರು ಒಂದೇ ರೀತಿಯ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸುವ ಬದಲು ಈ ರೀತಿಯ ಉತ್ತಮ ಆದಾಯ ತರುವ ಬೆಳೆಗಳನ್ನು ಬೆಳೆಯಬೇಕು ಅನ್ನೋದು ಮರೀಗೌಡ ಕುಟುಂಬಸ್ಥರು ಹೇಳುತ್ತಿದ್ದಾರೆ.