ಆಂಬ್ಯುಲೆನ್ಸ್ ವಾಹನ ತೊಳೆಯಲು ನೀರಿಗಿಳಿದಿದ್ದ ಯುವಕ ಜಲ ಸಮಾಧಿ – ಟ್ರಾಕ್ಟರ್ಗೆ ಬೈಕ್ ಡಿಕ್ಕಿ; ಇಬ್ಬರು ಸವಾರರ ಸಾವು
ವಾಹನ ತೊಳೆಯಲೆಂದು ಶಿರಮಗೊಂಡನ ಹಳ್ಳಿಯ ಭದ್ರಾ ಕಾಲುವೆಗೆ ಆಂಬ್ಯುಲೆನ್ಸ್ ಚಾಲಕ ವಿಜಯ್(25) ಇಳಿದಿದ್ದರು. ಅಚಾನಕ್ ಆಗಿ ನೀರಿನಲ್ಲಿ ಮುಳುಗಿ ವಿಜಯ್ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಜೊತೆಗಿದ್ದ ಸ್ನೇಹಿತ ವಿಜಯ್ ಶವವನ್ನು ನೀರಿನಿಂದ ಮೇಲೆತ್ತಿದ್ದಾರೆ. ಇನ್ನೊಂದೆಡೆ, ಟ್ರಾಕ್ಟರ್ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಬಲಿಯಾಗಿದ್ದಾರೆ. ಘಟನೆ ಚಿತ್ರದುರ್ಗದ ಅವಳಿಗಟ್ಟಿ ಬಳಿ ನಡೆದಿದೆ.
ಚಿತ್ರದುರ್ಗ: ಟ್ರಾಕ್ಟರ್ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಬಲಿಯಾಗಿದ್ದಾರೆ. ಘಟನೆ ಅವಳಿಗಟ್ಟಿ ಬಳಿ ನಡೆದಿದೆ. ಇನ್ನೊಂದೆಡೆ, ಆಂಬ್ಯುಲೆನ್ಸ್ ವಾಹನ ತೊಳೆಯಲು ನೀರಿಗಿಳಿದಿದ್ದ ಯುವಕ ಮುಳುಗಿ ಸಾವನಪ್ಪಿರುವ ಘಟನೆ ನಡೆದಿದೆ. ದಾವಣಗೆರೆ ತಾಲೂಕು ಶಿರಮಗೊಂಡನಹಳ್ಳಿಯ ಭದ್ರಾ ಕಾಲುವೆಯಲ್ಲಿ ಘಟನೆ ನಡೆದಿದ್ದು, ಕಾಲುವೆಯಲ್ಲಿ ಮುಳುಗಿ ಆಂಬುಲೆನ್ಸ್ ಚಾಲಕ ವಿಜಯ್ ಸಾವನ್ನಪ್ಪಿದ್ದಾರೆ.
ಚಿತ್ರದುರ್ಗ ಅವಳಿಹಟ್ಟಿ ಬಳಿ ಟ್ರ್ಯಾಕ್ಟರ್, ಬೈಕ್ ಮಧ್ಯೆ ಡಿಕ್ಕಿ ಇಬ್ಬರ ಸಾವು ಟ್ರ್ಯಾಕ್ಟರ್ ಮತ್ತು ಬೈಕ್ ಡಿಕ್ಕಿಯಾದ ರಭಸಕ್ಕೆ, ಬೈಕ್ ಸವಾರರಾದ ಚಿತ್ತಪ್ಪ(24) ಹಾಗೂ ಮಧು(25) ದುರ್ಮರಣ ಹೊಂದಿದ್ದಾರೆ. ಓರ್ವನಿಗೆ ಗಂಭೀರ ಗಾಯವಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ದಾವಣಗೆರೆಯಲ್ಲಿ ವಾಹನ ತೊಳೆಯಲು ಹೋದ ಯುವಕ ಭದ್ರಾ ಚಾನಲ್ನಲ್ಲಿ ಮುಳುಗಿ ಸಾವು ವಾಹನ ತೊಳೆಯಲೆಂದು ಶಿರಮಗೊಂಡನ ಹಳ್ಳಿಯ ಭದ್ರಾ ಕಾಲುವೆಗೆ ಆಂಬ್ಯುಲೆನ್ಸ್ ಚಾಲಕ ವಿಜಯ್(25) ಇಳಿದಿದ್ದರು. ಅಚಾನಕ್ ಆಗಿ ನೀರಿನಲ್ಲಿ ಮುಳುಗಿ ವಿಜಯ್ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಜೊತೆಗಿದ್ದ ಸ್ನೇಹಿತ ವಿಜಯ್ ಶವವನ್ನು ನೀರಿನಿಂದ ಮೇಲೆತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯುವಕನ ಸಾವಿನ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿಜಯ್ ಹಳೇ ಬೆಳವನೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
ನೆಲಮಂಗಲದಲ್ಲಿ ಹಸುವಿಗೆ ಡಿಕ್ಕಿ ತಪ್ಪಿಸುವಾಗ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೆದ್ದಾರಿಯಲ್ಲಿ ಅಡ್ಡ ಬಂದ ಹಸುವನ್ನು ಅಪಘಾತದಿಂದ ರಕ್ಷಿಸುವ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಲ್ಯಾಂಕೊ ಟೋಲ್ ರಸ್ತೆಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಗಂಗಮ್ಮ(45),ಅನುಷ(19),ಲೀಲಾವತಿ (35) ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಚಾಲಕನಿಂದ ಸರಣಿ ಅಪಘಾತ: ಬೈಕ್ ಸೇರಿದಂತೆ 5 ವಾಹನ ಜಖಂ
ಇದನ್ನೂ ಓದಿ: ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಭೀಕರ ಅಪಘಾತ: ಟ್ಯಾಂಕರ್ ಲಾರಿಗೆ ಸಿಲುಕಿ ದಿನಗೂಲಿ ನೌಕರ ಸ್ಥಳದಲ್ಲೇ ಸಾವು