
ಮಂಗಳೂರು: ಅಸಂಖ್ಯಾತ ಭಕ್ತರನ್ನು ಹೊಂದಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದಿಂದ ಅಕ್ರಮವೊಂದು ಕೇಳಿಬಂದಿದೆ. ಇದು ನಿಜಕ್ಕೂ ಅಪಾರ ಭಕ್ತವೃಂದವನ್ನು ಘಾಸಿಗೊಳಿಸುವ ವಿಷಯವೇ ಸರಿ. ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತಾಧಿಕಾರಿ ಮತ್ತು ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಕೋಟ್ಯಂತರ ರೂ ಮೌಲ್ಯದ ಆಭರಣ, ವಿಗ್ರಹಗಳ ಅವ್ಯವಹಾರ ಆರೋಪ ಕೇಳಿಬಂದಿದೆ. ಹಾಗಾಗಿ, ದೇಗುಲದ ಆಡಳಿತ ಮಂಡಳಿ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತಾಧಿಕಾರಿ ಎಂ.ಜೆ. ರೂಪಾ ಮತ್ತು ಕಾರ್ಯನಿರ್ವಹಣಾಧಿಕಾರಿ (CEO) ರವೀಂದ್ರ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ.
ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣ ಮತ್ತು ವಿಗ್ರಹಗಳ ವಿಷಯದಲ್ಲಿ ಅವ್ಯವಹಾರ ನಡೆದಿರುವ ಆರೋಪ ಇದಾಗಿದೆ. ಸುಬ್ರಹ್ಮಣ್ಯ ನಿವಾಸಿ, ಮಾನವ ಹಕ್ಕು ಹೋರಾಟಗಾರ ಶ್ರೀನಾಥ್ ಟಿ.ಎಸ್. ಎಂಬವರಿಂದ ಪಶ್ಚಿಮ ವಲಯದ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ACB) ದೂರು ಸಲ್ಲಿಕೆಯಾಗಿದೆ.
Published On - 4:26 pm, Thu, 22 October 20