ಭ್ರಷ್ಟಾಚಾರ ಆರೋಪ: ಎಸಿಬಿ ಅಧಿಕಾರಿಗಳಿಂದ IAS ಅಧಿಕಾರಿ ಮಂಜುನಾಥ್ ಬಂಧನ

ಎಸಿಬಿ ಅಧಿಕಾರಿಗಳಿಂದ IAS ಅಧಿಕಾರಿ ಮಂಜುನಾಥ್ ಬಂಧನ

ಭ್ರಷ್ಟಾಚಾರ ಆರೋಪ: ಎಸಿಬಿ ಅಧಿಕಾರಿಗಳಿಂದ IAS ಅಧಿಕಾರಿ ಮಂಜುನಾಥ್ ಬಂಧನ
ಮಾಜಿ ಜಿಲ್ಲಾಧಿಕಾರಿ ಜೆ ಮಂಜುನಾಥ್
TV9kannada Web Team

| Edited By: sadhu srinath

Jul 04, 2022 | 6:01 PM

ಬೆಂಗಳೂರು ನಗರ ಡಿಸಿ ಕಚೇರಿ ಮೇಲೆ ಎಸಿಬಿ ದಾಳಿ ಪ್ರಕರಣ ಸಂಬಂಧ ಭ್ರಷ್ಟಾಚಾರ ಆರೋಪದಲ್ಲಿ IAS ಅಧಿಕಾರಿ ಜೆ.ಮಂಜುನಾಥ್‌ ಅವರನ್ನು ಯಶವಂತಪುರದಲ್ಲಿರುವ ಅವರ ನಿವಾಸದಲ್ಲಿ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದಾಗ ಭ್ರಷ್ಟಾಚಾರ ಆರೋಪದ ಬಳಿಕ ಮಂಜುನಾಥ್‌ರನ್ನು ಸರ್ಕಾರ ವರ್ಗಾವಣೆಗೊಳಿಸಿತ್ತು. ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಂ ಡೈರೆಕ್ಟರ್ ಆಗಿ ಮಂಜುನಾಥ್‌ ವರ್ಗಾವಣೆಗೊಂಡಿದ್ದರು.

ಮಂಜುನಾಥ್‌ ವಿರುದ್ಧ ಭೂವ್ಯಾಜ್ಯ ಸಂಬಂಧ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಕೆಳ ಹಂತದ ಅಧಿಕಾರಿಗಳ ಮೂಲಕ ಲಂಚ ಪಡೆದಿರುವ ಆರೋಪ ಅವರ ವಿರುದ್ಧ ಕೇಳಿಬಂದಿದ್ದು, ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದಾರೆ.

ಹೈಕೋರ್ಟ್‌ ತರಾಟೆ ಬೆನ್ನಲ್ಲೇ ಎಸಿಬಿ ಡಿವೈಎಸ್‌ಪಿ ರವಿಶಂಕರ್ ನೇತೃತ್ವದಲ್ಲಿ ಮಂಜುನಾಥ್ ಬಂಧನವಾಗಿದೆ. ಸದ್ಯ ಮಂಜುನಾಥ್‌ರನ್ನು ಎಸಿಬಿ ಕಚೇರಿಗೆ ಕರೆತರಲಾಗುತ್ತಿದೆ.

ಪ್ರಕರಣದ ಹಿನ್ನೆಲೆ:

ಆನೇಕಲ್‌ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನಿಗಾಗಿ ಗಲಾಟೆ ನಡೆದಿತ್ತು. ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದ ಕೇಸ್ ಡಿಸಿ ಕೋರ್ಟ್​ಗೆ ಬಂದಿತ್ತು. ದೂರುದಾರದ ಪರವಾಗಿ ಆದೇಶ ನೀಡಲು ಡಿಮ್ಯಾಂಡ್ ಕೇಳಿಬಂದಿತ್ತು. ಬೇಗೂರು ನಿವಾಸಿ ಅಜಂ ಪಾಷಾ ಎಂಬುವವರಿಂದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಧಿಕಾರಿಗಳು ಲಂಚದ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದರು. ಜಿಲ್ಲಾಧಿಕಾರಿ ಮಂಜುನಾಥ್‌ ಅವರ ಅಧೀನ ಅಧಿಕಾರಿ ಮಹೇಶ್ ವಿರುದ್ಧ 5 ಲಕ್ಷ ರೂಪಾಯಿ ಲಂಚ ಪಡೆದ ಆರೋಪವಿತ್ತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada