PSI recruitment scam: ಅಮೃತ್ ಪೌಲ್ ಸಿಐಡಿ ಕಸ್ಟಡಿಗೆ, ಏನು ಈ ಅಧಿಕಾರಿಯ ಹಿನ್ನೆಲೆ? ಓಎಂಅರ್ ಶೀಟ್ ಭರ್ತಿ ಹೇಗೆ ಆಗ್ತಿತ್ತು ಗೊತ್ತಾ?
ಬೆಂಗಳೂರಿನ ಸಿಐಡಿ ಕಚೇರಿ ಆವರಣದ ನೇಮಕಾತಿ ವಿಭಾಗಕ್ಕೆ ಬರ್ತಿದ್ದ ಉತ್ತರ ಪತ್ರಿಕೆಗಳು ನೇಮಕಾತಿ ವಿಭಾಗದ ಡಿವೈಎಸ್ ಪಿ ಬಳಿಯೇ ಇರ್ತಿದ್ದ ಸ್ಟ್ರಾಂಗ್ ರೂಂ ಸೇರುತ್ತಿದ್ದವು. ಆ ಸುಭದ್ರ ಕೊಠಡಿಯ ಕೀ ನಾಲ್ವರಿಗೆ ಮಾತ್ರ ನೀಡಲಾಗಿತ್ತು. ಇಡೀ ನೇಮಕಾತಿ ವ್ಯವಸ್ಥೆ ಹೊಣೆಗಾರಿಕೆ ಎಡಿಜಿಪಿ ಅಮೃತ್ ಪೌಲ್ ಅವರದ್ದಾಗಿತ್ತು ಎಂಬುದು ಇಲ್ಲಿ ದಾಖಲಾರ್ಹ.
ಬೆಂಗಳೂರು: ಪಿಎಸ್ಐ ನೇಮಕ ಅಕ್ರಮ ಪ್ರಕರಣದ ಬೆನ್ನುಹತ್ತಿರುವ ಸಿಐಡಿ ಪೊಲೀಸರು ನೇಮಕಾತಿ ಜವಾಬ್ದಾರಿ ಹೊತ್ತಿದ್ದ ನಂಬರ್ 1 ಅಧಿಕಾರಿ ಹಿರಿಯ ಐಪಿಎಸ್ ಅಮೃತ್ ಪೌಲ್ ರನ್ನು ಕೊನೆಗೂ ಬಂಧಿಸಿ, ಸಿಐಡಿ ಅಧಿಕಾರಿಗಳ ಕಸ್ಟಡಿಗೆ ನೀಡಿದ್ದಾರೆ. ಇದೀಗ, ಅಮೃತ್ ಪೌಲ್ ಬಂಧನ ವಿಚಾರ ರಾಜ್ಯಾದ್ಯಂತ ಸಾಕಷ್ಟು ಸದ್ದು ಮಾಡ್ತಿದೆ. ಸಿಐಡಿ ಅಧಿಕಾರಿಗಳು ಮೊದಲ ಬಾರಿ ADGP ರೇಂಜ್ ಅಧಿಕಾರಿಯನ್ನ ಬಂಧಿಸಿದ್ದಾರೆ. ಹಾಗಾದ್ರೆ ಯಾರು ಈ ಅಮೃತ್ ಪೌಲ್, ಈ ಅಧಿಕಾರಿ ಹಿನ್ನೆಲೆ ಏನು? ಒಂದಿಷ್ಟು ತಿಳಿಯೋಣ.
1995 ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರೋ ಅಮೃತ್ ಪೌಲ್ 2000-2003ರವರೆಗೆ ಉಡುಪಿ ಎಸ್ ಪಿಯಾಗಿ ಕಾರ್ಯ ನಿರ್ವಹಿಸಿದ್ದರು. 2014ರಲ್ಲಿ ಕರ್ನಾಟಕ ವೆಸ್ಟರ್ನ್ ರೇಂಜ್ ಐಜಿಯಾಗಿ ಸೇವೆ ಸಲ್ಲಿಸಿರುವ ಅಮೃತ್ ಪೌಲ್ 2018 ಸೆಂಟ್ರಲ್ ರೇಂಜ್ ಐಜಿಯಾಗಿ ಸೇವೆ ಮಾಡಿದರು. ಅಮೃತ್ ಪೌಲ್, 2019ರಲ್ಲಿ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ಪ್ರಮೋಷನ್ ಪಡೆದಿದ್ದರು.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಬೆಳಕಿಗೆ ಬರ್ತಿದ್ದಂತೆಯೇ ಅಮೃತ್ ಪೌಲ್ ಹೆಸರು ಕೇಳಿ ಬಂದಿತ್ತು. ಪ್ರಕರಣದಲ್ಲಿ ಹೆಸರು ಕೇಳಿಬಂದ ಬೆನ್ನಲ್ಲೇ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಏಪ್ರಿಲ್ 27ರಂದು ನೇಮಕಾತಿ ವಿಭಾಗದಿಂದ ಅಮೃತ್ ಪೌಲ್ ನನ್ನ ISD ಗೆ ಎತ್ತಂಗಡಿ ಮಾಡಲಾಗಿತ್ತು. ನೇಮಕಾತಿ ವಿಭಾಗದ ಹಲವು ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರೋದು ಗೊತ್ತಾಗಿತ್ತು. ಈ ಸಂಬಂಧ ಸಿಐಡಿ ಅಧಿಕಾರಿಗಳು ಕೆಲ ಅಧಿಕಾರಿಗಳನ್ನ ಬಂಧಿಸಿದ್ದರು.
ಪ್ರಕರಣದ ಬೆನ್ನುಹತ್ತಿರುವ ಸಿಐಡಿ ಅಧಿಕಾರಿಗಳು ಪ್ರಕರಣ ಸಂಬಂಧ 30ಕ್ಕೂ ಹೆಚ್ಚು ಅಧಿಕಾರಿಗಳನ್ನ ಬಂಧಿಸಿದ್ದಾರೆ. ಅಕ್ರಮದ ವೇಳೆ ಅಮೃತ್ ಪೌಲ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದರು. ISD ಗೆ ವರ್ಗವಾದ ಮೇಲೆ ನಾಲ್ಕು ಬಾರಿ ವಿಚಾರಣೆಗೆ ಕರೆದು, ಸಿಐಡಿ ಅಧಿಕಾರಿಗಳು ಗ್ರಿಲ್ ನಡೆಸಿದ್ದರು. ಇದೀಗ ನೇಮಕಾತಿ ವಿಭಾಗದ ಎಡಿಜಿಪಿ ಮಟ್ಟದ ಅಧಿಕಾರಿಯನ್ನೇ ಬಂಧನ ಮಾಡುವ ಮೂಲಕ ಪ್ರಕರಣದ ತನಿಖೆಯನ್ನು ಚುರಕುಗೊಳಿಸಿದ್ದಾರೆ.
ಓಎಂಅರ್ ಶೀಟ್ ಭರ್ತಿಯಾಗುತ್ತಿದ್ದಿದ್ದು ಹೇಗೆ ಗೊತ್ತಾ..?
ಪಕ್ಕಾ ಸೀಲ್ಡ್ ಕವರ್ ನಲ್ಲಿ ಬರ್ತಿದ್ದ ಓಎಂಅರ್ ಶೀಟ್ ಭರ್ತಿಯಾಗುತ್ತಿದ್ದಿದ್ದು ಹೇಗೆ ಗೊತ್ತಾ..? ಪರೀಕ್ಷಾ ಕೇಂದ್ರಗಳಿಂದ ಓಎಂಆರ್ ಶೀಟ್ ಗಳು ಬಿಗಿ ಪೊಲೀಸ್ ಭದ್ರತೆಯಲ್ಲಿ ಸ್ಟ್ರಾಂಗ್ ರೂಂಗೆ ಬಂದಿದ್ದವು. ಪ್ಯಾಲೇಸ್ ರೋಡ್ ನ ಸಿಐಡಿ ಕಚೇರಿ ಆವರಣದ ನೇಮಕಾತಿ ವಿಭಾಗಕ್ಕೆ ಬರ್ತಿದ್ದ ಉತ್ತರ ಪತ್ರಿಕೆಗಳು ನೇಮಕಾತಿ ವಿಭಾಗದ ಡಿವೈಎಸ್ ಪಿ ಬಳಿಯೇ ಇರ್ತಿದ್ದ ಸ್ಟ್ರಾಂಗ್ ರೂಂ ಸೇರುತ್ತಿದ್ದವು. ಆ ಸುಭದ್ರ ಕೊಠಡಿಯ ಕೀ ನಾಲ್ವರಿಗೆ ಮಾತ್ರ ನೀಡಲಾಗಿತ್ತು. ಥಂಬ್ ಪ್ರೆಸ್ ಮಾಡಿ ಸ್ಟ್ರಾಂಗ್ ರೂಂ ಗೆ ಎಂಟ್ರಿಯಾಗಲು ಅವಕಾಶ ಕಲ್ಪಿಸಲಾಗಿತ್ತು. 10ಕ್ಕೂ ಹೆಚ್ಚು ವರ್ಷ ನೇಮಕಾತಿ ವಿಭಾಗದಲ್ಲೇ ಪಳಗಿದ್ದ ಅನುಭವಿ ಅಧಿಕಾರಿ ನೇತೃತ್ವದಲ್ಲಿ ಕೃತ್ಯ ನಡೆದಿದೆ. ಮುಂದೆ, ಪ್ರಸ್ತುತ ಸಿಐಡಿ ಬಂಧನದಲ್ಲಿರುವ ಡಿವೈಎಸ್ ಪಿ ಶಾಂತಕುಮಾರ್ ಅಂಡ್ ಟೀಂ OMR ಶೀಟ್ ಗಳಲ್ಲಿ ಸರಿಯಾದ ಉತ್ತರ ತುಂಬುತ್ತಿದ್ದರು! ಇಡೀ ನೇಮಕಾತಿ ವ್ಯವಸ್ಥೆ ಹೊಣೆಗಾರಿಕೆ ಎಡಿಜಿಪಿ ಅಮೃತ್ ಪೌಲ್ ಅವರದ್ದಾಗಿತ್ತು ಎಂಬುದು ಇಲ್ಲಿ ದಾಖಲಾರ್ಹ.
Published On - 4:41 pm, Mon, 4 July 22