ಮೈಸೂರು, ಜೂನ್ 19: ನಟ ದರ್ಶನ್ (Actor Darshan) ಮತ್ತು ಸಹಚರರಿಂದ ಕೊಲೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ (Chitradurga Renuka Swamy) ಮರಣೋತ್ತರ ವರದಿ ತಿರುಚಲು ಹಣದ ಆಮಿಷ ನೀಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಅಂತಹದ್ದೇನಾದರು ಇದ್ದರೆ ಅದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವ್ಯಾರೂ ಪ್ರಕರಣದ ತನಿಖೆ ವಿಚಾರದಲ್ಲಿ ಮೂಗು ತೂರಿಸಿಲ್ಲ ಎಂದು ಹೇಳಿದರು.
ಹೀನಾಯವಾದ ರೀತಿಯಲ್ಲಿ ಕೊಲೆಯಾಗಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತಪಿಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಬಯಕೆ. ಅಭಿಮಾನ ಅತಿರೇಕಕ್ಕೆ ಹೋದಾಗ ಅಸಹಿಷ್ಣತೆ ಉಂಟಾಗುತ್ತದೆ. ನಾನು ಹೇಳಿದ್ದು, ಸತ್ಯ ನನ್ನಂದಿಲ್ಲೇ ಎಲ್ಲ ಎಂಬ ಮನೋಭಾವನೆಗಳು ಬದಲಾಗಬೇಕು ಎಂದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ತೈಲ ಬೆಲೆ ಕಡಿಮೆ ಇದೆ. ಗ್ಯಾರಂಟಿಗಳಿಗಾಗಿ ಬೆಲೆ ಏರಿಸಿದ್ದೇವೆ ಅನ್ನೋದು ಸುಳ್ಳು. ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಣ ಅನಿರ್ವಾಯವಾಗಿದೆ. ಅದಕ್ಕಾಗಿ ಸಂಪನ್ಮೂಲ ಕ್ರೋಡೀಕರಣ ಮಾಡುತ್ತಿದ್ದೇವೆ. ಗ್ಯಾರಂಟಿ ನಿಲ್ಲಿಸುವುದು, ಪರಿಷ್ಕರಣೆ ಮಾಡುವುದು ಯಾವುದೂ ಇಲ್ಲ. ಇನ್ನು ಒಂದು ಎರಡು ವರ್ಷ ಆಗಲಿ ಆಗ ಮಾಡಬಹುದು. ಅಧ್ಯಯನ ಮಾಡಿ ಕೆಲ ಬದಲಾವಣೆ ಮಾಡಿಕೊಳ್ಳಬಹುದು. ಅಧ್ಯಯನ ಮಾಡದೆ ಮರುಪರಿಶೀಲನೆ ಎಂಬುದೆಲ್ಲ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ದರ್ಶನ್ ರಕ್ಷಣೆಗೆ ನಡೆಯುತ್ತಿದೆಯಾ ತೆರೆಮರೆ ಕಸರತ್ತು, ಎಸ್ಪಿಪಿ ಪ್ರಸನ್ನಕುಮಾರ್ ಬದಲಾವಣೆಗೆ ಚಿಂತನೆ!
ರೇಣುಕಾಸ್ವಾಮಿ ಮರಣೋತ್ತರ ವರದಿರೇಣುಕಾಸ್ವಾಮಿ ಅವರು ಆಘಾತ, ಚಿತ್ರಹಿಂಸೆ ಮತ್ತು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಶವಪರೀಕ್ಷೆ ವರದಿ ತಿಳಿಸಲಾಗಿದೆ. ಶವಪರೀಕ್ಷೆಯಲ್ಲಿ ರೇಣುಕಾ ಸ್ವಾಮಿ ಅವರ ದೇಹದ ಮೇಲೆ 15 ಗಾಯಗಳು ಕಂರೇಣುಕಾ ಸ್ವಾಮಿ ಅವರ ದೇಹದ ತಲೆ, ಹೊಟ್ಟೆ, ಎದೆ ಮತ್ತು ಇತರ ಭಾಗಗಳಲ್ಲಿ ಗಾಯದ ಗುರುತುಗಳಿವೆ. ರೇಣುಕಾಸ್ವಾಮಿ ಮೈ ಮೇಲೆ ಇರುವ ಗಾಯದ ಗುರುತುಗಳು ಮರದ ಕೋಲು, ಚರ್ಮದ ಬೆಲ್ಟ್ ಹಾಗೂ ಹಗ್ಗದಿಂದ ಹೊಡೆದ ಗುರುತುಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ರೇಣುಕಾಸ್ವಾಮಿ ಅವರ ತಲೆಯನ್ನು ಶೆಡ್ಡಿನಲ್ಲಿ ನಿಂತಿದ್ದ ಮಿನಿ ಟ್ರಕ್‌ಗೆ ಹೊಡೆಯಲಾಗಿದೆ ಎಂದು ಶವಪರೀಕ್ಷೆ ವರದಿ ಹೇಳಲಾಗಿದೆ.ಡುಬಂದಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:39 am, Wed, 19 June 24