ದರ್ಶನ್‌ ರಕ್ಷಣೆಗೆ ನಡೆಯುತ್ತಿದೆಯಾ ತೆರೆಮರೆ ಕಸರತ್ತು, ಎಸ್​​ಪಿಪಿ ಪ್ರಸನ್ನಕುಮಾರ್​ ಬದಲಾವಣೆಗೆ ಚಿಂತನೆ!

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್‌ ಹೆಸರು ಬರಬಾರದೆಂದು ಡಿ ಗ್ಯಾಂಗ್‌ ಆರೋಪಿಗಳು ಸಖತ್‌ ಕ್ರಿಮಿನಲ್‌ ಮೈಂಡ್‌ ಓಡಿಸಿದ್ದಾರೆ. ಆ ಪ್ರಯತ್ನಗಳೂ ವೇಸ್ಟ್‌ ಆಗಿದೆ. ಪೊಲೀಸರ ಖಡಕ್‌ ತನಿಖೆಯಿಂದ ಸಚಿವರೊಬ್ಬರು, ರಾಜಕಾರಣಿಗಳು ದರ್ಶನ್‌ ರಕ್ಷಣೆಗೆ ಯತ್ನಿಸಿದರೂ ಸಾಧ್ಯವಾಗಿಲ್ಲ. ಈಗ ದರ್ಶನ್‌ ರಕ್ಷಣೆಗೆ ಮತ್ತೆ ತೆರೆಮರೆಯ ಕಸರತ್ತು ನಡೆಯುತ್ತಿದೆಯಾ ಎಂಬ ಅನುಮಾನ ಹುಟ್ಟಿಕೊಂಡಿದೆ.

ದರ್ಶನ್‌ ರಕ್ಷಣೆಗೆ ನಡೆಯುತ್ತಿದೆಯಾ ತೆರೆಮರೆ ಕಸರತ್ತು, ಎಸ್​​ಪಿಪಿ ಪ್ರಸನ್ನಕುಮಾರ್​ ಬದಲಾವಣೆಗೆ ಚಿಂತನೆ!
ಎಸ್​ಪಿಪಿ ಪ್ರಸನ್ನಕುಮಾರ್, ಆರೋಪಿ ದರ್ಶನ್​
Follow us
| Updated By: ವಿವೇಕ ಬಿರಾದಾರ

Updated on:Jun 19, 2024 | 9:51 AM

ಬೆಂಗಳೂರು, ಜೂನ್ 19: ನಟ ದರ್ಶನ್ (Actor Darshan) ಮತ್ತು ಆತನ ಸಹಚರರಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (Renukaswamy) ಕೊಲೆಯಾದ ಪ್ರಕರಣದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಹಲವು ಆಘಾತಕಾರಿ ವಿಚಾರಗಳು ಬೆಳಕಿಗೆ ಬರುತ್ತಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ ಬಂಧನವಾಗದಂತೆ ತಡೆಯಲು ಶಾಸಕರು ಮತ್ತು ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಆದರೆ ಇವರ ಪ್ರಯತ್ನ ಫಲಿಸಲಿಲ್ಲ. ನಟ ದರ್ಶನ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ, ಪೊಲೀಸ್​ ಕಸ್ಟಡಿಯಲ್ಲಿದ್ದಾರೆ. ಪೊಲೀಸರು ಆರೋಪಿ ನಟ ದರ್ಶನನ್ನು ವಿಚಾರಣೆ ನಡೆಸುತ್ತಿದ್ದಾರೆ.

ಆದರೆ ಈಗ ದರ್ಶನ್‌ ರಕ್ಷಣೆಗೆ ಮತ್ತೆ ತೆರೆಮರೆಯ ಕಸರತ್ತು ನಡೆಯುತ್ತಿದೆಯಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸರ್ಕಾರ ನೇಮಿಸಿರುವ ಎಸ್‌ಪಿಪಿ ಪ್ರಸನ್ನಕುಮಾರ್‌ ಅವರು ಖಡಕ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಎಸ್​ಪಿಪಿ ಪ್ರಸನ್ನಕುಮಾರ್​ ಅವರನ್ನು ಬದಲಾಯಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆಯಂತೆ. ಪ್ರಸನ್ನ ಕುಮಾರ್ ಬದಲಾವಣೆಗೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ. ಹೀಗಾಗಿ, ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ. ಎಸ್​ಪಿಪಿ ಪ್ರಸನ್ನಕುಮಾರ್​ ಅವರನ್ನು ಬದಲಿಸಿದರೆ ಅನುಮಾನ ಬರುವ ಸಾಧ್ಯತೆ ಇರುವುದರಿಂದ, ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ: ಸ್ವಲ್ಪ ನಿರ್ಲಕ್ಷ್ಯಸಿದ್ದರೂ ಪ್ರಕರಣ ಬೇರೆ ದಾರಿ ಹಿಡಿಯುತ್ತಿತ್ತು; ಬಿ ದಯಾನಂದ್​​

ಈ ಹಿಂದೆ ಆರೋಪಿ ದರ್ಶನನ್ನು ಬಂಧಿಸುವ ಮುನ್ನ ಪ್ರಭಾವಿ ಸಚಿವರು ದರ್ಶನ್‌ನನ್ನ A1 ಅಥವಾ A2 ಮಾಡಬೇಡಿ ಅಂತ ದುಂಬಾಲು ಬಿದ್ದಿದ್ದರು. ಈಗ ಸರ್ಕಾರವೇ ಎಸ್​​ಪಿಪಿ ಪ್ರಸನ್ನ ಕುಮಾರ್​ ಅವರನ್ನು ಬದಲಿಸುವ ಚಿಂತನೆ ನಡೆಸಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಯಾರು ಈ ಎಸ್​ಪಿಪಿ ಪ್ರಸನ್ನಕುಮಾರ್​

ಸಿಬಿಐ ಮತ್ತು ಭಯೋತ್ಪಾದಕ ಕೃತ್ಯಗಳ ಸಂಬಂಧ ರಾಷ್ಟ್ರೀಯ ತನಿಖಾ ದಳ (NIA) ಪ್ರತಿನಿಧಿಸುವ ಹಿರಿಯ ವಕೀಲ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಅನೇಕ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ವಾದ ಮಂಡಿಸಿದ್ದಾರೆ. ಆರೋಪಿಗಳನ್ನು ಜೈಲಿಗಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ವಿನಯ್ ಕುಲಕರ್ಣಿ ಮತ್ತು ಡಿಕೆ ಶಿವಕುಮಾರ್​ ಅವರ ಪ್ರಕರಣದಲ್ಲೂ ಪ್ರಸನ್ನಕುಮಾರ್ ಎಸ್‌ಪಿಪಿಯಾಗಿದ್ದರು. ಸ್ಫೋಟಕ ಕೃತ್ಯಗಳಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿ ಬಾಂಬ್‌ ಬ್ಲಾಸ್ಟ್‌ನ ಆರೋಪಿಗಳನ್ನು ಜೈಲುಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸದ್ಯ ಎಸ್​ಪಿಪಿ ಪ್ರಸನ್ನಕುಮಾರ್ ಬದಲಾವಣೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಠಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:41 am, Wed, 19 June 24