ಹೋಟೆಲ್‌ಗಳಲ್ಲಿ ಹಾಡು ಹಾಕೋಕೆ ಬೇಕು ಕೇಂದ್ರ ಸರ್ಕಾರದ ಲೈಸೆನ್ಸ್; ಹೋಟೆಲ್ ಅಸೋಸಿಯೇಷನ್ ಆಕ್ರೋಶ
ಇನ್ಮುಂದೆ ಹೋಟೆಲ್‌ಗಳಲ್ಲಿ ಹಾಡುಗಳನ್ನ ಹಾಕಬೇಕು ಅಂದ್ರೆ ಅದಕ್ಕೆ ಲೈಸೆನ್ಸ್ ತೆಗೆದುಕೊಳ್ಲಬೇಕು ಅಂತ ಕೇಂದ್ರ ಸರ್ಕಾರ ರೂಲ್ಸ್ ಮಾಡಿದೆ. ಸಧ್ಯ ಈ ರೂಲ್ಸ್ ವಿರುದ್ದ ಹೋಟೆಲ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸುತ್ತಿದೆ. ಹಾಡುಗಳ ಬಳಕೆಗೆ ಲೈಸೆನ್ಸ್ ಕಡ್ಡಾಯ ಮಾಡಿರುವ ಬಗ್ಗೆ ಹೋಟೆಲ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸುತ್ತಿದ್ದು ಕೇಂದ್ರ ಸರ್ಕಾರಕ್ಕೆ ಲೈಸೆನ್ಸ್ ಆದೇಶ ಕ್ಯಾನ್ಸಲ್ ಮಾಡುವಂತೆ ಪತ್ರ ಬರೆಯಲಾಗುತ್ತಿದೆ.
ಬೆಂಗಳೂರು, ಜೂನ್.19: ಮ್ಯೂಸಿಕ್ ಅಂದ್ರೆ ಯಾರಿಗೆ ತಾನೇ ಇಷ್ಟ ಆಗೊಲ್ಲ ಹೇಳಿ. ಪ್ರತಿಯೊಬ್ಬರು ಇಷ್ಟಪಟ್ಟು ಕೇಳುವುದರ ಜೊತೆಗೆ ಧ್ವನಿ ಗೂಡಿಸುತ್ತಾರೆ. ಅದ್ರಲ್ಲೂ ಹೋಟೆಲ್, ಪಬ್, ಡಿನ್ನರ್ ಹಾಲ್ಗಳಲ್ಲಿ ಸಾಂಗ್ ಪ್ಲೇ (Songs) ಆಗುತ್ತಿದ್ರೆ ಮನಸ್ಸಿಗೆ ಏನೋ ಒಂದು ರೀತಿಯ ಆನಂದ. ಎಷ್ಟೋ ಜನ ಸಂಜೆ ಮ್ಯೂಸಿಕ್ ಜೊತೆಗೆ ಕಾಫಿ ಕುಡಿಬೇಕು ಅಂತ ಹೋಟಲ್ಗಳಿಗೆ ಬರ್ತಾರೆ. ಆದ್ರೆ ವಿಷ್ಯ ಏನು ಅಂದ್ರೆ ಈ ಸಾಂಗ್ ಗಳು ಹೋಟೆಲ್ ನಲ್ಲಿ ಪ್ಲೇ ಆಗಬೇಕು ಅಂದ್ರೆ ಲೈಸೆನ್ಸ್ (License) ತೆಗೆದುಕೊಳ್ಳಬೇಕು.
ಹೋಟೆಲ್‌ನಲ್ಲಿ, ಪಬ್ಗಳಲ್ಲಿ, ಲಿಫ್ಟ್ ಗಳಲ್ಲಿ ಡಿನ್ನರ್ ಹಾಲ್ ಗಳಲ್ಲಿ ಮ್ಯೂಸಿಕ್ ಪ್ಲೇ ಮಾಡಬೇಕು ಅಂದ್ರೆ ಪಿಪಿಎಲ್ ಲೈಸೆನ್ಸ್ ಅನ್ನ ತೆಗೆದುಕೊಳ್ಳಬೇಕು. ಈ ಪಿಪಿಎಲ್ ಅಂದ್ರೆ ಪಬ್ಲಿಕ್ ಫರ್ಫಾಮೆನ್ಸ್ ಲೈಸೆನ್ಸ್. ಈ ಲೈಸೆನ್ಸ್ ಅನ್ನ ಒಂದು ವರ್ಷಕ್ಕೊಮ್ಮೆ ರಿನಿವಲ್ ಮಾಡಿಸಿಕೊಳ್ಳುತ್ತಿರಬೇಕು. ಒಂದು ಲಕ್ಷಕ್ಕೂ ಹೆಚ್ಚು ಹಣವನ್ನ ನಿಗದಿ ಮಾಡಲಾಗಿದೆ. ಅದ್ರಲ್ಲೂ ತ್ರೀ ಸ್ಟಾರ್ ಹಾಗೂ ಫೈ ಸ್ಟಾರ್ ಹೋಟೆಲ್ ಗಳಲ್ಲಿ ಹಾಡುಗಳನ್ನ ಪ್ಲೇ ಮಾಡುವುದಕ್ಕೆ ಲೈಸೆನ್ಸ್ ಕಡ್ಡಾಯವಾಗಿದೆ. ಸಧ್ಯ ಹೋಟೆಲ್‌ಗಳಲ್ಲಿ ಲಿಫ್ಟ್ ಗಳಲ್ಲಿ, ಡಿನ್ನರ್ ಹಾಲ್ ಗಳಲ್ಲಿ, ಪಾರ್ಟಿ ಹಾಲ್ ಗಳಲ್ಲಿ ಬಳಕೆ ಮಾಡ್ತಾರೆ. ಆದ್ರೆ ಈ ಹಾಡುಗಳ ಬಳಕೆಗೆ ಲೈಸೆನ್ಸ್ ಕಡ್ಡಾಯ ಮಾಡಿರುವ ಬಗ್ಗೆ ಹೋಟೆಲ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸುತ್ತಿದ್ದು ಕೇಂದ್ರ ಸರ್ಕಾರಕ್ಕೆ ಲೈಸೆನ್ಸ್ ಆದೇಶ ಕ್ಯಾನ್ಸಲ್ ಮಾಡುವಂತೆ ಪತ್ರ ಬರೆಯಲಾಗುತ್ತಿದೆ.
ಇದನ್ನೂ ಓದಿ: ಆರ್ಟಿಓ ನಕಲಿ ವೆಬ್ ಸೈಟ್ ಹಾವಳಿ; HSRP ಹೆಸರಲ್ಲಿ ಜನರ ಜೇಬಿಗೆ ಕತ್ತರಿ
ಹೋಟೆಲ್ಗಳನ್ನ ಮಾಡುವಾಗಲೇ ನಾವು ಲೈಸೆನ್ಸ್ ತೆಗೆದುಕೊಂಡಿರುತ್ತೀವಿ. ಈ ಮಧ್ಯೆ ಹಾಡುಗಳನ್ನ ಕೇಳುವುದಕ್ಕೂ ಲೈಸೆನ್ಸ್ ತೆಗೆದುಕೊಳ್ಳಬೇಕು ಅಂದ್ರೆ ಕಷ್ಟ. ಲೈಸೆನ್ಸ್ ಬೆಲೆಯು ಕೂಡ 1 ಲಕ್ಷಕ್ಕೂ ಹೆಚ್ಚು ಹಣವನ್ನ ನಿಗಧಿ ಮಾಡಲಾಗಿದೆ. ಕೂಡಲೇ ಕೇಂದ್ರ ಸರ್ಕಾರ ಈ ನಿಯಮವನ್ನ ತೆಗದುಹಾಕಬೇಕು. ಇದರಿಂದ ಹೋಟೆಲ್ ಉಧ್ಯಮಕ್ಕೆ ಎಫೆಕ್ಟ್ ಆಗಲಿದೆ ಅಂತ ಹೋಟಲ್ ಮಾಲೀಕರು ತಿಳಿಸಿದ್ದಾರೆ.
ಒಟ್ನಲ್ಲಿ, ಇಷ್ಟು ದಿನ ಹೋಟೆಲ್‌ಗಳಲ್ಲಿ ಊಟ ತಿಂಡಿಯ ಜೊತೆಗೆ ಮ್ಯೂಸಿಕ್ ಸಹ ಗ್ರಾಹಕರನ್ನ ಆಕರ್ಷಿಸುತ್ತಿತ್ತು. ಇದೀಗ ಈ ಹಾಡುಗಳನ್ನ ಹಾಕುವುದಕ್ಕೂ ಕೂಡ ಲೈಸೆನ್ಸ್ ತೆಗೆದುಕೊಳ್ಳಬೇಕು ಅಂತ ಕೇಂದ್ರ ಸರ್ಕಾರ ಹೇಳಿರುವುದು ಹೋಟೆಲ್ ಮಾಲೀಕರಿಗೆ ನುಂಗಲಾರದ ತುತ್ತಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ