ಆರ್ಟಿಓ ನಕಲಿ ವೆಬ್ ಸೈಟ್ ಹಾವಳಿ; HSRP ಹೆಸರಲ್ಲಿ ಜನರ ಜೇಬಿಗೆ ಕತ್ತರಿ
ಆರ್ಟಿಓ ಅಧಿಕಾರಿಗಳು ಚಾಪೆ ಕೆಳಗೆ ನುಸುಳಿದ್ರೆ ಈ ಕಿಲಾಡಿಗಳು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಆರ್ಟಿಓ ವೆಬ್ ಸೈಟ್ ಮಾದರಿಯಲ್ಲೇ ನಕಲಿ ವೈಬ್ ಸೈಟ್ಗಳನ್ನು ಕ್ರಿಯೆಟ್ ಮಾಡಿ ವಾಹನ ಮಾಲೀಕರಿಗೆ ಮೋಸ ಮಾಡುತ್ತಿದ್ದಾರೆ. ಹೀಗಾಗಿ ಆರ್ಟಿಓ ವೆಬ್ ಸೈಟ್ಗೆ ಭೇಟಿ ನೀಡುವ ವಾಹನ ಸವಾರರು ಎಚ್ಚರಿಕೆ ವಹಿಸಬೇಕಿದೆ.
ಬೆಂಗಳೂರು, ಜೂನ್.19: ನಕಲಿ ವೆಬ್ ಸೈಟ್ಗಳಲ್ಲಿ ಹೆಚ್ಎಸ್ಆರ್ಪಿ (HSRP) ರೆಜಿಸ್ಟರ್ ಮಾಡುವಾಗ ವಾಹನ ಮಾಲೀಕರು ಅಲರ್ಟ್ ಆಗಿರಬೇಕು. ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ವಿಚಾರವಾಗಿ ನಕಲಿ ವೆಬ್ ಸೈಟ್ಗಳು (Fake Website) ಜನರನ್ನು ಯಾಮಾರಿಸುತ್ತಿದೆ. ಈ ನಕಲಿ ವೆಬ್ ಸೈಟ್ಗಳು ನೋಡೋಕೆ ಸರ್ಕಾರದ ವೆಬ್ ಸೈಟ್ಗಳಂತೆ ಇವೆ. ಇದರಿಂದ ಜನರಿಗೆ ಮೋಸವಾಗ್ತಿದೆ. ಈ ನಕಲಿ ವೆಬ್ ಸೈಟ್ ಮೂಲಕ ನಂಬರ್ ಪ್ಲೇಟ್ ಆರ್ಡರ್ ಮಾಡಿದ್ರೆ ಹಣ ಕಟ್ ಆಗುತ್ತೆ. ಆದರೆ ಯಾವುದೇ ಅಪ್ಡೇಟ್ ಮಾತ್ರ ಸಿಗೋದಿಲ್ಲ ಅಂತ ಹಣ ಕಳೆದುಕೊಂಡವ್ರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ನಕಲಿ ವೆಬ್ ಸೈಟ್ಗಳ ಮೂಲಕ ಹೆಚ್ಎಸ್ಆರ್ಪಿ ಬುಕ್ ಮಾಡಿದ್ರೆ ಆರ್ಡರ್ ನಂಬರ್ ಬರುತ್ತದೆ. ಟ್ರ್ಯಾಕ್ ಮಾಡಿದ್ರೆ ಮಾತ್ರ ಡಿಟೇಲ್ಸ್ ತೋರಿಸಲ್ಲ. ಎರಡು ವೆಬ್ ಸೈಟು ನೋಡೋಕೆ ಡಿಸೈನ್ ಕಲರ್ ಒಂದೇ ರೀತಿ ಇದೆ. ಇವೆರಡರಲ್ಲಿ ಯಾವುದು ರಿಯಲ್ ಯಾವುದು ಫೇಕ್ ಅಂತ ಗೊತ್ತಾಗುವುದೇ ಇಲ್ಲ. ಈಗಾಗಲೇ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಹೆಸರಲ್ಲಿ ನಕಲಿ ವೆಬ್ ಸೈಟ್ ಓಪನ್ ಮಾಡಿ ತಗ್ಲಾಕೊಂಡಿತ್ತು.
ಇದನ್ನೂ ಓದಿ: ಕೋಲಾರ: ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯದ ಗಂಗಾಶ್ರೀ ಆನೆ ಸಾವು
ಆರ್ಟಿಓ ಅಧಿಕಾರಿಗಳು ಹನುಮಂತನಗರ ಪೋಲಿಸ್ ಸ್ಟೇಷನ್ ನಲ್ಲಿ ಎಫ್ಐಆರ್ ದಾಖಲು ಮಾಡಿದ್ರು. ಈಗ ಮತ್ತಷ್ಟು ನಕಲಿ ವೆಬ್ ಸೈಟ್ ಗಳು ಓಪನ್ ಆಗ್ತಿವೆ. ಈ ಬಗ್ಗೆ ಮಾತಾನಾಡಿದ ಸಾರಿಗೆ ಇಲಾಖೆಯ ಅಡಿಷನಲ್ ಕಮೀಷನರ್ ಮಲ್ಲಿಕಾರ್ಜುನ, ಈಗಾಗಲೇ ವಾಹನ ಮಾಲೀಕರಿಂದ ದೂರು ಬಂದ ಕಂಪನಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದೀವಿ. ಬೇರೆ ನಕಲಿ ವೆಬ್ ಸೈಟ್ ಬಗ್ಗೆ ಜನರು ದೂರು ನೀಡಿದ್ರೆ ಅಂತಹ ಕಂಪನಿ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುತ್ತಿವಿ ಎಂದಿದ್ದಾರೆ.
ಒಟ್ನಲ್ಲಿ ಹೆಚ್ಎಸ್ಆರ್ಪಿ ಹಾಕಿಸಿಕೊಳ್ಳಬೇಕೆಂದು ವಾಹನ ಮಾಲೀಕರು ಆನ್ ಲೈನ್ ಮೂಲಕ ಬುಕ್ ಮಾಡಲು ಮುಂದಾಗ್ತಿದ್ದಾರೆ. ಆದರೆ ಇದನ್ನು ಬಂಡವಾಳ ಮಾಡಿಕೊಂಡಿರುವ ನಕಲಿ ವೆಬ್ ಸೈಟ್ ಗಳು ಜನರಿಂದ ಹಣ ಪಡೆದುಕೊಂಡು ಮೋಸ ಮಾಡ್ತಿವೆ. ಈ ಬಗ್ಗೆ ವಾಹನ ಮಾಲೀಕರು ಎಚ್ಚರ ವಹಿಸಬೇಕಿದೆ. ಆರ್ಟಿಓ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ