ಭರದಿಂದ ಸಾಗಿದೆ ಕೆಂಪೇಗೌಡರ ಪುತ್ಥಳಿ ಪಾರ್ಕ್ ನಿರ್ಮಾಣ; ಆದಿಚುಂಚನಗಿರಿ ನಿರ್ಮಲಾನಂದ ಸ್ವಾಮೀಜಿ ಭೇಟಿ, ಪರಿಶೀಲನೆ

| Updated By: ಸಾಧು ಶ್ರೀನಾಥ್​

Updated on: Jul 12, 2021 | 3:34 PM

Kempegowda International Airport Bengaluru: ಬೆಂಗಳೂರಿನಿಂದ ದೇಶ ಮತ್ತು ವಿದೇಶಗಳಿಗೆ ತೆರಳಲು ಕೆಂಪೇಗೌಡ ಅಂತರಾಷ್ಟ್ರೀಯ ‌ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಏರ್​ಪೋರ್ಟ್​ ಪ್ರವೇಶಿಸುತ್ತಿದ್ದಂತೆ ಬೃಹತ್ ನಾಡಪ್ರಭುವಿನ ಪುತ್ಥಳಿ ಮತ್ತು ಪಾರ್ಕ್ ಕಾಣಿಸುವ ರೀತಿಯಲ್ಲಿ ಪ್ಲಾನ್ ರೂಪಿಸಲಾಗಿದ್ದು ನಾಡಪ್ರಭುವಿನ ಪುತ್ಥಳಿ ದೇಶ ವಿದೇಶಿ ಪ್ರಯಾಣಿಕರ ಕಣ್ಮನ ಸೆಳೆಯಲಿದೆ.

ಭರದಿಂದ ಸಾಗಿದೆ ಕೆಂಪೇಗೌಡರ ಪುತ್ಥಳಿ ಪಾರ್ಕ್ ನಿರ್ಮಾಣ; ಆದಿಚುಂಚನಗಿರಿ ನಿರ್ಮಲಾನಂದ ಸ್ವಾಮೀಜಿ ಭೇಟಿ, ಪರಿಶೀಲನೆ
ಭರದಿಂದ ಸಾಗಿದೆ ಕೆಂಪೇಗೌಡರ ಪುತ್ಥಳಿ ಪಾರ್ಕ್ ನಿರ್ಮಾಣ; ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ, ಪರಿಶೀಲನೆ
Follow us on

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಕೆಂಪೇಗೌಡ ಪಾರ್ಕ್ ಗೆ ಆದಿಚುಂಚನಗಿರಿ ಮಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport Bengaluru) ಸರ್ಕಾರದ ವತಿಯಿಂದ ನಿರ್ಮಾಣವಾಗ್ತಿರೂ ಬೃಹತ್ ಕೆಂಪೇಗೌಡರ ಪುತ್ಥಳಿಯ ಪಾರ್ಕ್ ಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ (Adichunchanagiri Nirmalananda Swamiji ) ಭೇಟಿ ನೀಡಿದ್ರು. ರಾಜ್ಯದಲ್ಲೇ ಮೊದಲ ಬಾರಿಗೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ವತಿಯಿಂದ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಬೃಹತ್ ಪುತ್ಥಳಿ ಮತ್ತು ಪಾರ್ಕ್ ನಿರ್ಮಾಣಕ್ಕೆ ಕಳೆದ ವರ್ಷ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದರು.

ಹೀಗಾಗಿ ಕೆಂಪೇಗೌಡರ ಬೃಹತ್ ಪುತ್ಥಳಿ ಮತ್ತು ಪಾರ್ಕ್ (Kempegowda Park BIAL) ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು ಇಂದು ಆ ಸ್ಥಳಕ್ಕೆ ಸ್ವಾಮಿಜಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ರು. ಕೆಂಪೇಗೌಡರ ಬೃಹತ್ ಪ್ರತಿಮೆಯನ್ನ ದೆಹಲಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇಂದು ಪ್ರತಿಮೆಯ ಮೊದಲ ಭಾಗವಾಗಿ ನಿರ್ಮಾಣವಾಗಿರೂ ಪ್ರತಿಮೆಯ ಕಾಲುಗಳು ದೆಹಲಿಯಿಂದ ಇಲ್ಲಿನ ಏರ್​ಪೋರ್ಟ್​ನಲ್ಲಿ ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಬಂದು ತಲುಪಿದೆ. ಹೀಗಾಗಿ ಪ್ರತಿಮೆಯ ಪಾದಗಳನ್ನ ಸ್ವಾಮೀಜಿ ಸೇರಿದಂತೆ ಅಧಿಕಾರಿಗಳು ಬಂದು ಏರ್​ಪೋರ್ಟ್​ನಲ್ಲಿ ವೀಕ್ಷಣೆ ಮಾಡಿದ್ರು.

ಅಲ್ಲದೆ ಮುಂದಿನ 2022 ರ ವೇಳೆಗೆ ಪಾರ್ಕ್ ಮತ್ತು ಪುತ್ಥಳಿ ನಿರ್ಮಾಣಕ್ಕೆ ಗಡುವು ನೀಡಿದ್ದು ನಿರ್ಮಾಣದ ಕಾರ್ಯ ಸಹ ಭರದಿಂದ ಸಾಗಿದೆ. ಜತೆಗೆ ಬೆಂಗಳೂರಿನಿಂದ ದೇಶ ಮತ್ತು ವಿದೇಶಗಳಿಗೆ ತೆರಳಲು ಕೆಂಪೇಗೌಡ ಅಂತರಾಷ್ಟ್ರೀಯ ‌ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಏರ್​ಪೋರ್ಟ್​ ಪ್ರವೇಶಿಸುತ್ತಿದ್ದಂತೆ ಬೃಹತ್ ನಾಡಪ್ರಭುವಿನ ಪುತ್ಥಳಿ ಮತ್ತು ಪಾರ್ಕ್ ಕಾಣಿಸುವ ರೀತಿಯಲ್ಲಿ ಪ್ಲಾನ್ ರೂಪಿಸಲಾಗಿದ್ದು ನಾಡಪ್ರಭುವಿನ ಪುತ್ಥಳಿ ದೇಶ ವಿದೇಶಿ ಪ್ರಯಾಣಿಕರ ಕಣ್ಮನ ಸೆಳೆಯಲಿದೆ.

ಸಿಎಂ ಅನುಮೋದನೆ: 223 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿವೆ ನಾಡಪ್ರಭು ಕೆಂಪೇಗೌಡರ 46 ಪಾರಂಪರಿಕ ತಾಣಗಳು

(Adichunchanagiri Nirmalananda Swamiji visits Kempegowda Park site at BIAL)

Published On - 3:29 pm, Mon, 12 July 21