ಮಂಡ್ಯ: ಅಕ್ರಮವಾಗಿದ್ದರೆ ಸಕ್ರಮ ಮಾಡಿಕೊಡಿ ಜಿಲ್ಲಾಧಿಕಾರಿಗೆ ಕಲ್ಲು ಗಣಿ ಮಾಲೀಕರ ಮನವಿ
ನಾವು ಕಾನೂನಾತ್ಮಕವಾಗಿಯೇ ಕೆಲಸ ಮಾಡುತ್ತಿದ್ದೇವೆ. ಒಂದು ವೇಳೆ ಅಕ್ರಮ ನಡೆಯುತ್ತಿದೆ ಎಂದಾದರೆ ದಯವಿಟ್ಟು ಸಕ್ರಮಗೊಳಿಸುವ ಮಾರ್ಗ ತೋರಿಸಿ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವಿನಂತಿಸಿದ್ದಾರೆ.
ಮಂಡ್ಯ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪವನ್ನು ಗಣಿ ಉದ್ಯಮಿಗಳು ಸಾರಾಸಗಟಾಗಿ ನಿರಾಕರಿಸಿದ್ದಾರೆ. ನಾವು ಕಾನೂನಾತ್ಮಕವಾಗಿಯೇ ಕೆಲಸ ಮಾಡುತ್ತಿದ್ದೇವೆ. ಒಂದು ವೇಳೆ ಅಕ್ರಮ ನಡೆಯುತ್ತಿದೆ ಎಂದಾದರೆ ದಯವಿಟ್ಟು ಸಕ್ರಮಗೊಳಿಸುವ ಮಾರ್ಗ ತೋರಿಸಿ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವಿನಂತಿಸಿದ್ದಾರೆ.
ಅಕ್ರಮ ನಡೆದಿದೆ ಎಂದಾದರೆ ದಂಡ ಹಾಕಿ ಸಕ್ರಮ ಮಾಡಿಕೊಡಿ ಎಂದು ಮನವಿ ಸಲ್ಲಿಸಿದ್ದೇವೆ ಎಂದು ಮನವಿ ಸಲ್ಲಿಕೆ ನಂತರ ಗಣಿ ಉದ್ಯಮಿ ರವಿ ಬೋಜೇಗೌಡ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದರು. ಜಿಲ್ಲೆಯ ಬಹುತೇಕ ಗುತ್ತಿಗೆದಾರರು ಗಣಿಗಾರಿಕೆ ಮತ್ತು ಕ್ರಷರ್ಗಳನ್ನು ನಡೆಸುತ್ತಿದ್ದಾರೆ. ಗಣಿಯಿಂದ ಬರುತ್ತಿರುವ ಜಲ್ಲಿಕಲ್ಲು ಇತ್ಯಾದಿ ಉತ್ಪನ್ನಗಳನ್ನು ಸರ್ಕಾರಿ ಕಾಮಗಾರಿಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ಗಣಿ ಚಟುವಟಿಕೆಗಳನ್ನು ನಿರ್ಬಂಧಿಸಿರುವುದರಿಂದ ಕಳೆದ ಒಂದು ವಾರದಿಂದ ಕಾಮಗಾರಿ ನಿರ್ವಹಿಸಲು ತೊಂದರೆಯಾಗುತ್ತಿದೆ. ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಕುಳಿತಿದ್ದಾರೆ. ವೇತನ ಕೊಡಲು ಸಾಧ್ಯವಾಗದೆ, ಬ್ಯಾಂಕ್ ಇಎಂಐ ಕಟ್ಟಲಾಗದೆ ಉದ್ಯಮಿಗಳು ಸಂಕಷ್ಟ ಸ್ಥಿತಿ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ವಿನಂತಿಸಿದ್ದೇವೆ ಎಂದು ತಿಳಿಸಿದರು.
ನಾವು ಸದಾ ಕಾನೂನು ಪ್ರಕಾರವೇ ಕೆಲಸ ಮಾಡುತ್ತಿದ್ದೇವೆ. ಕೆಆರ್ಎಸ್ ಸುರಕ್ಷತೆ ಉದ್ದೇಶದಿಂದ ಟ್ರಯಲ್ ಬ್ಲಾಸ್ಟ್ ವಿಚಾರ ಪ್ರಸ್ತಾಪಿಸಿದ ಅವರು, 2018ರಿಂದಲೂ ಈ ಸಂಬಂಧ ಸರ್ಕಾರಕ್ಕೆ ಮನವಿ ಮಾಡ್ತಿದ್ದೇವೆ. ನಾವೂ ಸಹ ಇದೇ ಜಿಲ್ಲೆಯ ರೈತರ ಮಕ್ಕಳು. ನಾವೇನು ಹೊರದೇಶದಿಂದ ಬಂದಿಲ್ಲ. ಕೆಆರ್ಎಸ್ ಅಣೆಕಟ್ಟು ನಮ್ಮ ಜೀವ-ಜೀವನಾಡಿ. ಜಲಾಶಯಕ್ಕೆ ದ್ರೋಹ ಮಾಡಿದರೆ ಹೆತ್ತತಾಯಿಗೆ ದ್ರೋಹ ಮಾಡಿದ ಹಾಗಾಗುತ್ತೆ ಎಂದು ಅಭಿಪ್ರಾಯಪಟ್ಟರು.
ನಮ್ಮಿಂದಾಗಿ ಕೆಆರ್ಎಸ್ ಅಣೆಕಟ್ಟೆಗೆ ಸ್ವಲ್ಪವೇ ತೊಂದರೆಯಾದರೂ ನಾವು ಯಾವುದೇ ಷರತ್ತಿಲ್ಲದೆ ನಾವು ಬೇಬಿ ಬೆಟ್ಟದಿಂದ ಕ್ರಷರ್ಗಳನ್ನು ತೆಗೆಯುತ್ತೇವೆ. ಪದೇಪದೆ ಅಕ್ರಮ ಗಣಿಗಾರಿಕೆ ಎನ್ನುತ್ತಾ ಆರೋಪಗಳನ್ನು ಮಾಡುತ್ತಿದ್ದಾರೆ. ಅಕ್ರಮ ಅಥವಾ ಸಕ್ರಮ ಎನ್ನುವುದು ಸರ್ಕಾರದ ಕೈಲೇ ಇದೆ. ಅಕ್ರಮ ಮಾಡಲು ಯಾಕ್ ಬಿಡ್ತಾರೆ ಇವರು ಎಂದು ಪ್ರಶ್ನಿಸಿದರು.
(Crusher Owners in Mandya Claims they have not done anything wrong)
ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ತಡೆಯುವುದು ಕಷ್ಟ, ಆದರೆ ನಮ್ಮ ಹೋರಾಟ ಮುಂದುವರಿಸುತ್ತೇವೆ; ಸಂಸದೆ ಸುಮಲತಾ
ಇದನ್ನೂ ಓದಿ: ಅಧಿಕಾರಿಗಳು ಕೊಡುವುದು ರಿಪೋರ್ಟ್; ನಮಗೆ ಬೇಕಾಗಿರುವುದು ಸರ್ಟಿಫಿಕೇಟ್: ಕೆಆರ್ಎಸ್ ಡ್ಯಾಂ ಬಗ್ಗೆ ಪಟ್ಟು ಬಿಡದ ಸುಮಲತಾ