ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ‘ಏರೋ ಇಂಡಿಯಾ 2021’ ಏರ್ ಶೋ ನಡೆಯುತ್ತಿದೆ. ಏರ್ ಶೋ ಬಗ್ಗೆ ಕರ್ನಾಟಕದ ಇಬ್ಬರು ಪೈಲಟ್ಗಳು ಟಿವಿ9 ತಂಡದೊಂದಿಗೆ ಚಿಟ್ಚಾಟ್ ಮಾಡಿದ್ದಾರೆ. ಸೂರ್ಯಕಿರಣ್ ಹಾಗೂ ಸಾರಂಗ್ ತಂಡದ ಇಬ್ಬರು ಪೈಲಟ್ಗಳು ಮಾತನಾಡಿದ್ದಾರೆ.
ಬಾಗಲಕೋಟೆಯ ಗಿರೀಶ್, ತುಮಕೂರಿನ ನಾಗೇಂದ್ರ ಎಂಬ ಇಬ್ಬರು ಕರ್ನಾಟಕದ ಪೈಲಟ್ಗಳು ಈ ತಂಡದ ಭಾಗವಾಗಿದ್ದಾರೆ. ಕನ್ನಡಿಗರು ಅನ್ನೋದು ನಮಗೊಂದು ಹೆಮ್ಮೆ ಎಂದು ಸಾರಂಗ್ ಹಾಗೂ ಸೂರ್ಯಕಿರಣ್ ತಂಡದ ಫೈಲಟ್ಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಪ್ರದರ್ಶನ ನೀಡೋದು ಭಾರೀ ಖುಷಿ ತಂದಿದೆ. ನಾವು ಮೊದಲು ಇದೇ ಏರ್ಪೋರ್ಟ್ ಹೊರಗಿನಿಂದ ವಿಮಾನ ಹಾರಾಟಗಳನ್ನು ನೋಡುತ್ತಿದ್ದೆವು. ಈಗ ನಾವೇ ವಿಮಾನ ಚಲಾಯಿಸಿರುವುದು ಖುಷಿ ತಂದಿದೆ ಎಂದಿದ್ದಾರೆ. ಭಾರೀ ಕಠಿಣ ಪರಿಶ್ರಮದ ನಂತರ ಪ್ರದರ್ಶನ ನೀಡ್ತಾ ಇದ್ದೇವೆ. ಇದು ನನ್ನ ಕೊನೆಯ ಏರೋ ಶೋ ಎಂದು ಪೈಲಟ್ ಗಿರೀಶ್ ತಿಳಿಸಿದ್ದಾರೆ.
Aero India 2021: ಆಗಸದಲ್ಲಿ ಆತ್ಮನಿರ್ಭರ ಪರಿಕಲ್ಪನೆ ಮೂಡಿಸಿದ ಏರ್ಕ್ರಾಫ್ಟ್!