AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Traffic Updates: ಏರೋ ಇಂಡಿಯಾ ಶೋ; ಬೆಂಗಳೂರಿಗರೇ ಐದು ದಿನ ಈ ಕೆಲ ಮಾರ್ಗಬದಲಾವಣೆ ಗಮನಿಸಿ

Aero India Show 2023: ಯಲಹಂಕ ವಾಯುನೆಲೆಯಲ್ಲಿ ಐದು ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯುತ್ತಿರುವುದರಿಂದ ಈ ಭಾಗ ಹಾಗೂ ಇಲ್ಲಿಂದ ಹಾದು ಹೋಗುವ ವಾಹನಗಳ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಟ್ರಾಫಿಕ್ ಇಲಾಖೆ ಸೂಚಿಸಿದೆ

Traffic Updates: ಏರೋ ಇಂಡಿಯಾ ಶೋ; ಬೆಂಗಳೂರಿಗರೇ ಐದು ದಿನ ಈ ಕೆಲ ಮಾರ್ಗಬದಲಾವಣೆ ಗಮನಿಸಿ
ಬೆಂಗಳೂರು ಟ್ರಾಫಿಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 13, 2023 | 11:15 AM

Share

ಬೆಂಗಳೂರು: 14ನೇ ಏರೋ ಇಂಡಿಯಾ ಶೋ (Aero India Show) ಉದ್ಘಾಟನೆಯಾಗಿದೆ. ಫೆಬ್ರುವರಿ 17ರವರೆಗೆ ಈ ವೈಮಾನಿಕ ಪ್ರದರ್ಶನ ನಡೆಯುತ್ತಿರುವುದರಿಂದ ಐದು ದಿನಗಳ ಕಾಲ ಬೆಂಗಳೂರಿನ ವಾಹನ ಸವಾರರು ಕೆಲ ಮಾರ್ಗ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ಏರ್​ಪೋರ್ಟ್ ಮಾರ್ಗದಲ್ಲಿ ವಾಹನ ದಟ್ಟನೆ ಹೆಚ್ಚಿರುವುದರಿಂದ ಏರ್​ಪೋರ್ಟ್​ಗೆ ಹೋಗುವ ಪ್ರಯಾಣಿಕರು ಐದು ದಿನ ಬೇಗನೇ ಮನೆ ಬಿಡುವುದು ಒಳ್ಳೆಯದು ಎಂದು ಸಂಚಾರ ಪೊಲೀಸ್ ಇಲಾಖೆ ಹೇಳಿದೆ.

ಯಲಹಂಕ ವಾಯುನೆಲೆಯು ಬಳ್ಳಾರಿ ರಸ್ತೆಯಲ್ಲಿರುವುದರಿಂದ ಏರ್​ಪೋರ್ಟ್​ಗೆ ಹೋಗುವವರು ಈ ರಸ್ತೆ ಬದಲು ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ. ಹೆಣ್ಣೂರು ಜಂಕ್ಷನ್ ಮಾರ್ಗವಾಗಿ ವಿಮಾನ ನಿಲ್ದಾಣ ತಲುಪಬಹುದು ಎಂದು ಪ್ರಯಾಣಿಕರಿಗೆ ವಿನಂತಿಸಲಾಗಿದೆ.

ಇಂದು ಉದ್ಘಾಟನೆಯ ದಿನ ಸಂಚಾರ ಅಸ್ತವ್ಯಸ್ತ ತಪ್ಪಿಸಲು ಪೊಲೀಸ್ ಇಲಾಖೆ ಯಲಹಂಕ ಸುತ್ತಮುತ್ತ ಅಗತ್ಯ ಕ್ರಮ ಕೈಗೊಂಡಿತ್ತು. ಫೆಬ್ರುವರಿ 13ರಂದು ಬೆಳಗ್ಗೆ 8ರಿಂದ 11:30ವರೆಗೆ ಬಳ್ಳಾರಿ ರಸ್ತೆಯ ಎಸ್ಟೀಮ್ ಮಾಲ್​ನಿಂದ ಎಲಿವೇಟೆಡ್ ರಸ್ತೆಯಲ್ಲಿ (Elevated Road Stretch) ವಾಹನಗಳ ಚಾಲನೆಗೆ ನಿಷೇಧ ಹಾಕಲಾಯಿತು. ಕಾರ್ಯಕ್ರಮದ ಪಾಸ್ ಹೊಂದಿರುವ ವಾಹನಗಳಿಗೆ ಮಾತ್ರ ಈ ರಸ್ತೆಯಲ್ಲಿ ಪ್ರವೇಶ ನೀಡಲಾಯಿತು.

ಯಲಹಂಕ ಹಾಗು ಸುತ್ತಲ ಪ್ರದೇಶಗಳಿಗೆ ಹೋಗಬೇಕಾದ ಜನರು ಎಲಿವೇಟೆಡ್ ರಸ್ತೆ ಬದಲು ಕೆಳಗಿನ ಸರ್ವಿಸ್ ರಸ್ತೆಯನ್ನು ಬಳಸಬೇಕು. ವಿಮಾನ ನಿಲ್ದಾಣಕ್ಕೆ ಹೋಗಬೇಕೆನ್ನುವವರು ಹೆಣ್ಣೂರು ಜಂಕ್ಷನ್ ಮೂಲಕ ಪರ್ಯಾಯ ಮಾರ್ಗ ಬಳಸಬೇಕು ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಮಾಧ್ಯಮಗಳಿಗೆ ಪ್ರಕಟಣೆ ಹೊರಡಿಸಿತ್ತು. ಅದರಿಂದಾಗಿ ಹೆಬ್ಬಾಳ, ಯಲಹಂಕ ಸುತ್ತಮುತ್ತ ದೊಡ್ಡ ಮಟ್ಟದ ಟ್ರಾಫಿಕ್ ಸೇರುವುದು ತಪ್ಪಿದೆ.

ಏರ್​ಪೋರ್ಟ್​ಗೆ ಹೋಗಲು ಪರ್ಯಾಯ ಮಾರ್ಗಗಳು:

ಏರ್​ಪೋರ್ಟ್​ಗೆ ಹೋಗುವ ರಸ್ತೆಯಲ್ಲಿ ದೊಡ್ಡ ವಾಹನಗಳ ಸಂಚಾರಕ್ಕೆ ಐದು ದಿನಗಳು ಅವಕಾಶ ನಿರಾಕರಿಸಲಾಗಿದೆ. ಬೆಂಗಳೂರಿನ ಪೂರ್ವಭಾಗದಿಂದ ಏರ್​ಪೋರ್ಟ್​ಗೆ ಹೋಗುವ ಪ್ರಯಾಣಿಕರು ಕೆಆರ್ ಪುರಂ ಹೆಣ್ಣೂರು ಕ್ರಾಸ್, ಮ್ಯಾಲನಹಳ್ಳಿ, ಬೇಗೂರು ಬ್ಯಾಕ್ ಗೇಟ್ ಮೂಲಕ ಏರ್​ಪೋರ್ಟ್ ತಲುಪಬಹುದು.

ಪಶ್ಚಿಮ ಭಾಗದಿಂದ ಏರ್​ಪೋರ್ಟ್​ಗೆ ಹೋಗುವವರು ಗೊರಗುಂಟೆ ಪಾಳ್ಯ, ಬಿಇಎಲ್ ಸರ್ಕಲ್, ಗಂಗಮ್ಮ ಸರ್ಕಲ್, ಮದರ್ ಡೈರಿ, ಉನ್ನಿಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗನಹಳ್ಳಿ, ಎಂವಿಐಟಿ, ವಿದ್ಯಾನಗರ್ ಕ್ರಾಸ್ ಮೂಲಕ ಹಾದು ಹೋಗಬಹುದು.

ಬೆಂಗಳೂರು ದಕ್ಷಿಣ ಭಾಗದಿಂದ ಏರ್​ಪೋರ್ಟ್​ಗೆ ಹೋಗಲು ಮೈಸೂರು ರಸ್ತೆ, ನಾಯಂಡಹಳ್ಳಿ, ಚಂದ್ರಲೇಔಟ್, ಗೊರಗುಂಟೆ ಪಾಳ್ಯ, ಬಿಇಎಲ್ ಸರ್ಕಲ್, ಗಂಗಮ್ಮ ಸರ್ಕಲ್, ಮದರ್ ಡೈರಿ, ಉನ್ನಿಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗನಹಳ್ಳಿ, ಎಂವಿಐಟಿ ಕ್ರಾಸ್ ಮತ್ತು ವಿದ್ಯಾನಗರ್ ಕ್ರಾಸ್ ಈ ಮಾರ್ಗ ಬಳಸಬಹುದು.

ದೊಡ್ಡ ವಾಹನಗಳಿಗೆ ಪ್ರತ್ಯೇಕ ಮಾರ್ಗಗಳು:

ಬಳ್ಳಾರಿ ರಸ್ತೆಯಲ್ಲಿ ದೊಡ್ಡ ವಾಹನಗಳ ಸಂಚಾರವನ್ನು ಫೆಬ್ರುವರಿ 17ರವರೆಗೂ ತಡೆಯಲಾಗಿದೆ. ಹೈದರಾಬಾದ್ ಮತ್ತು ಚಿಕ್ಕಬಳ್ಳಾಪುರದಿಂದ ಬರುವ ದೊಡ್ಡ ವಾಹನಗಳು ಹಾಗೂ ಖಾಸಗಿ ವಾಹನಗಳು ದೇವನಹಳ್ಳಿ ಬಳಿ ದೊಡ್ಡಬಳ್ಳಾರಪುರ ಕ್ರಾಸ್​ನಿಂದ ತಿರುವು ತೆಗೆದುಕೊಂಡು ರಾಹೆ4 ತುಮಕೂರು ಪುಣೆ ರಸ್ತೆ ಕಡೆ ಹೋಗಬಹುದು.

ತುಮಕೂರು ರಸ್ತೆ ಕಡೆಯಿಂದ ಬರುವ ದೊಡ್ಡ ವಾಹನಗಳು ಸಿಎಂಟಿಐ ಜಂಕ್ಷನ್ ಬಳಿ ಡೈವರ್ಶನ್ ತೆಗೆದುಕೊಂಡು ರಿಂಗ್ ರಸ್ತೆಯತ್ತ ಸಾಗಿ ನೈಸ್ ರಸ್ತೆ ತಲುಪಬಹುದು.

ತೋಟಗೆರೆ ಬಸವಣ್ಣ ದೇವಸ್ಥಾನ ಕಡೆಯಿಂದ ಬರುವ ವಾಹನಗಳು ದೊಡ್ಡಬಳ್ಳಾಪುರ ದೇವನಹಳ್ಳಿ ರಸ್ತೆ ಮೂಲಕ ಹೊಸಕೋಟೆಯತ್ತ ಹೋಗಬಹುದು. ನೆಲಮಂಗಲದಿಂದ ಬರುವವವರು ಸೊಂಡೇಕೊಪ್ಪ ಮೂಲಕ ನೈಸ್ ರಸ್ತೆ ತಲುಪಬಹುದು.

ಚಿಕ್ಕಬಾಣಾವರ ಮೂಲಕ ಬರುವ ವಾಹನಗಳು ತೋಟಗೆರೆ ಬಸವಣ್ಣ ದೇವಸ್ಥಾನದತ್ತ ಯೂಟರ್ನ್ ಪಡೆದು ಅಲ್ಲಿಂದ ದೊಡ್ಡಬಳ್ಳಾಪುರ ದೇವನಹಳ್ಳಿ ರಸ್ತೆ ಮೂಲಕ ಹೊಸಕೋಟೆ ತಲುಪಬಹುದು. ನೆಲಮಂಗಲದಿಂದ ಬರುವ ವಾಹನಗಳು ಸೊಂಡೇಕೊಪ್ಪ ಮೂಲಕ ರೈಸ್ ರಸ್ತೆ ತಲುಪಬಹುದು.

ಇನ್ನುಳಿದಂತೆ ಬೆಂಗಳೂರಿನ ಬೇರೆ ಪ್ರದೇಶಗಳಲ್ಲಿ ವಾಹನ ಸಂಚಾರಿಗಳಿಗೆ ಯಾವುದೇ ತಲೆನೋವು ಇರುವುದಿಲ್ಲ. ಯಲಹಂಕದತ್ತ ಅಥವಾ ಅದರ ಮೇಲೆ ಹಾದು ಹೋಗುವ ವಾಹನ ಸವಾರರು ಮಾತ್ರ ಸಾಧ್ಯವಾದಷ್ಟೂ ಪರ್ಯಾಯ ಮಾರ್ಗಗಳನ್ನು ಬಳಸುವುದು ಅಗತ್ಯ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!