ಕೊರೊನಾ ಬಳಿಕ ಗ್ರಾಮೀಣ ಬಡ ವಿದ್ಯಾರ್ಥಿನಿಯರ ಶುಚಿ ನ್ಯಾಪ್ಕಿನ್ ಯೋಜನೆಯನ್ನೇ ಮರೆತ ಆರೋಗ್ಯ ಇಲಾಖೆ
ಗ್ರಾಮೀಣ ಬಡ ವಿದ್ಯಾರ್ಥಿನಿಯರ ಶ್ರೇಯೋಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಬಚಾವೋ ಭೇಟಿ ಪಢಾವೋ ಎನ್ನುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ರಾಜ್ಯ ಸರ್ಕಾರವು ಶುಚಿ ನ್ಯಾಪ್ಕಿನ್ ಯೋಚನೆಯನ್ನು ಅನುಷ್ಠಾನಕ್ಕೆ ತಂದಿದೆ. ವಿಪರ್ಯಾಸವೆಂದರೆ ಕೊರೊನಾದ ನಂತರದ ದಿನಗಳಿಂದ ರಾಜ್ಯ ಸರ್ಕಾರ ಬಡ ವಿದ್ಯಾರ್ಥಿನಿಯರಿಗೆ ಶುಚಿಯಾದ ನ್ಯಾಪ್ಕಿನ್ ಕೊಡುವ ಯೋಜನೆಯನ್ನೇ ಮರೆತಿದೆ.
ಗ್ರಾಮೀಣ ಬಡ ವಿದ್ಯಾರ್ಥಿನಿಯರ ಶ್ರೇಯೋಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಬಚಾವೋ ಭೇಟಿ ಪಢಾವೋ ಎನ್ನುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ರಾಜ್ಯ ಸರ್ಕಾರವು ಶುಚಿ ನ್ಯಾಪ್ಕಿನ್ ಯೋಚನೆಯನ್ನು ಅನುಷ್ಠಾನಕ್ಕೆ ತಂದಿದೆ. ವಿಪರ್ಯಾಸವೆಂದರೆ ಕೊರೊನಾದ ನಂತರದ ದಿನಗಳಿಂದ ರಾಜ್ಯ ಸರ್ಕಾರ ಬಡ ವಿದ್ಯಾರ್ಥಿನಿಯರಿಗೆ ಶುಚಿಯಾದ ನ್ಯಾಪ್ಕಿನ್ ಕೊಡುವ ಯೋಜನೆಯನ್ನೇ ಮರೆತಿದೆ.
ಯೋಜನೆ ಘೋಷಣೆಗೆ ತೋರಿದ ಆಸಕ್ತಿಯನ್ನು ಅನುಷ್ಠಾನದ ಸಂದರ್ಭದಲ್ಲಿ ಸರ್ಕಾರ ತೋರಿಸದಿರುವುದು ವಿಪರ್ಯಾಸ. ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡುವಂತೆ 2020 ರ ಅಂತ್ಯದಲ್ಲಿ ಹೈಕೋರ್ಟ್ ಕೂಡ ಸರ್ಕಾರಕ್ಕೆ ಸೂಚಿಸಿತ್ತು.
ಅನುದಾನಿತ ಹಾಗೂ ಸರ್ಕಾರಿ ಹೈಸ್ಕೂಲ್ಗಳಲ್ಲಿ ಹಾಗೂ ಪಿಯು ಕಾಲೇಜುಗಳಲ್ಲಿ ಓದುತ್ತಿರುವ 10 ರಿಂದ 19 ವರ್ಷದ ವಿದ್ಯಾರ್ಥಿನಿಯರಿಗೆ ತಲಾ 10 ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ತಲಾ 21.50ರೂ.ಗಳಂತೆ ಖರೀದಿಸಿ ವಿತರಿಸುವ ಆಲೋಚನೆ ಮಾಡಿತ್ತು. ಇದಕ್ಕೆ 47 ಕೋಟಿ ರೂ ಖರ್ಚು ಮಾಡಲು ಸಚಿವ ಸಂಪುಟ 2021ರಲ್ಲಿ ಅನುಮೋದನೆ ನೀಡಿತ್ತು.
ಶಿಕ್ಷಣ ಇಲಾಖೆ ವತಿಯಿಂದ ಪ್ರೌಢಶಾಲಾ ಮಕ್ಕಳಿಗೆ, ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿನ 6ನೇ ತರಗತಿಯಿಂದ ಎಸ್‍ಎಸ್ ಎಲ್ ಸಿ ವಿದ್ಯಾರ್ಥಿನಿಯರಿಗೆ, ಅಂಗನವಾಡಿ ಹಾಗೂ ಆಶಾ ಕಾರ್ಯ ಕರ್ತೆಯರ ಮೂಲಕ 19 ವರ್ಷದ ಒಳಗಿನ ಶಾಲೆಯಿಂದ ಹೊರಗುಳಿದ ಹೆಣ್ಣು ಮಕ್ಕಳಿಗೆ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಡಿ ಬರುವ ಶಾಲೆಗಳ ವಿದ್ಯಾರ್ಥಿನಿಯರಿಗೆ ಉಚಿತವಾಗಿ ನ್ಯಾಪ್ ಕಿನ್ ನೀಡಲಾಗುತ್ತಿದೆ.
ವಿದ್ಯಾರ್ಥಿನಿಯರು ತಮ್ಮ ಮುಟ್ಟಿನ ಸಮಯದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ, ಆದರೆ ಅಷ್ಟು ಹಣವನ್ನು ಕೊಟ್ಟು ಖರೀದಿಸಲು ಗ್ರಾಮೀಣ ಹೆಣ್ಣುಮಕ್ಕಳಿಗೆ ಕಷ್ಟ, ಆದರೆ ಸರ್ಕಾರದ ಈ ಯೋಜನೆಯಿಂದ ತುಂಬಾ ಸಹಾಯವಾಗಿತ್ತು.
ಈ ಮೊದಲು ವರ್ಷ 10 ಅಥವಾ 13 ಸ್ಯಾನಿಟರಿ ಪ್ಯಾಡ್ಗಳನ್ನು ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿತ್ತು. ಆದರೆ ಸರ್ಕಾರವು ಈ ನ್ಯಾಪ್ಕಿನ್ ನೀಡುತ್ತಿಲ್ಲ. ಈ ಕುರಿತು ಯಾವ ಅಧಿಕಾರಿಗಳಿಗೂ ಮಾಹಿತಿ ಇಲ್ಲ, ದಕ್ಷಿಣ ಕನ್ನಡ, ಚಾಮರಾಜನಗರ ಜಿಲ್ಲೆಗಳಿಗೆ ಸರ್ಕಾರ ಮೈತ್ರಿ ಮುಟ್ಟಿನ ಕಪ್ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದೆ.
ಹಾಗೆಯೇ ಶಾಲೆಯಲ್ಲಿಯೇ ಒಂದಷ್ಟು ನ್ಯಾಪ್ಕಿನ್ಗಳನ್ನು ಸಂಗ್ರಹಿಸಿದ್ದೇವೆ ಅಗತ್ಯ ಬಿದ್ದರೆ ಅವರಿಗೆ ನೀಡುವುದಾಗಿ ಕಾರವಾರದ ಹೈಸ್ಕೂಲ್ನ ಮುಖ್ಯ ಶಿಕ್ಷಕಿ ತಿಳಿಸಿದ್ದಾರೆ.
ಶುಚಿ ನ್ಯಾಪ್ಕಿನ್ ಯೋಜನೆಯಿಂದ ಹೆಣ್ಣುಮಕ್ಕಳಿಗೆ ಅನುಕೂಲವಾಗುತ್ತಿತ್ತು. ಅವುಗಳ ವಿತರಣೆ ಏಕೆ ನಿಂತಿದೆ ಎನ್ನುವುದರ ಕುರಿತು ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಪಡೆಯಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ವಿಜಯವಾಣಿಗೆ ತಿಳಿಸಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ