ಓಲಾ, ಊಬರ್ ಕಂಪನಿಗಳಿಗೆ ಸಡ್ಡು ಹೊಡೆಯಲು ಮುಂದಾದ ಆಟೋ ಚಾಲಕರು: ‘ನಮ್ಮ ಯಾತ್ರಿ’ ನೂತನ ಆ್ಯಪ್​ ರಚಿಸಿದ ಆಟೋ ಯೂನಿಯನ್

ಆಟೋ ಯೂನಿಯನ್​ನಿಂದ ನಮ್ಮ ಯಾತ್ರಿ ಆಟೋ ಬುಕ್ಕಿಂಗ್ ಆ್ಯಪ್​ನ್ನು ಸಿದ್ಧಪಡಿಸಲಾಗಿದೆ. ಓಲಾ ಊಬರ್ ಕಂಪನಿಗಳಿಗೆ ಸಡ್ಡು ಹೊಡೆಯಲು ಆಟೋ ಚಾಲಕರು ಮುಂದಾಗಿದ್ದಾರೆ.

ಓಲಾ, ಊಬರ್ ಕಂಪನಿಗಳಿಗೆ ಸಡ್ಡು ಹೊಡೆಯಲು ಮುಂದಾದ ಆಟೋ ಚಾಲಕರು: 'ನಮ್ಮ ಯಾತ್ರಿ' ನೂತನ ಆ್ಯಪ್​ ರಚಿಸಿದ ಆಟೋ ಯೂನಿಯನ್
ನಮ್ಮ ಯಾತ್ರಿ, ನೂತನ ಆ್ಯಪ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Oct 09, 2022 | 3:42 PM

ಬೆಂಗಳೂರು: ಓಲಾ ಊಬರ್ ಕಂಪನಿಗಳಿಗೆ ಸಡ್ಡು ಹೊಡೆಯಲು ಆಟೋ ಚಾಲಕರು ಮುಂದಾಗಿದ್ದು, ಆಟೋ ಯೂನಿಯನ್ (Auto Union) ​ನಿಂದ ನೂತನ ಆ್ಯಪ್​ ರಚಿಸಿದ್ದಾರೆ. ಒಂದು ಕಡೆ ಆಟೋ ಚಾಲಕರಿಗೆ ವಂಚನೆಯಾಗುತ್ತಿದ್ದು, ಮತ್ತೊಂದು ಕಡೆ ಗ್ರಾಹಕರಿಗೂ  ಓಲಾ ಊಬರ್ ವಂಚನೆ ಮಾಡುತ್ತಿವೆ ಎನ್ನಲಾಗುತ್ತಿದೆ. ಇದರಿಂದ ಬೇಸತ್ತು ಯಾವುದೇ ಮಧ್ಯವರ್ತಿ ಇಲ್ಲದೆ ನಮ್ಮ ಯಾತ್ರಿ (Namma Yatri) ಅನ್ನೋ ಆಟೋ ಬುಕ್ಕಿಂಗ್ ಆ್ಯಪ್​ನ್ನು ಸಿದ್ಧಪಡಿಸಿದ್ದು, ನವೆಂಬರ್ ತಿಂಗಳಲ್ಲಿ ಆಟೋ ಯುನಿಯನ್‌ ಆ್ಯಪ್ ಬಿಡುಗಡೆ ಮಾಡುತ್ತಿದೆ. ಸರ್ಕಾರ ನಿಗದಿ ಮಾಡಿರುವ ಹಣವಷ್ಟೇ ಚಾರ್ಜ್ ಮಾಡಲು ನಿರ್ಧಾರ ಮಾಡಲಾಗಿದೆ. 2 ಕಿಲೋಮೀಟರ್​ಗೆ ಕೇವಲ 30 ರೂಪಾಯಿ. ಬುಕ್ಕಿಂಗ್ ಚಾಚ್೯ 10 ರೂಪಾಯಿ ಸೇರಿ ಒಟ್ಟು 40 ರೂಪಾಯಿಯಲ್ಲಿ ನೀವು ಕರೆದ ಕಡೆ, ನಿಗದಿತ ಕಿಲೋಮೀಟರ್​ಗಿಂತ ದೂರ ಸಂಚಾರ ಮಾಡಬಹು. 1ಕಿಲೋಮೀಟರ್​ಗೆ 15 ರೂಪಾಯಿ ನಿಗದಿಯಾಗಿದ್ದು, ಆಟೋ ಯುನಿಯನ್‌ ಬಿಡುಗಡೆಯಾಗುತ್ತಿರುವ ಬಗ್ಗೆ ಆಟೋ ಚಾಲರಿಂದಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಒಲಾ- ಒಬರ್ ಕಂಪನಿಗಳು ಮಾಡುತ್ತಿರುವ ತಪ್ಪಿಗೆ ಆಟೋ ಚಾಲಕರಿಗೆ ಕೆಟ್ಟ ಹೆಸರಿದೆ. ಹೆಚ್ಚು ಹಣ ತೆಗೆದುಕೊಳ್ಳುತ್ತಾರೆ ಅಂತ ಗ್ರಾಹಕರು ದೂರುತ್ತಾರೆ. ಇದೀಗಾ ನಮ್ಮದೇ ಯುನಿಯನ್ ಇಂದ ಆ್ಯಪ್ ಬಿಡುಗಡೆ ಮಾಡುತ್ತಿರುವುದು ಖಷಿ ಇದೆ. ಆಟೋ ಚಾಲಕರ ಸಮಸ್ಯೆ ಏನು ಅಂತ ಯುನಿಯನ್​ಗೆ ಗೊತ್ತಿದೆ. ನಮ್ಮ ಯಾತ್ರಿ ಆ್ಯಪ್​ಗೆ ಸಪೋರ್ಟ್ ಮಾಡುತ್ತೇವೆ ಎಂದು ಆಟೋ ಚಾಲಕರು ಹೇಳುತ್ತಿದ್ದಾರೆ.

ನೋಟಿಸ್ ಕೊಟ್ಟು ಮೂರು ದಿನವಾದ್ರು ಪ್ರತಿಕ್ರಿಯೆ ನೀಡದ ಕಂಪನಿಗಳು

ಬೆಂಗಳೂರಿನಲ್ಲಿ ಆಟೋ ಸೇವೆಗೆ ಮೀಡಿಯೇಟರ್ ಆಗಿರುವ ಓಲಾ-ಉಬರ್ ಸಂಸ್ಥೆಗಳು ಪ್ಲಾಟ್​ಫಾರ್ಮ್ ಹೆಸರಲ್ಲಿ ಗ್ರಾಹಕರ ಬಳಿ ಸುಲಿಗೆ ಮಾಡುತ್ತಿವೆ. ಸ್ವತಃ ಸಾರಿಗೆ ಇಲಾಖೆಯೇ ಆನ್​ಲೈನ್ ಆಟೋ ಸೇವೆ ಅಕ್ರಮ ಅಂತ ಹೇಳಿದೆ. ತಮ್ಮ ಸೇವೆ ನಿಲ್ಲಿಸುವಂತೆ ತಾಕೀತು ಮಾಡಿ ನೋಟಿಸ್ ನೀಡಿದೆ. ಆದರೆ ಓಲಾ, ಉಬರ್ ಸಂಸ್ಥೆಗಳು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಡೋಂಟ್ ಕೇರ್ ಅಂತಿವೆ. ಓಲಾ, ಉಬರ್, ರಾಪಿಡೋ ವಿರುದ್ಧ ಸಾಲು ಸಾಲು ದೂರುಗಳು ಕೇಳಿ ಬರ್ತಿವೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಇಷ್ಟು ವರ್ಷ ಸುಮ್ಮನೆ ಕುಳಿತಿದ್ದ ಅಧಿಕಾರಿಗಳು ಈಗ, ನಾವು ಕ್ಯಾಬ್ ಸೇವೆಗೆ ಮಾತ್ರ ಅನುಮತಿ ಕೊಟ್ಟಿರೋದು. ಆಟೋ ಸೇವೆ ನಿಲ್ಲಿಸಿ ಅಂತ ಓಲಾ, ಉಬರ್, ರ್ಯಾಪಿಡೋಗೆ ನೋಟಿಸ್ ನೀಡಿ 3 ದಿನ ಗಡುವು ನೀಡಿತ್ತು. ಆದ್ರೆ ಕೊಟ್ಟ ಕಾಲಾವಕಾಶ ಮುಗಿದ್ರೂ ಅಧಿಕಾರಿಗಳು ಯಾವುದೇ ನಿರ್ದಾಕ್ಷೀಣ್ಯ ಕ್ರಮ ಕೈಗೊಂಡಿಲ್ಲ.

ಓಲಾ, ಉಬರ್​ ಕಂಪನಿಗಳು ಕ್ಯಾಬ್ ಅಗ್ರಿಗೇಟರ್ ಪರವಾನಗಿ ಮಾತ್ರ ಹೊಂದಿವೆ. ಆದ್ರೆ ನಿಯಮ ಗಾಳಿಗೆ ತೂರಿ ಟ್ಯಾಕ್ಸಿ ಜೊತೆ ಆಟೋ ಸೇವೆ ನೀಡ್ತಿದೆ. ಸರ್ಕಾರ ಆಟೋ ಪ್ರಯಾಣಕ್ಕೆ ದರ ನಿಗದಿ ಮಾಡಿದೆ. ಆಟೋರಿಕ್ಷಾಗಳಿಗೆ ಮೊದಲ 2 ಕಿ.ಮೀ.ಗಳಿಗೆ 30 ರೂಪಾಯಿ, 2 ಕಿಲೋ ಮೀಟರ್ ಬಳಿಕ ಪ್ರತಿ ಕಿಲೋ ಮೀಟರ್​ಗೆ 15 ರೂಪಾಯಿ ನಿಗದಿ ಮಾಡಿದೆ. ರಾತ್ರಿ 10 ಗಂಟೆ ಬಳಿಕ ಬೆಳಗ್ಗೆ 5 ಗಂಟೆವರೆಗೂ ಬಾಡಿಗೆ ಶೇ.50ರಷ್ಟು ಹೆಚ್ಚಿಸಬಹುದು ಎಂದು ಹೇಳಿದೆ. ಆದ್ರೆ ಈ ನಿಯಮ ಅಗ್ರಿಗೇಟರ್ ಟ್ಯಾಕ್ಸಿ ಕಂಪನಿಗಳಿಗೆ ಅನ್ವಯಿಸಲ್ಲ. ಯಾಕಂದ್ರೆ ಓಲಾ, ಉಬರ್ ಬಳಿ ಇರೋದು ಟ್ಯಾಕ್ಸಿ ಸೇವೆಯ ಲೈಸನ್ಸ್. ಹೀಗಾಗಿ ಗ್ರಾಹಕರ ಬಳಿ ಓಲಾ, ಉಬರ್, ರಾಪಿಡೋ ಸುಲಿಗೆ ಮಾಡ್ತಿವೆ. 2 ಕಿ.ಮೀಟರ್​ಗೆ 100 ರೂಪಾಯಿ ಪಡೆದು, ಆಟೋ ಚಾಲಕರಿಗೆ 60 ರೂಪಾಯಿ ನೀಡಿ 40 ರೂಪಾಯಿ ಜೇಬಿಗೆ ಇಳಿಸ್ತಿವೆ.

ಇನ್ನು ಈ ಆ್ಯಪ್​ಗಳ ಆಟಾಟೋಪ ಆಟೋ ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಪ್ರಯಾಣಿಕರು ಆಟೋ ಹತ್ತಲು ಹಿಂದೇಟು ಹಾಕ್ತಿದ್ದಾರೆ ಅಂತ ಆಟೋ ಚಾಲಕರು ಸಹ ಅಳಲು ತೋಡಿಕೊಂಡಿದ್ದಾರೆ. ಈ ಬ್ಲೇಡ್ ಕಂಪನಿಗಳ ಕಳ್ಳಾಟ ಸಾರಿಗೆ ಇಲಾಖೆಯ ಗಮನಕ್ಕೂ ಬಂದಿದೆ. ಅಕ್ರಮ ನಡೀತಿದೆ, ಕಾನೂನು ಉಲ್ಲಂಘನೆ ಆಗ್ತಿದೆ ಎಂದು ತಿಳಿದಿದ್ದರೂ ಸಾರಿಗೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಸಾರ್ವಜನಿಕರು ಈ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದಂತೆ ಓಲಾ, ಉಬರ್, ರಾಪಿಡೋ ಆಟೋ ಸೇವೆಯೇ ಅಕ್ರಮ. ನಿಮ್ಮ ಸೇವೆ ನಿಲ್ಲಿಸಿ ಅಂತ ನೋಟಿಸ್ ನೀಡಿದೆ. ಸಾರಿಗೆ ಅಧಿಕಾರಿಗಳು ಕೊಟ್ಟ 3 ದಿನಗಳ ಗಡುವು ನೀಡಿದ್ರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:41 pm, Sun, 9 October 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ