AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದ 10 ವರ್ಷದಲ್ಲಿ ಆನೆದಾಳಿಗೆ ಕರ್ನಾಟಕದಲ್ಲಿ 42 ಜನರ ಸಾವು: ಕೇಂದ್ರ ಸರ್ಕಾರ

ರಾಜ್ಯದಲ್ಲಿ ಕಳೆದ 10 ವರ್ಷದಲ್ಲಿ ಆನೆ ದಾಳಿಯಿಂದ 42 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕಳೆದ 10 ವರ್ಷದಲ್ಲಿ ಆನೆದಾಳಿಗೆ ಕರ್ನಾಟಕದಲ್ಲಿ 42 ಜನರ ಸಾವು: ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on:Apr 04, 2023 | 7:38 AM

Share

ಬೆಂಗಳೂರು: ಚಾಮರಾಜನಗರ (Chamrajnagar), ಕೊಡಗು (Kodagu), ಹಾಸನ (Hassan) , ದಕ್ಷಿಣ ಕನ್ನಡ (Dakshin Kannada) ಹೀಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆನೆದಾಳಿ (Elephant Attack) ಸಂಭವಿಸುತ್ತಿವೆ. ಆನೆ ದಾಳಿಯಿಂದ ಪ್ರಾಣಕಳೆದುಕೊಂಡಿದ್ದಾರೆ. ಇನ್ನು ಕೆಲವರು ಗಾಯಗೊಂಡಿದ್ದಾರೆ. ಅಲ್ಲದೇ ಗದ್ದೆಗಳು ನಾಶಗೊಂಡಿವೆ. ಈ ಬಗ್ಗೆ ರಾಜ್ಯ ಸರ್ಕಾರ (Karnataka Government) ಹಲವು ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಕಳೆದ 10 ವರ್ಷದಲ್ಲಿ ಆನೆ ದಾಳಿಯಿಂದ 42 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ (Central Government) ತಿಳಿಸಿದೆ.

ಲೋಕಸಭೆಯಲ್ಲಿ, ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರು ಕೇಳಿದ ಲಿಖಿತ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಕರ್ನಾಟಕ ಸರ್ಕಾರ ಕಾನೆಯಿಂದ ಸಾವನ್ನಪ್ಪಿದ್ದವರಿಗೆ ನೀಡುವ ಪರಿಹಾರ ಹಣವನ್ನು 7.50 ಲಕ್ಷ ರೂ. ನಿಂದ 15 ಲಕ್ಷ ರೂ.ಗೆ ಏರಿಕೆ ಮಾಡಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಆನೆ ದಾಳಿಗೆ ಬಲಿಯಾದ ಕುಟುಂಬಕ್ಕೆ ಪರಿಹಾರ ಹಣ 15 ಲಕ್ಷ ರೂ.ಗೆ ಹೆಚ್ಚಳ, ಸರ್ಕಾರ ನೌಕರಿ ಬಗ್ಗೆ ಚರ್ಚೆ: ಸಿಎಂ ಭರವಸೆ

ಕರ್ನಾಟಕ ಸರ್ಕಾರವು ಕಳೆದ 10 ವರ್ಷಗಳಲ್ಲಿ ಹಾಸನ ಜಿಲ್ಲೆಯಲ್ಲಿ 34 ಆನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲಾಗಿದೆ. ಹಾಗೇ ಚಿರತೆ ದಾಳಿಯಿಂದಾಗಿ 2019 ರವರೆಗೆ ಕರ್ನಾಟಕದಲ್ಲಿ ಒಟ್ಟು 15 ಜನರು ಸಾವನ್ನಪ್ಪಿದ್ದಾರೆ ಎಂದು ಸಚಿವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:33 am, Tue, 4 April 23