ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಆತಂಕ.. ಹೀಗೆಯೇ ಮುಂದುವರಿದ್ರೆ ಮುಂದೆ ಐತೆ ಮಾರಿಹಬ್ಬ, ತಜ್ಞರು ಹೇಳಿದ್ದೇನು?
ಕೊರೊನಾ ಕಡಿಮೆಯಾಗಿದೆ ಎಂದು ಜನ ಕೊರೊನಾ ಬಗ್ಗೆ ನಿರ್ಲಕ್ಷ್ಯ ಮಾಡಿದ್ದು, ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸದ್ಯ ಈಗ ಒಟ್ಟು ಆರೂವರೆ ಸಾವಿರಕ್ಕೂ ಅಧಿಕ ಸಕ್ರಿಯ ಸೋಂಕಿತರು ಬೆಂಗಳೂರಿನಲ್ಲಿ ಇದ್ದಾರೆ. ಸೋಂಕಿತರ ಸಂಖ್ಯೆ ಏರಿಕೆ ಹಿನ್ನಲೆಯಲ್ಲಿ ಕ್ಲೋಸ್ ಆಗಿದ್ದ ಕೋವಿಡ್ ಕೇರ್ ಸೆಂಟರ್ಗಳನ್ನು ಓಪನ್ ಮಾಡಲು ಬಿಬಿಎಂಪಿ ಮುಂದಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಾಮಾರಿ ಕೊರೊನಾದ ಎರಡನೇ ಅಲೆ ತನ್ನ ಪ್ರಭಾವ ತೂರಿಸಲು ಶುರು ಮಾಡಿದೆ. ಹೀಗೇ ಮುಂದುವರಿದ್ರೆ ದಿನಕ್ಕೆ ಸಾವಿರ ಕೇಸ್ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಕೊರೊನಾ ಪ್ರಕರಣಗಳ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಜನರು ನಿರ್ಲಕ್ಷ್ಯವಹಿಸಿರುವುದರಿಂದ ಸೋಂಕು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಇದೇ ರೀತಿ ಕೊರೊನಾ ಪ್ರಕರಣಗಳು ಹೆಚ್ಚಾದರೆ ಕರ್ನಾಟಕ ರಾಜ್ಯದಲ್ಲಿ ಮತ್ತೆ ICUಗಳು ಭರ್ತಿಯಾಗಲಿವೆ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.
ಕೆಲ ತಿಂಗಳಿಂದ ಸುಧಾರಿಸಿಕೊಂಡಿದ್ದ ಕೊರೊನಾ ಮತ್ತೆ ತನ್ನ ಇರುವಿಕೆಯನ್ನು ತೋರಿಸುತ್ತಿದೆ. ಮಾರ್ಚ್ ತಿಂಗಳು ಆರಂಭವಾಗುತ್ತಿದ್ದಂತೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಆತಂಕವೂ ಹೆಚ್ಚುತ್ತಿದೆ. ಹೀಗಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೊರೊನಾ ಕುರಿತು ಸಭೆ ನಡೆಸಿ ಕೊರೊನಾ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದ್ದರು. ಈಗ ಮತ್ತೆ ಈ ಬಗ್ಗೆ ತಜ್ಞರು ಆತಂಕ ಹೊರ ಹಾಕಿದ್ದಾರೆ. ದಕ್ಷಿಣ ಭಾರತದಲ್ಲಿ ಬೆಂಗಳೂರಿನಲ್ಲೇ ಹೆಚ್ಚು ಪ್ರಕರಣ ಪತ್ತೆಯಾಗುತ್ತಿದ್ದು ಚೆನ್ನೈ, ಹೈದರಾಬಾದ್‌ಗೆ ಹೋಲಿಸಿದರೆ ಬೆಂಗಳೂರು ಹೆಚ್ಚು ವೇಗವಾಗಿ ಕೊರೊನಾಗೆ ತುತ್ತಾಗಲಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಜನ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ದಿನಕ್ಕೆ ಸಾವಿರ ಕೇಸ್ಗಳು ಪತ್ತೆಯಾದರೂ ಆಶ್ಚರ್ಯವಿಲ್ಲ. ಮತ್ತೆ ತಮ್ಮ ಬೆಂಗಳೂರು ಈ ಹಿಂದೆ ಇದ್ದ ಕೊರೊನಾ ಆತಂಕದ ಸಮಯವನ್ನು ಎದುರಿಸಬೇಕಾಗಬಹುದು.
ಕ್ಲೋಸ್ ಆಗಿದ್ದ ಕೋವಿಡ್ ಕೇರ್ ಸೆಂಟರ್ಗಳು ಮತ್ತೆ ಓಪನ್?:
ಕೊರೊನಾ ಕಡಿಮೆಯಾಗಿದೆ ಎಂದು ಜನ ಕೊರೊನಾ ಬಗ್ಗೆ ನಿರ್ಲಕ್ಷ್ಯ ಮಾಡಿದ್ದು, ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸದ್ಯ ಈಗ ಒಟ್ಟು ಆರೂವರೆ ಸಾವಿರಕ್ಕೂ ಅಧಿಕ ಸಕ್ರಿಯ ಸೋಂಕಿತರು ಬೆಂಗಳೂರಿನಲ್ಲಿ ಇದ್ದಾರೆ. ಸೋಂಕಿತರ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಕ್ಲೋಸ್ ಆಗಿದ್ದ ಕೋವಿಡ್ ಕೇರ್ ಸೆಂಟರ್ಗಳನ್ನು ಓಪನ್ ಮಾಡಲು ಬಿಬಿಎಂಪಿ ಮುಂದಾಗಿದೆ. ಅಸಿಂಪ್ಟಮ್ಯಾಟಿಕ್ ಸೋಂಕಿತರನ್ನು ಮತ್ತೆ ವಾಪಸ್ ಕೇರ್ ಸೆಂಟರ್ಗೆ ಕಳಿಸಲು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ. ಕಳೆದ 8 ನೇ ತಾರೀಖು ಬೆಂಗಳೂರಿನಲ್ಲಿ 283 ಜನರಿಗೆ ಸೋಂಕು. ಮಾರ್ಚ್-9 -363 ಸೋಂಕಿತರು ಪತ್ತೆ. 170 ಜನ ಡಿಸ್ಚಾರ್ಜ್ ಮಾರ್ಚ್-10- 488 ಸೋಂಕಿತರು ಪತ್ತೆ. ಮಾರ್ಚ್-11-493ಸೋಂಕಿತರು ಪತ್ತೆ. 191 ಜನ ಡಿಸ್ಚಾರ್ಜ್ ಮಾರ್ಚ್-12-620ಸೋಂಕಿತರು ಪತ್ತೆ. ಮಾರ್ಚ್-13-630ಸೋಂಕಿತರು ಪತ್ತೆ. 785 ಜನ ಡಿಸ್ಚಾರ್ಜ್ ಮಾರ್ಚ್-14-628ಸೋಂಕಿತರು ಪತ್ತೆ. 371 ಜನ ಡಿಸ್ಚಾರ್ಜ್ ಮಾರ್ಚ್-15-550ಸೋಂಕಿತರು ಪತ್ತೆ. 198 ಜನ ಡಿಸ್ಚಾರ್ಜ್ ಮಾರ್ಚ್-16 ರಂದು 700 ಜನರಿಗೆ ಸೋಂಕು. 329 ಜನ ಡಿಸ್ಚಾರ್ಜ್ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. 126 ದಿನಗಳ ಬಳಿಕ 700 ಜನ ಸೋಂಕಿತರು ಪತ್ತೆ. ಒಟ್ಟು ಸಕ್ರಿಯ ಕೊರೊನಾ ಕೇಸ್ಗಳು 9,428
ಬೆಂಗಳೂರು ಮತ್ತು ರಾಜ್ಯದ ಕೊರೊನಾ ಕೇಸ್ಗಳು ರಾಜ್ಯದಲ್ಲಿಂದು ಹೊಸದಾಗಿ 1,135 ಜನರಿಗೆ ಕೊರೊನಾ ದೃಢಪಟ್ಟಿದೆ. ಹಾಗೂ ಕೊರೊನಾ ಸೋಂಕಿತರ ಸಂಖ್ಯೆ 9,62,339 ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 6 ಜನರು ಮೃತಪಟ್ಟಿದ್ದು ಈವರೆಗೆ ಕೊರೊನಾದಿಂದ 12,403 ಜನರ ಸಾವಾಗಿದೆ. ಸೋಂಕಿತರ ಪೈಕಿ 9,40,489 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 9,428 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಇಂದು ಒಂದೇ ದಿನ 710 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು ಕೊರೊನಾ ಪೀಡಿತರ ಸಂಖ್ಯೆ 4,12,699ಕ್ಕೇರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಹಾಗೂ ಈವರೆಗೆ ಕೊರೊನಾಗೆ 4,527 ಜನರು ಮೃತಪಟ್ಟಿರುವುದಾಗಿ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: TV9 Digital Live: ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಬೇಕಿಲ್ಲ; ಮಾಸ್ಕ್-ಸಾಮಾಜಿಕ ಅಂತರ ಬೇಕೇ ಬೇಕು
Published On - 10:40 am, Wed, 17 March 21