ಮಹಾರಾಷ್ಟ್ರಕ್ಕೆ ಕನ್ಯೆ ನೋಡಲು ಹೋದವರಿಗೆ ಕೊರೊನಾ ಪಾಸಿಟಿವ್: ಬಾಗಲಕೋಟೆ ಮೂಲದ ಇಬ್ಬರಿಗೆ ಸೋಂಕು
ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ಮೂಲದ ಇಬ್ಬರಿಗೆ ಕೊರೊನಾ ಧೃಡಪಟ್ಟಿದ್ದು, ನಾಲ್ಕು ದಿನಗಳ ಹಿಂದೆ ಮಹಾರಾಷ್ಟ್ರಕ್ಕೆ ಹುಡುಗಿಯನ್ನು ನೋಡಲು 60 ಮತ್ತು 50 ವರ್ಷದ ಇಬ್ಬರು ಹೋಗಿದ್ದರು. ವಾಪಸ್ ಬರುವ ವೇಳೆ ರಾಜ್ಯದ ಗಡಿಯಲ್ಲಿ ಕೊವಿಡ್ ಪರೀಕ್ಷೆ ಮಾಡಿದ್ದು, ಇಬ್ಬರಿಗೂ ಕೂಡ ಕೊರೊನಾ ಸೋಂಕು ದೃಢವಾಗಿದೆ.
ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಆತಂಕ ಹೆಚ್ಚುತ್ತಿದ್ದು, ಎಲ್ಲೆಡೆ ನಿಗಾ ವಹಿಸಲಾಗುತ್ತಿದೆ. ಈ ನಡುವೆ ವಿವಾಹಕ್ಕೆ ಕನ್ಯೆ ನೋಡಲು ಮಹಾರಾಷ್ಟ್ರಕ್ಕೆ ಹೋಗಿದ್ದವರಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, ಸದ್ಯ ಸೊಂಕಿತರಿಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸೊಂಕಿತರ ಕುಟುಂಬಸ್ಥರು ಹಾಗೂ ಸುತ್ತಮುತ್ತಲಿನ ಮನೆಯವರ ತಪಾಸಣೆಗೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದ್ದು, ಮನೆಯವರು ಹಾಗೂ ನೆರೆಹೊರೆಯ 400ಜನರ ಗಂಟಲು ದ್ರವ ಪರೀಕ್ಷೆಯನ್ನು ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಟಿವಿ9 ಡಿಜಿಟಲ್ಗೆ ಬಾಗಲಕೋಟೆ ಡಿಹೆಚ್ಓ ಡಾ.ಅನಂತದೇಸಾಯಿ ಮಾಹಿತಿ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆ ರಬಕವಿ, ಬನಹಟ್ಟಿ ಮೂಲದ ಇಬ್ಬರಿಗೆ ಕೊರೊನಾ ಧೃಡಪಟ್ಟಿದ್ದು, ನಾಲ್ಕು ದಿನಗಳ ಹಿಂದೆ ಮಹಾರಾಷ್ಟ್ರಕ್ಕೆ ಹುಡುಗಿಯನ್ನು ನೋಡಲು 60 ಮತ್ತು 50 ವರ್ಷದ ಪುರುಷರಿಬ್ಬರು ಹೋಗಿದ್ದರು. ವಾಪಸ್ ಬರುವ ವೇಳೆ ರಾಜ್ಯದ ಗಡಿಯಲ್ಲಿ ಕೊವಿಡ್ ಪರೀಕ್ಷೆ ಮಾಡಿದ್ದು, ಇಬ್ಬರಿಗೂ ಕೂಡ ಕೊರೊನಾ ಸೋಂಕು ದೃಢವಾಗಿದೆ.
ಒಟ್ಟಾರೆಯಾಗಿ ದೇಶದೆಲ್ಲೆಡೆ ಕೊರೊನಾ ಸೋಂಕು ಮತ್ತೆ ಹೆಚ್ಚಳವಾಗುತ್ತಿದ್ದು,ಕೊರೊನಾ ಎರಡನೇ ಅಲೆಯ ಭೀತಿ ಶುರುವಾಗಿದೆ. ಕೊರೊನಾ ಅಲೆ ತೀವ್ರವಾಗುವ ಸಾಧ್ಯತೆ ಇದ್ದು, ಜನರು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ.
ಮೈಸೂರು ಜಿಲ್ಲೆಯಲ್ಲಿ ಕೊವಿಡ್ ನಿಯಮ ಪಾಲಿಸದ ಜನ: ಸಾಂಸ್ಕೃತಿಕ ನಗರಿಯಲ್ಲಿ 8 ತಿಂಗಳಲ್ಲಿ ಬರೋಬ್ಬರಿ 40,995 ಕೇಸ್‌ಗಳು ದಾಖಲಾಗಿದ್ದು, ಕೊವಿಡ್ ನಿಯಮ ಪಾಲಿಸದವರ ವಿರುದ್ಧ ಮೈಸೂರಿನ 23 ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 82,40,400 ರೂಪಾಯಿ ದಂಡ ಸಹ ಸಂಗ್ರಹಿಸಲಾಗಿದೆ. ಕೊರೊನಾ ಬಗ್ಗೆ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರು ಕೊವಿಡ್ ಬಗ್ಗೆ ನಿರ್ಲಕ್ಷ್ಯ ಭಾವನೆ ಮಾತ್ರ ಇನ್ನೂ ಜನರಲ್ಲಿ ದೂರವಾಗಿಲ್ಲ. ಇದೇ ನಿರ್ಲಕ್ಷ್ಯ ಮುಂದುವರಿದರೆ ಮೈಸೂರಿನಲ್ಲಿ ಮತ್ತಷ್ಟು ಕೊವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:
TV9 Digital Live: ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಬೇಕಿಲ್ಲ; ಮಾಸ್ಕ್-ಸಾಮಾಜಿಕ ಅಂತರ ಬೇಕೇ ಬೇಕು
ಕೊರೊನಾ ಸೋಂಕು ಭೀತಿ: ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ವೈರಮುಡಿ ಮಹೋತ್ಸವ ಸರಳ ಆಚರಣೆಗೆ ನಿರ್ಧಾರ