ಜೂನ್ 1ರಿಂದ ದೇವಸ್ಥಾನಗಳ ಬಾಗಿಲು ತೆರೆಯುತ್ತದೆ

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್​ ಲಾಕ್​ಡೌನ್​ನಿಂದ ಇಡೀ ದೇಶಾದ್ಯಂತ ದೇವಾಲಯಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಆರ್ಥಿಕತೆ ಪಾತಾಳಕೆ ಕುಸಿದಿತ್ತು. ಹಾಗಾಗಿ ಲಾಕ್​ಡೌನ್ ಸಡಿಲಿಕೆ ಮಾಡಿ ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ಮಾಡಿಕೊಡಲಾಯಿತು. ದೇಶಾದ್ಯಂತ ಮಾಡಿದ್ದ ಲಾಕ್​ಡೌನ್​ 4.O ಜೂನ್ 1ಕ್ಕೆ ಮುಗಿಯಲಿದೆ. ಹಾಗಾಗಿ ರಾಜ್ಯದಲ್ಲಿ ಜೂನ್ 1ರಿಂದ ಎಲ್ಲಾ ದೇವಾಲಯಗಳನ್ನು ಓಪನ್ ಮಾಡಲು ನಿರ್ಧರಿಸಲಾಗಿದೆ. ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇವಾಲಯಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಸಾಮಾಜಿಕ ಅಂತರ, ಸುರಕ್ಷತೆ ಕಾಯ್ದುಕೊಂಡು ದೇವಾಲಯಗಳನ್ನು ಓಪನ್ ಮಾಡಬೇಕು. ದೇವಾಲಯಗಳಲ್ಲಿ […]

ಜೂನ್ 1ರಿಂದ ದೇವಸ್ಥಾನಗಳ ಬಾಗಿಲು ತೆರೆಯುತ್ತದೆ
ಸಾಧು ಶ್ರೀನಾಥ್​ Edited By:

Updated on: May 26, 2020 | 6:41 PM

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್​ ಲಾಕ್​ಡೌನ್​ನಿಂದ ಇಡೀ ದೇಶಾದ್ಯಂತ ದೇವಾಲಯಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಆರ್ಥಿಕತೆ ಪಾತಾಳಕೆ ಕುಸಿದಿತ್ತು. ಹಾಗಾಗಿ ಲಾಕ್​ಡೌನ್ ಸಡಿಲಿಕೆ ಮಾಡಿ ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ಮಾಡಿಕೊಡಲಾಯಿತು.

ದೇಶಾದ್ಯಂತ ಮಾಡಿದ್ದ ಲಾಕ್​ಡೌನ್​ 4.O ಜೂನ್ 1ಕ್ಕೆ ಮುಗಿಯಲಿದೆ. ಹಾಗಾಗಿ ರಾಜ್ಯದಲ್ಲಿ ಜೂನ್ 1ರಿಂದ ಎಲ್ಲಾ ದೇವಾಲಯಗಳನ್ನು ಓಪನ್ ಮಾಡಲು ನಿರ್ಧರಿಸಲಾಗಿದೆ. ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇವಾಲಯಗಳನ್ನು ತೆರೆಯಲು ನಿರ್ಧರಿಸಲಾಗಿದೆ.

ಸಾಮಾಜಿಕ ಅಂತರ, ಸುರಕ್ಷತೆ ಕಾಯ್ದುಕೊಂಡು ದೇವಾಲಯಗಳನ್ನು ಓಪನ್ ಮಾಡಬೇಕು. ದೇವಾಲಯಗಳಲ್ಲಿ ಎಲ್ಲಾ ಸೇವೆಗಳಿಗೆ ಅವಕಾಶ ಕೊಡಲಾಗಿದೆ. ಆಯ್ದ 52 ದೇಗುಲಗಳಲ್ಲಿ ನಾಳೆಯಿಂದಲೇ ಆನ್​ಲೈನ್ ಬುಕಿಂಗ್ ಸೇವೆ ಆರಂಭವಾಗಲಿದೆ. ಆದ್ರೆ ಜಾತ್ರಾ ಮಹೋತ್ಸವ, ಸಮಾರಂಭಕ್ಕೆ ಅವಕಾಶ ನೀಡಿಲ್ಲ.

Published On - 6:09 pm, Tue, 26 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us