ಸುಮಲತಾ, ಕುಮಾರಸ್ವಾಮಿ ವಾಕ್ ಸಮರ; ಅಂಬಿ ಅಭಿಮಾನಿಗಳಿಂದ ಪ್ರತಿಭಟನೆ

ಸುಮಲತಾ ಒಬ್ಬರೇ ಅಲ್ಲ. ಅವರ ಜೊತೆಗೆ ನಾವಿದ್ದೇವೆ. ಕುಮಾರಸ್ವಾಮಿ ಮನೆ ಮುಂದೆ ನಮಗೆ ಪ್ರೊಟೆಸ್ಟ್ ಮಾಡೋಕೆ ಕೆಪಾಸಿಟಿ ಇಲ್ವಾ? ಎಂದು ಪ್ರಶ್ನಿಸಿದ ಅಂಬಿ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಪುಷ್ಪಾ ಅಮರನಾಥ್, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮಹಿಳಾ ಮಣಿಗಳಿದ್ದಾರೆ.

ಸುಮಲತಾ, ಕುಮಾರಸ್ವಾಮಿ ವಾಕ್ ಸಮರ; ಅಂಬಿ ಅಭಿಮಾನಿಗಳಿಂದ ಪ್ರತಿಭಟನೆ
ಪ್ರತಿಭಟನೆ ಮಾಡುತ್ತಿರುವ ಅಂಬಿ ಅಭಿಮಾನಿಗಳು
Edited By:

Updated on: Jul 11, 2021 | 11:43 AM

ಬೆಂಗಳೂರು: ಮಂಡ್ಯ ಸಂಸದೆ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವಿನ ಜಟಾಪಟಿ ತಾರಕಕ್ಕೇರಿರುವ ಹಿನ್ನೆಲೆ ಅಂಬರೀಶ್ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅಂಬರೀಶ್ ಸ್ಮಾರಕದ ಬಳಿ ಅಭಿಮಾನಿಗಳು ಜಮಾವಣೆ ಆಗುತ್ತಿದ್ದಾರೆ. ಕುಮಾರಸ್ವಾಮಿ ಹೇಳಿಕೆಗಳಿಗೆ ರೆಬಲ್ ಆದ ಫ್ಯಾನ್ಸ್ ಕಂಠೀರವ ಸ್ಟುಡಿಯೋ ಬಳಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸುಮಲತಾ ಒಬ್ಬರೇ ಅಲ್ಲ. ಅವರ ಜೊತೆಗೆ ನಾವಿದ್ದೇವೆ. ಕುಮಾರಸ್ವಾಮಿ ಮನೆ ಮುಂದೆ ನಮಗೆ ಪ್ರೊಟೆಸ್ಟ್ ಮಾಡೋಕೆ ಕೆಪಾಸಿಟಿ ಇಲ್ವಾ? ಎಂದು ಪ್ರಶ್ನಿಸಿದ ಅಂಬಿ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಪುಷ್ಪಾ ಅಮರನಾಥ್, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮಹಿಳಾ ಮಣಿಗಳಿದ್ದಾರೆ. ಯಾರೂ ಮಾತಾನಾಡೋಕೆ ಮುಂದೆ ಬರುತ್ತಿಲ್ಲ ಎಂದು ಹೇಳಿದರು. ಜೊತೆಗೆ ಅಂಬರೀಶ್ ಇದ್ದಾಗ ಯಾರು ಮಾತನಾಡುತ್ತಿರಲಿಲ್ಲ. ಅವರ ಬಗ್ಗೆ ಮಾತನಾಡುವ ನೈತಿಕತೆ ಅವರಗಿಲ್ಲ ಎಂದು ಚಂದ್ರಶೇಖರ್ ಕುಮಾರಸ್ವಾಮಿ ಮತ್ತು ಶ್ರೀಕಂಠಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರಿದ ಟ್ವೀಟ್ ವಾರ್
ಕೆಆರ್​ಎಸ್​ ಡ್ಯಾಂ ಬಿರುಕಿನಿಂದ ಆರಂಭವಾದ ಮಾತಿನ ಸಮರ ಮುಗಿಯುವಂತೆ ಕಾಣುತ್ತಿಲ್ಲ. ಸಂಸದೆ ಸುಮಲತಾ ಟ್ವೀಟ್ ವಾರ್ ಮುಂದುವರೆಸಿದ್ದಾರೆ. ಬೇರೆಯವರಿಗೆ ಗಂಧವನ್ನು ಹಚ್ಚಲು ಯತ್ನಿಸಿದರೆ ಗಂಧವಾಗುತ್ತದೆ. ಗಂಧ ಹಚ್ಚಲು ಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ. ಕೆಸರು ಹಚ್ಚಲು ಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ

ಅಧಿಕಾರಿಗಳು ಕೊಡುವುದು ರಿಪೋರ್ಟ್; ನಮಗೆ ಬೇಕಾಗಿರುವುದು ಸರ್ಟಿಫಿಕೇಟ್: ಕೆಆರ್​ಎಸ್ ಡ್ಯಾಂ ಬಗ್ಗೆ ಪಟ್ಟು ಬಿಡದ ಸುಮಲತಾ

ನಾವು ನಡೆಸುತ್ತಿರುವುದು ಸಕ್ರಮ ಮೈನ್ಸ್; ನಮಗೆ ಕುಮಾರಣ್ಣನು ಗೊತ್ತಿಲ್ಲ, ಸುಮಲತಾ ಅವರೂ ಗೊತ್ತಿಲ್ಲ; ನಮ್ಮನ್ನು ಬದುಕಲು ಬಿಡಿ: ಗಣಿ ಮಾಲೀಕರು

(Ambareesh fans have protested against HD Kumaraswamy in Bangalore kanteerava studio)