ಹೆಲ್ಮೆಟ್ ಧರಿಸಿ ಮಸೀದಿಗೆ ನುಗ್ಗಿ ಧರ್ಮಗುರು ಮುಸ್ತಾಕ್ ಮೇಲೆ ಹಲ್ಲೆ; ಮಸೀದಿ ನುಗ್ಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 30, 2021 | 11:19 PM

ಹೆಲ್ಮೆಟ್ ಧರಿಸಿ ಮಸೀದಿಗೆ ನುಗ್ಗಿ ಧರ್ಮಗುರುವಿಗೆ ಹಲ್ಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ನಡೆದಿದೆ.

ಹೆಲ್ಮೆಟ್ ಧರಿಸಿ ಮಸೀದಿಗೆ ನುಗ್ಗಿ ಧರ್ಮಗುರು ಮುಸ್ತಾಕ್ ಮೇಲೆ ಹಲ್ಲೆ; ಮಸೀದಿ ನುಗ್ಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಪ್ರಾತಿನಿಧಿಕ ಚಿತ್ರ
Follow us on

ಮಂಗಳೂರು: ಹೆಲ್ಮೆಟ್ ಧರಿಸಿ ಮಸೀದಿಗೆ ನುಗ್ಗಿ ಧರ್ಮಗುರುವಿನ ಮೇಲೆ ಹಲ್ಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ನಡೆದಿದೆ. ಸರಿ ಸುಮಾರು ರಾತ್ರಿ 12 ಗಂಟೆಯ ಸಮಯದಲ್ಲಿ ಹೆಲ್ಮೆಟ್ ಧರಿಸಿ ಮಸೀದಿಗೆ ತಂಡವೊಂದು ನುಗ್ಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಫರಂಗಿಪೇಟೆ ಅಮ್ಮೆಮಾರ್ ರಸ್ತೆಯಲ್ಲಿರುವ ಬಿರ್ರುಲ್ ವಾಲಿದೈನ್ ಮಸೀದಿಗೆ ಮೂರು ಮಂದಿಯ ತಂಡ ನುಗ್ಗಿದೆ. ಮಸೀದಿಯ ಧರ್ಮಗುರು ಕುಂದಾಪುರ ನಿವಾಸಿ ಮುಸ್ತಾಕ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಮಸೀದಿಯ 2ನೇ ಮಹಡಿಯಲ್ಲಿ ಮುಸ್ತಾಕ್​ಗೆ ಹಲ್ಲೆ ಮಾಡಲಾಗಿದೆ. ಮಸೀದಿಯ ಸಿಸಿ ಕ್ಯಾಮಾರಾದಲ್ಲಿ ದುಷ್ಕರ್ಮಿಗಳು ಮಸೀದಿಯೊಳಗೆ ನುಗ್ಗಿರುವ ದೃಶ್ಯ ಸೆರೆಯಾಗಿದೆ. ಈ ಕುರಿತಂತೆ ಮಸೀದಿ ಅಧ್ಯಕ್ಷ ಸೈಯದ್ ಬಾವಾ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

YouTube video player

ಇದನ್ನೂ ಓದಿ: ಹೋಲಾ ಮೊಹಲ್ಲಾ ಮೆರವಣಿಗೆ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ ಸಿಖ್​ ಯುವಕರು; ಕತ್ತಿ ಹಿಡಿದು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ವಾಹನಗಳೆಲ್ಲ ಪುಡಿಪುಡಿ

ಮಂಗಳೂರಲ್ಲಿ ವ್ಯಕ್ತಿ ಮೇಲೆ ತಲ್ವಾರ್ ದಾಳಿ: ಮಸೀದಿ ವಿಚಾರವಾಗಿ ನಡೀತಾ ಹಲ್ಲೆ?

Published On - 11:18 pm, Tue, 30 March 21