ಸಚಿವ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ರಾಜಿ: ಹಲ್ಲೆ ಪ್ರಕರಣ ರದ್ದುಗೊಳಿಸಿದ ಕೋರ್ಟ್

ಶಾಸಕ ಜೆ ಎನ್ ಗಣೇಶ್‌ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್‌ಐಆರ್‌ ದಾಖಲಾದ ದಿನದಿಂದಲೇ ಅವರು ತಲೆಮರೆಸಿಕೊಂಡಿದ್ದರು.

ಸಚಿವ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ರಾಜಿ: ಹಲ್ಲೆ ಪ್ರಕರಣ ರದ್ದುಗೊಳಿಸಿದ ಕೋರ್ಟ್
ಜೆ ಎನ್ ಗಣೇಶ್ ಮತ್ತು ಆನಂದ್ ಸಿಂಗ್
Edited By:

Updated on: Oct 04, 2021 | 5:31 PM

ಬೆಂಗಳೂರು: ಈಗಲ್ಟನ್ ರೆಸಾರ್ಟ್​ನಲ್ಲಿ ಸಚಿವ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣದಲ್ಲಿ ಸಚಿವ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ರಾಜಿಯಾಗಿದ್ದಾರೆ. ಈಕಾರಣ ಹೈಕೋರ್ಟ್ ಏಕಸದಸ್ಯ ಪೀಠ ಪ್ರಕರಣವನ್ನು ರದ್ದುಗೊಳಿಸಿದೆ.

ಈಗಲ್ಟನ್ ರೆಸಾರ್ಟ್​ನಲ್ಲಿ ನಡೆದಿದ್ದ ಹಲ್ಲೆ ಪ್ರಕರಣ ಇದೀಗ ರದ್ದುಗೊಂಡಂತಾಗಿದೆ. ಈಹಿಂದೆ ಕೊಲೆ‌ ಯತ್ನ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ರಾಜಿ ಸಾಧ್ಯವಾಗಿರಲಿಲ್ಲ. ಇದು ಹಣಕಾಸಿನ ವ್ಯಾಜ್ಯಕ್ಕೆ ನಡೆದ ಜಗಳವಷ್ಟೇ. ಕೊಲೆ ಯತ್ನದ ಉದ್ದೇಶ ಅಥವಾ ಪ್ರಯತ್ನ ಇರಲಿಲ್ಲ. ಆದರೆ ಈಗಾಗಲೇ ಇಬ್ಬರೂ ರಾಜಿ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕೊಲೆ ಯತ್ನ ಸೆಕ್ಷನ್ ಅನ್ವಯವಾಗುವುದಿಲ್ಲವೆಂದು ಕಂಪ್ಲಿ ಗಣೇಶ್ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ವಾದ ಮಂಡಿಸಿದ್ದರು. ಅವರ ವಾದವನ್ನು ಒಪ್ಪಿದ ಕೋರ್ಟ್ ಕೊಲೆಯತ್ನ ಪ್ರಕರಣ ಅನ್ವಯವಾಗುವುದಿಲ್ಲವೆಂದು ಆದೇಶ ನೀಡಿ ಪ್ರಕರಣವನ್ನು ರದ್ದುಗೊಳಿಸಿದೆ.

2019ರ ಜನವರಿ 19ರ ರಾತ್ರಿ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಜೆ. ಎನ್. ಗಣೇಶ್ ಮತ್ತು ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ನಡುವೆ ಗಲಾಟೆ ನಡೆದಿತ್ತು. ಶಾಸಕ ಗಣೇಶ್ ಈಗ ಸಚಿವರಾಗಿರುವ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ. ತೀವ್ರವಾಗಿ ಗಾಯಗೊಂಡಿದ್ದ ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು.

ಇದನ್ನೂ ಓದಿ: 

World Tourism Day 2021: ವಿಶ್ವ ಪ್ರವಾಸೋದ್ಯಮ ದಿನಕ್ಕೆ ವಿಶೇಷ ಅಂಚೆ ಕವರ್ ಬಿಡುಗಡೆ ಮಾಡಿದ ಸಚಿವ ಆನಂದ್ ಸಿಂಗ್

ದುಬೈ ಮಾದರಿಯಲ್ಲಿಯೇ ಇಲ್ಲಿಯೂ ಅದು ಕಟ್ ಇದು ಕಟ್ ಆಗ್ಬೇಕು: ಅತ್ಯಾಚಾರ ಪ್ರಕರಣಕ್ಕೆ ಆನಂದ್ ಸಿಂಗ್ ಪ್ರತಿಕ್ರಿಯೆ

Published On - 5:24 pm, Mon, 4 October 21

Follow Us