ದುಬೈ ಮಾದರಿಯಲ್ಲಿಯೇ ಇಲ್ಲಿಯೂ ಅದು ಕಟ್ ಇದು ಕಟ್ ಆಗ್ಬೇಕು: ಅತ್ಯಾಚಾರ ಪ್ರಕರಣಕ್ಕೆ ಆನಂದ್ ಸಿಂಗ್ ಪ್ರತಿಕ್ರಿಯೆ
Anand Singh: ಅರಿಶಿನ ಗಣಪ ವೆಬ್‌ಸೈಟ್‌ಗೆ ಚಾಲನೆ ನೀಡಿದ ಆನಂದ್ ಸಿಂಗ್, ಪರಿಸರ ಸ್ನೇಹಿ ಗಣೇಶೋತ್ಸವ, ಮೈಸೂರು ಸಾಮೂಹಿಕ ಅತ್ಯಾಚಾರ ಹಾಗೂ ಪರಿಸರ ಖಾತೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು: ಅರಿಶಿನ ಗಣಪತಿ ತಯಾರಿಸಿ ವಿಶ್ವದಾಖಲೆಗೆ ಮುಂದಾಗಿದ್ದೇವೆ. ಕರ್ನಾಟಕ ರಾಜ್ಯದ ಜನರು ಇದಕ್ಕೆ ಕೈಜೋಡಿಸಬೇಕು ಎಂದು ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ‘ಅರಿಶಿನ ಗಣೇಶ’ ವೆಬ್‌ಸೈಟ್‌ಗೆ ಶುಕ್ರವಾರ (ಆಗಸ್ಟ್ 27) ಚಾಲನೆ ನೀಡಿ ಆನಂದ್ ಸಿಂಗ್ ಮಾತನಾಡಿದ್ದಾರೆ. ಅರಿಶಿನ ಗಣೇಶ ಹಬ್ಬದ ಜಾಗೃತಿ ಆಡಿಯೋ ರಿಲೀಸ್ ಮಾಡಿದ್ದಾರೆ. ಪಿಒಪಿ ಗಣೇಶ ನಿರ್ಮಾಣದಿಂದ ಪರಿಸಕ್ಕೆ ಹಾನಿಯಾಗುತ್ತಿದೆ. ಅರಿಶಿನಕ್ಕೆ ವಿಶೇಷ ಸ್ಥಾನಮಾನ ಇದೆ. ಜೊತೆಗೆ ರೋಗ ನಿರೋಧಕ ಶಕ್ತಿ ಇದೆ. ಹೀಗಾಗಿ ಪರಿಸರ ಸ್ನೇಹಿ ಗಣೇಶನ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಜನರಲ್ಲಿ ಕೂಡಾ ಜಾಗೃತಿಯಾಗಬೇಕು ಎಂದು ತಿಳಿಸಿದ್ದಾರೆ.
ಲಕ್ಷಾಂತರ ಜನರು ಅರಿಶಿನ ಗಣಪನ ಬಗ್ಗೆ ಆಪ್ ಮೂಲಕ ತಿಳದುಕೊಂಡಿದ್ದಾರೆ. ಹೀಗಾಗಿ ನಾವು ಈ ಸಾರಿ ಪಿಸಿಬಿಯಿಂದ ಅರಿಶಿನ ಗಣಪತಿ ತಯಾರಿಕೆ ಅಭಿಯಾನ ಮಾಡ್ತಾ ಇದ್ದೀವಿ. ಅರಿಶಿನ ಗಣಪತಿ ತಯಾರಿಸಿ ವಿಶ್ವದಾಖಲೆಗೆ ಮುಂದಾಗಿದ್ದೇವೆ. ಜನರು ಈ ಅಭಿಯಾನಕ್ಕೆ ಕೈಜೊಡಿಸಬೇಕು ಎಂದು ಆನಂದ್ ಸಿಂಗ್ ಹೇಳಿದ್ದಾರೆ.
ಮೈಸೂರಿನ ಗ್ಯಾಂಗ್ ರೇಪ್ ವಿಚಾರವಾಗಿ ಪ್ರತಿಕ್ರಿಯಿಸಿದ ಆನಂದ್ ಸಿಂಗ್, ಪ್ರವಾಸೋದ್ಯಮ ತಾಣಗಳಲ್ಲಿ ಸುರಕ್ಷತೆ ಇಲ್ಲ. ಮೂಲಭೂತ ಸೌಕರ್ಯ ನೀಡಲು ಹೋದ್ರೆ ಅದನ್ನ ಖಾಸಗೀಕರಣ ಎಂದು ವಿರೋಧ ಮಾಡ್ತಾರೆ. ಬೇರೆಯವರ ಇಲಾಖೆ ಬಗ್ಗೆ ಪ್ರತಿಕ್ರಿಯೆ ನೀಡೋದಿಲ್ಲ. ಆದರೆ, ಇತಂಹ ಘಟನೆ ಆಗಬಾರದು. ಆತ್ಯಾಚಾರಿಗಳಿಗೆ ದುಬೈ ಮಾದರಿಯಲ್ಲಿ ಶಿಕ್ಷೆಯಾಗಬೇಕು. ದುಬೈ ಮಾದರಿಯಲ್ಲಿಯೇ ಇಲ್ಲಿಯೂ ಅದು ಕಟ್ ಇದು ಕಟ್ ಆಗ್ಬೇಕು. ಆದ್ರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಕಷ್ಟ ಎಂದು ಸಿಂಗ್ ಹೇಳಿದ್ದಾರೆ.
ಕೆಲವು ವಿಚಾರಗಳನ್ನ ಬಹಿರಂಗವಾಗಿ ಹೇಳೊಕೆ ಆಗಲ್ಲ. ನನಗೆ ಅಸಮಧಾನ ಅನ್ನೋದನ್ನ ಎಲ್ಲಿಯಾದರೂ ಹೇಳಿದಿನಾ? ಎಂದು ತಮ್ಮ ಖಾತೆಯ ಬಗೆಗಿನ ಅಸಮಾಧಾನದ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ್ದಾರೆ. ಕೆಲವೊಂದಿಷ್ಟು ಮನವಿ ಮಾಡಿದ್ದೀನಿ. ಅದನ್ನು ಬಹಿರಂಗವಾಗಿ ಹೇಳೋಕೆ ಆಗಲ್ಲ. ಮನವಿಯನ್ನು ಬಗೆಹರಿಸೋದು ಅವ್ರಿಗೆ ಬಿಟ್ಟಿದ್ದು. ಖಾತೆ ಒಳ್ಳೆಯದು ಆದರೆ ತೃಪ್ತಿ ಇದೆಯಾ ಎಂಬ ಆನಂದ್ ಸಿಂಗ್ ಉತ್ತರಿಸಿಲ್ಲ.
ಇದನ್ನೂ ಓದಿ: Ganesh Chaturthi 2021: ಅರಿಶಿನ ಗಣೇಶ ಅಭಿಯಾನ, ಕಾರ್ಖಾನೆಗಳ ರಾಸಾಯನಿಕ ನದಿ ಸೇರ್ಪಡೆಗೆ ತಡೆ: ಪರಿಸರ ಸಚಿವ ಆನಂದ್ ಸಿಂಗ್
‘ನಾಳೆ ನಮ್ಮ-ನಿಮ್ಮೆಲ್ಲರ ತಂಗಿ-ತಾಯಿಗೂ ಹೀಗಾಗಬಹುದು; ಎಚ್ಚೆತ್ತುಕೊಳ್ಳಿ’: ಮೈಸೂರು ಗ್ಯಾಂಗ್ ರೇಪ್ಗೆ ಅದಿತಿ ಆಕ್ರೋಶ
Published On - 3:28 pm, Fri, 27 August 21