Ganesh Chaturthi 2021: ಅರಿಶಿನ ಗಣೇಶ ಅಭಿಯಾನ, ಕಾರ್ಖಾನೆಗಳ ರಾಸಾಯನಿಕ ನದಿ ಸೇರ್ಪಡೆಗೆ ತಡೆ: ಪರಿಸರ ಸಚಿವ ಆನಂದ್ ಸಿಂಗ್
ಎಲ್ಲಾ ಸ್ಥಳಗಳಲ್ಲಿಯೂ ಪೊಲೀಸರನ್ನು ಇಟ್ಟು ಕಾವಲು ಕಾಯಿಸಲು ಆಗುವುದಿಲ್ಲ. ಕೆಲವು ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಜೋಡಿಗಳು ಅಂತಹ ಸ್ಥಳಕ್ಕೆ ಹೋಗಬಾರದು ಎಂದು ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ರೇಪ್ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.
ಬೆಂಗಳೂರು: ಕಾರ್ಖಾನೆಗಳಿಂದ ನದಿಗೆ ರಾಸಾಯನಿಕಗಳು ಸೇರುತ್ತಿವೆ. ಇದರಿಂದ ಜನ ಜಾನುವಾರುಗಳಿಗೆ ತೊಂದರೆಯಾಗುತ್ತದೆ. ಇದನ್ನ ತಪ್ಪಿಸಲು ಕಠಿಣ ಕ್ರಮಕೈಗೊಳ್ಳುತ್ತೇವೆ. ಕೆರೆಗಳ ನೈರ್ಮಲ್ಯ ಸುಧಾರಣೆಗೆ ಕ್ರಮ ಜರುಗಿಸುತ್ತೇವೆ. ಈಕುರಿತು ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ ಎಂದು ಬೆಂಗಳೂರಿನಲ್ಲಿ ಪರಿಸರ, ಜೀವಿಶಾಸ್ತ್ರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದರು. ಈಬಾರಿಯ ಗಣೇಶ ಚತುರ್ಥಿಗೆ ಅರಿಶಿನ ಗಣೇಶ ಕಾನ್ಸೆಪ್ಟ್ ರೂಪಿಸಿದ್ದೇವೆ. ಪರಿಸರ ರಕ್ಷಣೆಗೆ ಇದು ಸಹಕಾರಿಯಾಗಲಿದೆ. ಅರಿಶಿನ ಅಂದ್ರೆ ಸಂಸ್ಕೃತಿಗೆ ಹತ್ತಿರವಾದದ್ದು, ಜತೆಗೆ ಅರಿಶಿನ ಚಿಕಿತ್ಸೆಗಳಿಗೂ ಉಪಯೋಗವಾಗಲಿದೆ. ಅರಿಶಿನ ಗಣೇಶ ಅಭಿಯಾನ ಹಮ್ಮಿಕೊಂಡಿದ್ದೇವೆ. ಜನರೇ ಅರಿಶಿನ ಗಣೇಶ ಮಾಡುವಂತೆ ಅಭಿಯಾನ ಹಮ್ಮಿಕೊಳ್ಳುತ್ತೇವೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.
ಎಲ್ಲಾ ಸ್ಥಳಗಳಲ್ಲಿಯೂ ಪೊಲೀಸರನ್ನು ಇಟ್ಟು ಕಾವಲು ಕಾಯಿಸಲು ಆಗುವುದಿಲ್ಲ. ಕೆಲವು ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಜೋಡಿಗಳು ಅಂತಹ ಸ್ಥಳಕ್ಕೆ ಹೋಗಬಾರದು ಎಂದು ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ರೇಪ್ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು. ಕೆಲವು ರಿಮೋಟ್ ಏರಿಯಾದಲ್ಲಿ ಕಪಲ್ಸ್ ಬರುತ್ತಾರೆ. ಕೆಲವು ಗುಂಪುಗಳು ಇದನ್ನು ಗಮನಿಸಿರುತ್ತಾರೆ. ಬ್ಲಾಕ್ಮೇಲ್ ಮಾಡಿ ಹಣ ವಸೂಲಿ ಮಾಡುತ್ತಾರೆ. ಇಂತಹ ಘಟನೆಗಳು ಬಹಳಷ್ಟು ಬೆಳಕಿಗೆ ಬರುವುದಿಲ್ಲ. ನಮ್ಮಲ್ಲಿ ಗುಡ್ಡ, ಕಾಡು ಹೆಚ್ಚು. ಕಪಲ್ಸ್ಗಳು ಇಂತಹ ಸ್ಥಳಕ್ಕೆ ಹೋಗಬಾರದು. ಅಂತಹ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಆದರೆ ಪೊಲೀಸರನ್ನು ಇಟ್ಟು ಕಾವಲು ಕಾಯಿಸೋಕೆ ಆಗುವುದಿಲ್ಲ.ಇದಕ್ಕೆ ಜನರಲ್ಲಿ ಜಾಗೃತಿ ಮೂಡುವುದೇ ಪರಿಹಾರ ಎಂದು ಅವರು ತಿಳಿಸಿದರು.
ಕೆಲವು ರಿಮೋಟ್ ಏರಿಯಾಗೆ ಹೋಗಲು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹೆದರುತ್ತಿದ್ದರು. ದೂರು ಬಂದಾಗ ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದರು. ಇದೀಗ ಅವರಿಗೆ ಎಲ್ಲವನ್ನೂ ವಿವರಿಸಿದ್ದೇವೆ. ಈಕುರಿತು ಹೇಗೆ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ನಿನ್ನೆ ಸಭೆಯಲ್ಲಿ ಚರ್ಚೆಯಾಗಿದೆ. ಅರಣ್ಯ ಸಂರಕ್ಷಣಾ ಕಾಯ್ದೆ ಬಹಳ ಕಠಿಣವಾಗಿದೆ. ಅಲ್ಲಿ ಕಾರ್ಖಾನೆಗಳ ಬಗ್ಗೆ ಗಮನಹರಿಸಲು ಸಾಧ್ಯವಿರಲಿಲ್ಲ. ಆದರೆ ಈಗ ಅಂತಹ ಸಮಸ್ಯೆಯಿಲ್ಲ ಎಂದು ಅವರು ಮಾಹಿತಿ ನೀಡಿದರು.
ನಾವು ಪ್ರಚಾರದ ಮೂಲಕವೇ ಜನರನ್ನು ತಲುಪಬೇಕು. ಮೂರನೇ ಅಲೆ ಬರುತ್ತದೆ ಅಂತ ತಜ್ಞರು ಹೇಳ್ತಿದ್ದಾರೆ. ಸದ್ಯಕ್ಕೆ ಪ್ರವಾಸೋದ್ಯಮ ನಿಂತುಹೋಗಿದೆ. 70 ಕೋಟಿ ಹಣವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇವೆ. ನಮ್ಮಲ್ಲಿ ನೈಸರ್ಗಿಕ ಸಂಪತ್ತು ಹೆಚ್ಚಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ಸುಂದರ ತಾಣಗಳು ನಮ್ಮ ರಾಜ್ಯದಲ್ಲಿವೆ. ಸರ್ಕಾರದ ಹಣದಿಂದಲೇ ಸೌಲಭ್ಯ ಕಲ್ಪಿಸುವುದು ಕಷ್ಟ. ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಚಿಂತಿಸಿದ್ದೇವೆ. ನಂದಿ ಹಿಲ್ಸ್ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡುತ್ತೇವೆ. ಖಾಸಗೀಕರಣದಿಂದ ಯಾವುದೇ ಲೋಪವಾಗಲ್ಲ. ಟೆಂಡರ್ ಮೂಲಕವೇ ಒಪ್ಪಂದ ನೀಡುತ್ತೇವೆ. ಹಂಪಿಯಲ್ಲೂ ಪ್ರವಾಸೋದ್ಯಮ ಅಭಿವೃದ್ಧಿ ಮಾಡುತ್ತೇವೆ ಎಂದು ಸಚಿವ ಆನಂದ್ ಸಿಂಗ್ ಮುಂದಿನ ಯೋಜನೆಗಳ ಬಗ್ಗೆ ಸುಳಿವು ಬಿಟ್ಟುಕೊಟ್ಟರು.
ಇದನ್ನೂ ಓದಿ:
ಸಿಎಂ ಬೊಮ್ಮಾಯಿ ಜೊತೆ ಸಮಾಧಾನಕರ ಭೇಟಿ ಬಳಿಕ, ಖಾತೆ ಅಧಿಕಾರ ಸ್ವೀಕರಿಸಿದ ಸಚಿವ ಆನಂದ್ ಸಿಂಗ್
(Tourism Minister Anand Singh says will make Turmeric Ganesh Campaign for Ganesh Chaturthi and stop Factory Chemical River Invasion)