AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Dog Day: ಪೊಲೀಸ್ ಠಾಣೆಯನ್ನೇ ಮನೆಯಾಗಿಸಿಕೊಂಡ ಧಾರವಾಡದ ಈ ಶ್ವಾನದ ಬಗ್ಗೆ ಪೊಲೀಸರಿಗೆ ಅಕ್ಕರೆ

ಕುಡಿದು ಬರುವವರನ್ನು ಠಾಣೆಯೊಳಗೆ ಬಿಡುವುದೇ ಇಲ್ಲ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಕುಡಿದು ಠಾಣೆಗೆ ಬರೋರನ್ನು ಗುರುತಿಸಿ, ಬೊಗಳಲು ಶುರು ಮಾಡುತ್ತದೆ.

World Dog Day: ಪೊಲೀಸ್ ಠಾಣೆಯನ್ನೇ ಮನೆಯಾಗಿಸಿಕೊಂಡ ಧಾರವಾಡದ ಈ ಶ್ವಾನದ ಬಗ್ಗೆ ಪೊಲೀಸರಿಗೆ ಅಕ್ಕರೆ
ಧಾರವಾಡ ಪೊಲೀಸ್ ಠಾಣೆಯಲ್ಲಿ ಶ್ವಾನ
TV9 Web
| Edited By: |

Updated on: Aug 26, 2021 | 8:06 PM

Share

ಆಗಸ್ಟ್ 26ರಂದು ವಿಶ್ವ ಶ್ವಾನದಿನವನ್ನು ಆಚರಿಸಲಾಗುತ್ತದೆ. ವಿಶ್ವಾಸಕ್ಕೆ ಇನ್ನೊಂದು ಹೆಸರೇ ನಾಯಿ. ಒಂದು ಬಾರಿ ತನ್ನವರನ್ನು ಹಚ್ಚಿಕೊಂಡರೆ ಸಾಕು, ತನ್ನ ಜೀವವನ್ನು ಪಣಕ್ಕಿಟ್ಟು ತನ್ನವರನ್ನು ರಕ್ಷಿಸೋ ಗುಣವನ್ನು ಈ ನಾಯಿಗಳು ಹೊಂದಿವೆ. ಇದೇ ಕಾರಣಕ್ಕೆ ಅವುಗಳಿಗೂ ಒಂದು ದಿನವಿರಲಿ ಅನ್ನುವ ಕಾರಣದಿಂದ ಆಗಸ್ಟ್ 26 ರಂದು ವಿಶ್ವ ಶ್ವಾನದಿನವನ್ನು ಆಚರಿಸುತ್ತಾರೆ. ಇಂಥ ವೇಳೆ ನೆನಪಾಗುವುದು ಧಾರವಾಡದ ವಿಭಿನ್ನ ಶ್ವಾನ. ಅದನ್ನು ಯಾರು ಕೂಡ ಸಾಕಿಲ್ಲ. ಆದರೆ ಅದರ ಪ್ರೀತಿ ಹಾಗೂ ನಂಬಿಕೆಯನ್ನು ಗಮನಿಸಿ ಒಂದಿಡೀ ಪೊಲೀಸ್ ಠಾಣೆಯ ಸಿಬ್ಬಂದಿಯೇ ಅದನ್ನು ತಮ್ಮ ಮನೆಯ ಸದಸ್ಯನಂತೆ ಪ್ರೀತಿಸುತ್ತಾರೆ.

ನಗರ ಠಾಣೆಯ ‘ರಾಜ’ನಾಗಿ ಬೆಳೆದ ಶ್ವಾನ ಸಮಾಜದಲ್ಲಿ ಏನೇ ಸಮಸ್ಯೆಯಾದರೂ ರಕ್ಷಣೆಗೆ ಬರಬೇಕಾದವರು ಪೊಲೀಸರೇ. ಅವರೇ ಎಲ್ಲರ ರಕ್ಷಕರು. ಇಂಥ ಪೊಲೀಸರಿಗೆೇ ಧಾರವಾಡದಲ್ಲೊಂದು ಶ್ವಾನ ರಕ್ಷಣೆ ನೀಡುತ್ತಿದೆ. ಅದರಲ್ಲೂ ಅದು ಕಂಟ್ರಿ ನಾಯಿ ಅನ್ನೋದು ವಿಶೇಷ. ಯಾವುದೇ ತರಬೇತಿ ಇಲ್ಲದ ಗಂಡು ನಾಯಿಯೊಂದು ಧಾರವಾಡದ ಶಹರ ಠಾಣೆಯ ರಕ್ಷಣೆಗೆ ದಿನದ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡುತ್ತಿದೆ. ಹೀಗಾಗಿಯೇ ಠಾಣೆಯ ಸಿಬ್ಬಂದಿ ಇದಕ್ಕೆ ಪ್ರೀತಿಯಿಂದ ರಾಜ ಅಂತಾ ಹೆಸರಿಟ್ಟಿದ್ದಾರೆ. ಮರಿಯಿದ್ದಾಗ ಆಹಾರಕ್ಕಾಗಿ ಠಾಣೆ ಬಳಿ ಅಲೆದಾಡುವಾಗ ಸಿಬ್ಬಂದಿ ಇದಕ್ಕೆ ಆಹಾರ ನೀಡಿದ್ದಾರೆ. ಅಂದಿನಿಂದ ಠಾಣೆಯ ಬಳಿಯೇ ಇರಲು ಶುರು ಮಾಡಿದ ನಾಯಿ ಮರಿ ಈಗ ಠಾಣೆಯ ರಕ್ಷಕ ‘ರಾಜ’ ನಾಗಿ ಬೆಳೆದಿದೆ.

ಕುಡುಕರನ್ನು ದೂರದಿಂದಲೇ ಗುರುತಿಸುತ್ತದೆ ದಿನಕಳೆದಂತೆ ರಾಜ ಈ ಠಾಣೆಯು ತನ್ನದು, ಠಾಣೆ ಹಾಗೂ ಸಿಬ್ಬಂದಿಯ ರಕ್ಷಣೆ ತನ್ನ ಹೊಣೆ ಎನ್ನುವಂತೆ ಹಗಲು-ರಾತ್ರಿ ಠಾಣೆಯ ಬಾಗಿಲಲ್ಲಿಯೇ ಇದ್ದು ಕಾಯತೊಡಗಿದೆ. ಕುಡಿದು ಬರುವವರನ್ನು ಠಾಣೆಯೊಳಗೆ ಬಿಡುವುದೇ ಇಲ್ಲ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಕುಡಿದು ಠಾಣೆಗೆ ಬರೋರನ್ನು ಗುರುತಿಸಿ, ಬೊಗಳಲು ಶುರು ಮಾಡುತ್ತದೆ. ಸಾಮಾನ್ಯವಾಗಿ ತರಬೇತಿ ನೀಡಿದ ನಾಯಿಗಷ್ಟೇ ಈ ರೀತಿ ವರ್ತಿಸುತ್ತವೆ. ಆದರೆ ಈ ರಾಜ ಮಾತ್ರ ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ಕುಡಿದು ಠಾಣೆಗೆ ಬರೋರನ್ನು ಗುರುತಿಸುತ್ತೆ. ಯಾರಾದರೂ ಪೊಲೀಸ್ ಸಿಬ್ಬಂದಿಯನ್ನು ಜೋರಾಗಿ ಮಾತನಾಡಿಸಿದರೆ, ಬೆದರಿಕೆಯೊಡ್ಡಿದರೆ ಅವರ ಮೇಲೆ ಅಟ್ಯಾಕ್ ಮಾಡುತ್ತದೆ. ಅಂಥವರನ್ನು ಠಾಣೆಯಿಂದ ಹೊರಗೆ ಕಳಿಸುವವರೆಗೂ ಬಿಡುವುದೇ ಇಲ್ಲ. ರಾತ್ರಿ ಎಂಟರಿಂದ ಬೆಳಗಿನವರೆಗೂ ಠಾಣೆಯ ಬಾಗಿಲಲ್ಲಿ ಒಂದು ಕ್ಷಣವೂ ನಿದ್ದೆ ಮಾಡದೇ ಕಾಯೋದು ರಾಜಾನಿಗೆ ರೂಢಿಯಾಗಿದೆ.

ಸಿಬ್ಬಂದಿಯೊಂದಿಗೆ ರಾಜನ ಅವಿನಾಭಾವ ಸಂಬಂಧ ಠಾಣೆಯ ಈ ರಾಜನಿಗೆ ನಿತ್ಯವೂ ಸಿಬ್ಬಂದಿಯೇ ಊಟ ನೀಡುತ್ತಾರೆ. ರಾತ್ರಿ ಪಾಳಿಗೆ ಬರುವ ಸಿಬ್ಬಂದಿ ಮನೆಯಿಂದ ಅಥವಾ ಹೊಟೆಲ್​ನಿಂದ ಮಾಂಸಾಹಾರ ತಂದು ನೀಡುತ್ತಾರೆ. ಬೆಳಿಗ್ಗೆ ಕರ್ತವ್ಯಕ್ಕೆ ಬರುವ ಮಹಿಳಾ ಸಿಬ್ಬಂದಿ ಮನೆಯಿಂದ ಉಪಹಾರ ತಂದು ನೀಡುತ್ತಾರೆ. ಪಾಳಿಯ ಪ್ರಕಾರ ಸಿಬ್ಬಂದಿ ಮನೆಯಿಂದಲೋ ಅಥವಾ ಹೋಟೆಲ್​ನಿಂದಲೋ ಊಟದ ವ್ಯವಸ್ಥೆ ಮಾಡುತ್ತಾರೆ. ಇತ್ತೀಚಿಗೆ ನಾಲ್ಕಾರು ಬೀದಿ ನಾಯಿಗಳು ಸೇರಿ ಕಚ್ಚಿದ್ದಾಗ, ಠಾಣೆಯ ಸಿಬ್ಬಂದಿಯೇ ಮುಂದೆ ನಿಂತು ಆಪರೇಷನ್ ಮಾಡಿಸಿ ನಿತ್ಯವೂ ಉಪಚಾರ ಮಾಡಿ ತಮ್ಮ ನೆಚ್ಚಿನ ರಾಜನನ್ನು ಉಳಿಸಿಕೊಂಡಿದ್ದರು.

ಬ್ರೀಫಿಂಗ್ ವೇಳೆ ತಪ್ಪದೇ ಹಾಜರ್ ನಿತ್ಯವೂ ಠಾಣೆಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಹಾಗೂ ರಾತ್ರಿ 9 ಗಂಟೆಗೆ ಬ್ರೀಫಿಂಗ್ ಇರುತ್ತದೆ. ಇದಕ್ಕೆ ರೋಲ್​ಕಾಲ್ ಎಂದೂ ಕರೆಯುತ್ತಾರೆ. ಅವತ್ತು ಯಾರು ಎಲ್ಲಿ ಯಾವ ಕೆಲಸ ನಿರ್ವಹಿಸಬೇಕು ಎನ್ನುವುದರನ್ನು ಅಧಿಕಾರಿಗಳು ಪೊಲೀಸ್ ಸಿಬ್ಬಂದಿಗೆ ಸೂಚಿಸುತ್ತಾರೆ. ಇದು ಎಲ್ಲ ಠಾಣೆಗಳಲ್ಲಿ ನಿತ್ಯವೂ ನಡೆಯುವ ಪ್ರಕ್ರಿಯೆ. ಈ ವೇಳೆ ರಾಜ ಎಲ್ಲಿಯೇ ಇದ್ದರೂ ಬಂದು ಹಾಜರಾಗುತ್ತಾನೆ. ಎಲ್ಲ ಸಿಬ್ಬಂದಿಯ ಸುತ್ತಲೂ ತಿರುಗಾಡಿ ಅಧಿಕಾರಿಗಳಂತೆ ವರ್ತಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಠಾಣೆಗೆ ಯಾರೇ ಹಿರಿಯ ಪೊಲೀಸ್ ಅಧಿಕಾರಿಗಳು ಬಂದರೂ ಅವರ ಬಳಿ ಹೋಗಿ ನಿಲ್ಲುತ್ತದೆ. ಈ ವೇಳೆ ಆ ಅಧಿಕಾರಿಗೂ ಹಿರಿಯ ಅಧಿಕಾರಿ ಬಂದರೆ ಇವರನ್ನು ಬಿಟ್ಟು ಅವರ ಬಳಿ ಹೋಗಿ ನಿಲ್ಲುತ್ತದೆ. ಇದು ಎಲ್ಲ ಸಿಬ್ಬಂದಿಯ ಅಚ್ಚರಿಗೆ ಕಾರಣವಾಗಿದೆ.

ಹಿಂದಿನ ಜನ್ಮದಲ್ಲಿ ಪೊಲೀಸ್ ಆಗಿರಬೇಕು: ರತ್ನಾ ಭರಮಪ್ಪನವರ್ ಈ ಶ್ವಾನದ ಹಾವಭಾವಗಳನ್ನು ನಿತ್ಯವೂ ಗಮನಿಸುವ ಠಾಣೆಯ ಮಹಿಳಾ ಪಿಎಸ್​ಐ ರತ್ನಾ ಭರಮಪ್ಪನವರ್, ಇದು ಹಿಂದಿನ ಜನ್ಮದಲ್ಲಿ ಪೊಲೀಸ್ ಆಗಿರಬೇಕು. ಇಲ್ಲದಿದ್ದರೆ ಪೊಲೀಸರ ಎಲ್ಲ ಸೂಕ್ಷ್ಮತೆಗಳನ್ನು ಈ ನಾಯಿ ಅಳವಡಿಸಿಕೊಳ್ಳಲು ಹೇಗೆ ಸಾಧ್ಯ? ಅನ್ನುತ್ತಾರೆ. ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಅವರು, ದೂರದಿಂದಲೇ ವ್ಯಕ್ತಿಯ ವ್ಯಕ್ತಿತ್ವವನ್ನು ಪತ್ತೆ ಹಚ್ಚುವ ಗುಣ ಈ ನಾಯಿಗೆ ಇದೆ. ಇದನ್ನು ನಾವ್ಯಾರೂ ಪ್ರಾಣಿ ಅಂತಾ ಅಂದುಕೊಂಡಿಲ್ಲ. ಬದಲಿಗೆ ಅದು ನಮ್ಮ ಸಿಬ್ಬಂದಿಯಂತೆಯೇ ಅದನ್ನು ಪರಿಗಣಿಸಿದ್ದೇವೆ ಅನ್ನುತ್ತಾರೆ.

ಇದೊಂದು ವಿಭಿನ್ನ ಬಗೆಯ ನಾಯಿ: ಎಸಿಪಿ ಅನೂಷಾ ಸಾಮಾನ್ಯವಾಗಿ ವಿದೇಶಿ ತಳಿಯ ನಾಯಿಗಳಲ್ಲಿ ಸಾಕಷ್ಟು ಸೂಕ್ಷ್ಮತೆ ಇರುತ್ತದೆ ಅಂದುಕೊಳ್ಳುತ್ತೇವೆ. ಆದರೆ ಈ ನಾಯಿಯಲ್ಲಿ ಅದಕ್ಕಿಂತಲೂ ಹೆಚ್ಚಿನ ಜಾಣತನವಿದೆ. ಕಳ್ಳರು ಹಾಗೂ ಕುಡುಕರನ್ನು ಕ್ಷಣಾರ್ಧದಲ್ಲಿ ಗುರುತಿಸುವ ಈ ಶ್ವಾನದ ಬುದ್ಧಿಯ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಅದು ಹಗಲು-ರಾತ್ರಿ ಅನ್ನದೆ ನಗರ ಠಾಣೆಯಲ್ಲಿಯೇ ಇರೋದು ಕೂಡ ವಿಶೇಷವೇ ಅನ್ನುತ್ತಾರೆ. ದೇಶಿ ನಾಯಿಗಳು ಕೂಡ ಸಾಕಷ್ಟು ಜಾಣತನ ಪ್ರದರ್ಶಿಸೋದಲ್ಲದೇ ತಮ್ಮ ಜೀವವನ್ನು ಪಣಕ್ಕಿಟ್ಟು ಮಾಲೀಕರನ್ನು ರಕ್ಷಣೆ ಮಾಡೋ ಸಾಮರ್ಥ್ಯ ಹೊಂದಿವೆ ಎನ್ನುವುದು ಈ ನಾಯಿಯನ್ನು ನೋಡಿದ್ರೆ ಖಂಡಿತವಾಗಿ ಅರ್ಥವಾಗುತ್ತೆ.

ವರದಿ: ನರಸಿಂಹಮೂರ್ತಿ ಪ್ಯಾಟಿ

(World Dog Day Special This Dog Lives in Police Station Staff Feeds this Dog)

ಇದನ್ನೂ ಓದಿ: ವಿಶ್ವ ಶ್ವಾನ ದಿನ: ಮನುಷ್ಯನ ಭಾವನೆಗಳಿಗೆ ಸ್ಪಂದಿಸುತ್ತ ಆಪ್ತ ಸ್ನೇಹಿತನಂತಿರುವ ಶ್ವಾನ ದಿನವನ್ನು ವಿಶೇಷವಾಗಿ ಆಚರಿಸಿ

ಇದನ್ನೂ ಓದಿ: ಕಾಬೂಲ್​ನಿಂದ ಭಾರತಕ್ಕೆ ಮರಳಿದ ಐಟಿಬಿಪಿ ಸ್ನಿಫರ್ ಶ್ವಾನಗಳು

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ