ವಿಶ್ವ ಶ್ವಾನ ದಿನ: ಮನುಷ್ಯನ ಭಾವನೆಗಳಿಗೆ ಸ್ಪಂದಿಸುತ್ತ ಆಪ್ತ ಸ್ನೇಹಿತನಂತಿರುವ ಶ್ವಾನ ದಿನವನ್ನು ವಿಶೇಷವಾಗಿ ಆಚರಿಸಿ

International Dog Day 2021: ತಾವು ಮನೆಯಲ್ಲಿ ಸಾಕಿದ ಶ್ವಾನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ನೆಟ್ಟಿಗರು ಈ ದಿನವನ್ನು ಆಚರಿಸುತ್ತಿದ್ದಾರೆ.

ವಿಶ್ವ ಶ್ವಾನ ದಿನ: ಮನುಷ್ಯನ ಭಾವನೆಗಳಿಗೆ ಸ್ಪಂದಿಸುತ್ತ ಆಪ್ತ ಸ್ನೇಹಿತನಂತಿರುವ ಶ್ವಾನ ದಿನವನ್ನು ವಿಶೇಷವಾಗಿ ಆಚರಿಸಿ
ಸಾಂದರ್ಭಿಕ ಚಿತ್ರ

ಪ್ರತೀ ವರ್ಷ ಆಗಸ್ಟ್ 26ರಂದು ವಿಶ್ವ ಶ್ವಾನ ದಿನವನ್ನು ಆಚರಿಸಲಾಗುತ್ತದೆ. ಉಂಡ ಮನೆಗೆ ಎಂದಿಗೂ ಎರಡು ಬಗೆಯದೇ, ತನ್ನ ಕರ್ತವ್ಯವನ್ನು ಚಾಚೂ ತಪ್ಪದೇ ಪಾಲಿಸುವ ಶ್ವಾನಕ್ಕಾಗಿ ಈ ದಿನವನ್ನು ಎಂದು ಎಲ್ಲೆಡೆ ಆಚರಿಸಲಾಗುತ್ತಿದೆ. ತಾವು ಮನೆಯಲ್ಲಿ ಸಾಕಿದ ಶ್ವಾನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ನೆಟ್ಟಿಗರು ಈ ದಿನವನ್ನು ಆಚರಿಸುತ್ತಿದ್ದಾರೆ. ಮೂಕ ಪ್ರಾಣಿಯಾಗಿದ್ದರೂ ಸಹ ಮಾನವನ ಭಾವನೆಗಳನ್ನು ಅರ್ಥೈಸಿಕೊಂಡು ಸ್ಪಂದಿಸುವ ಉತ್ತಮ ಸ್ನೇಹಿತನ ದಿನವನ್ನಾಗಿ ತಾವು ಸಾಕಿದ ಪ್ರೀತಿಯ ಶ್ವಾನಕ್ಕೆ ಇಂದು ಶುಭಾಶಯ ತಿಳಿಸುವ ದಿನ.

ಇತಿಹಾಸ
2004ರಲ್ಲಿ ಕಾಲ್ಲೀನ್ ಪೈಗೆ ಎನ್ನುವವರು ವಿಶ್ವ ಶ್ವಾನ ದಿನವನ್ನು ಆರಂಭಿಸಿದರು. ಪ್ರಾಣಿಗಳನ್ನು ರಕ್ಷಿಸುವ ಅಡ್ವೋಕೇಟ್ ಆಗಿರುವ ಅವರು ಬೀದಿ ನಾಯಿಗಳ ರಕ್ಷಣೆಯ ಉದ್ದೇಶದಿಂದ ಈ ದಿನವನ್ನು ಆಚರಿಸಿದರು. ಬೀದಿ ನಾಯಿಗಳನ್ನು ದತ್ತು ಪಡೆಯುವುದನ್ನೂ ಪ್ರೋತ್ಸಾಹ ನೀಡುವುದು ಅವರ ಉದ್ದೇಶವಾಗಿತ್ತು.

ಮನೆಯಲ್ಲಿ ಚಿಕ್ಕ ಮಗುವನ್ನು ರಕ್ಷಿಸುವಂತೆ ಶ್ವಾನ ಪ್ರಿಯರು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಮನೆಯಲ್ಲೊಬ್ಬ ಸದಸ್ಯನಂತೆ ಒಳ್ಳೆಯ ಸ್ನೇಹಿತನಾಗಿಯೂ, ಹಿತೈಶಿಯಾಗಿಯೂ ಇರುವ ಶ್ವಾನ ದಿನವನ್ನು ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಅನೇಕ ಜಾತಿಯ ಶ್ವಾನದ ಫೋಟೋ ಹಂಚಿಕೊಳ್ಳುವ ಮೂಲಕ ಈ ದಿನವನ್ನು ಆಚರಿಸಲಾಗುತ್ತಿದೆ.

ನೀಯತ್ತಿಗೆ ಹೆಸರಾಗಿ ಮಾನವನ ಬದುಕಿನೊಂದಿಗೆ ಬೆಸೆದುಕೊಂಡಿದೆ. ಅದೆಷ್ಟೋ ಬೀದಿ ನಾಯಿಗಳು ರಸ್ತೆ ಬದಿಯಲ್ಲಿ ಬಿದ್ದು ನರಳುತ್ತಿವೆ, ಹಿಂಸೆಗೆ ಒಳಗಾಗುತ್ತಿವೆ ಎಂಬುದನ್ನು ಒತ್ತಿ ಹೇಳುತ್ತಾ ಈ ಕುರಿತಾಗಿ ಜನರು ಎಚ್ಚೆತ್ತುಕೊಳ್ಳುವಂತೆ ಮಾಡುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ.

ಈ ದಿನದ ವಿಶೇಷವಾಗಿ ಬೀದಿ ನಾಯಿಗಳಿಗೆ ಆಹಾರ ನೀಡಿ. ನೀವು ಮನೆಯಲ್ಲಿ ಸಾಕಿರುವ ಶ್ವಾನಕ್ಕಾಗಿ ಈ ದಿನವನ್ನು ಮೀಸಲಿಡಿ. ಅವುಗಳೊಂದಿಗೆ ಈ ದಿನವನ್ನು ಕಳೆಯಿರಿ. ಹೆಚ್ಚು ಸಂತೋಷವಾಗಿರುವಂತೆ ಮೂಕ ಪ್ರಾಣಿಗಳನ್ನು ನೋಡಿಕೊಳ್ಳಿ. ಕೊಂಚ ಪ್ರೀತಿ ತೋರಿಸಿದರೆ ಸಾಕು ಎಂದೂ ಹಿಂಬಾಲಕನಾಗಿ ನಿಮ್ಮ ರಕ್ಷಣೆಗಾಗಿ ನಿಲ್ಲುವ ಶ್ವಾನದ ದಿನವನ್ನು ವಿಶೇಷವಾಗಿ ಆಚರಿಸಿ.

ಇದನ್ನೂ ಓದಿ:

Viral Video: ಅಡುಗೆ ಮನೆ ಪ್ರವೇಶಿಸಿ ಆಹಾರ ಕದಿಯುತ್ತಿರುವ ಬುದ್ಧಿವಂತ ಶ್ವಾನ; ವಿಡಿಯೊ ನೋಡಿ

Viral Video: ವಧು-ವರರಂತೆ ಸೀರೆ, ಪಂಚೆ ತೊಟ್ಟು ಸಿಂಗಾರಗೊಂಡ ಶ್ವಾನಗಳು! ವಿಡಿಯೋ ವೈರಲ್

(International dog day 2021 how pet lovers celebrated this day )

Read Full Article

Click on your DTH Provider to Add TV9 Kannada