ದೇಗುಲದ ಬಳಿ ಅನ್ಯಕೋಮಿನ ಯುವಕ, ಯುವತಿಯರ ಸುತ್ತಾಟ; ಹಿಂದೂಪರ ಸಂಘಟನೆಯ ದಾಳಿ: ಮೂವರ ಬಂಧನ
Mangaluru: ವಿದ್ಯಾರ್ಥಿನಿ ಆರೋಪ ಬಳಿಕ ಮೂವರು ಆರೋಪಿಗಳನ್ನು ಪೊಲೀಸ್ ಸಿಬ್ಬಂದಿ ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಮಂಗಳೂರು: ಅನ್ಯಕೋಮಿನ ಯುವಕ, ಯುವತಿಯರ ಸುತ್ತಾಟ ಆರೋಪದಲ್ಲಿ ಹಿಂದೂಪರ ಸಂಘಟನೆಯ ಕೆಲವರು ದಾಳಿ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕಾರಿಂಜ ದೇವಸ್ಥಾನದ ಬಳಿ ಶುಕ್ರವಾರ (ಆಗಸ್ಟ್ 27) ನಡೆದಿದೆ. ಕಾರಿಂಜ ದೇಗುಲದ ಬಳಿ ಹಿಂದೂಪರ ಸಂಘಟನೆ ದಾಳಿ ನಡೆಸಿದೆ. ಮಂಗಳೂರಿನ ಖಾಸಗಿ ಕಾಲೇಜಿನ 6 ವಿದ್ಯಾರ್ಥಿಗಳಿದ್ದ ತಂಡ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಂದಿತ್ತು. ಈ ವೇಳೆ, ಹಿಂದೂಪರ ಸಂಘಟನೆ ದಾಳಿ ಮಾಡಿರುವ ಘಟನೆ ನಡೆದಿದೆ. ತಮ್ಮನ್ನು ತಡೆದ ಐವರ ವಿರುದ್ಧ ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಆರೋಪ ಬಳಿಕ ಮೂವರು ಆರೋಪಿಗಳನ್ನು ಪೊಲೀಸ್ ಸಿಬ್ಬಂದಿ ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಮೈಸೂರು ಅತ್ಯಾಚಾರ ಪ್ರಕರಣದ ಆರೋಪಿಗಳ ಸುಳಿವು ಪತ್ತೆ ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟಿವಿ9ಗೆ ಪೊಲೀಸ್ ತಂಡದಿಂದ ಎಕ್ಸ್‌ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಪತ್ತೆಗಾಗಿ ರಚನೆ ಮಾಡಿರುವ ಬೆಂಗಳೂರು, ಮೈಸೂರಿನ ಪೊಲೀಸರ ಜಂಟಿ ತಂಡಕ್ಕೆ ಸುಳಿವು ಲಭಿಸಿದೆ. ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಅನುಮಾನ ಮೂಡಿದ್ದು, ಅತ್ಯಾಚಾರದ ಬಳಿಕ ಅವರು ಪರಾರಿಯಾಗಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದ್ದು, ತಮಿಳುನಾಡು ಮೂಲದ ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ ಹಾಗೂ ಕೇರಳ ಮೂಲದ ಮೂವರು ವಿದ್ಯಾರ್ಥಿಗಳ ಮೇಲೆ ಅನುಮಾನ ಮೂಡಿದೆ. ಆಗಸ್ಟ್ 24ರಂದು ರಾತ್ರಿ 7 ಗಂಟೆ ಸುಮಾರಿಗೆ ಗ್ಯಾಂಗ್‌ರೇಪ್ ಪ್ರಕರಣ ನಡೆದಿದ್ದು, ಅಂದು ಆರೋಪಿಗಳು ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ‘ನಾಳೆ ನಮ್ಮ-ನಿಮ್ಮೆಲ್ಲರ ತಂಗಿ-ತಾಯಿಗೂ ಹೀಗಾಗಬಹುದು; ಎಚ್ಚೆತ್ತುಕೊಳ್ಳಿ’: ಮೈಸೂರು ಗ್ಯಾಂಗ್ ರೇಪ್ಗೆ ಅದಿತಿ ಆಕ್ರೋಶ
ಆ ಹುಡುಗಿ ಅಷ್ಟೊತ್ತಿಗೆ ಅಲ್ಲಿಗೆ ಏಕೆ ಹೋಗಿದ್ದಳೋ -ಮೈಸೂರು ಗ್ಯಾಂಗ್ ರೇಪ್ ಬಗ್ಗೆ ಮಂಜುಳಾ ಮಾನಸ ಉಡಾಫೆ ಮಾತು
Published On - 2:53 pm, Fri, 27 August 21