ಅಟ್ಲಾಂಟಿಕ್ ಸಾಗರವನ್ನ ರೋವಿಂಗ್ ಮಾಡುತ್ತಾ ದಾಟಿದ ಜಿಎಸ್ ಶಿವರುದ್ರಪ್ಪ ಮೊಮ್ಮಗಳು: ಸಿಎಂ ಶ್ಲಾಘನೆ

|

Updated on: Feb 18, 2025 | 2:06 PM

ಬೆಂಗಳೂರಿನ ಅನನ್ಯ ಪ್ರಸಾದ್ ಅವರು 52 ದಿನಗಳಲ್ಲಿ ಏಕಾಂಗಿಯಾಗಿ ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿ ದಾಖಲೆ ಬರೆದಿದ್ದಾರೆ. ಇದು ದೇಶಕ್ಕೆ ಹೆಮ್ಮೆಯ ವಿಷಯವಾಗಿದ್ದು, ಮುಖ್ಯಮಂತ್ರಿಗಳು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅನಾಥ ಮಕ್ಕಳ ಶಿಕ್ಷಣಕ್ಕಾಗಿ ಈ ಸಾಹಸಕ್ಕೆ ಕೈಹಾಕಿದ ಅನನ್ಯ ಪ್ರಸಾದ್, ಕನ್ನಡದ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರ ಮೊಮ್ಮಗಳು ಎಂಬುದು ವಿಶೇಷ.

ಅಟ್ಲಾಂಟಿಕ್ ಸಾಗರವನ್ನ ರೋವಿಂಗ್ ಮಾಡುತ್ತಾ ದಾಟಿದ ಜಿಎಸ್ ಶಿವರುದ್ರಪ್ಪ ಮೊಮ್ಮಗಳು: ಸಿಎಂ ಶ್ಲಾಘನೆ
ಅನನ್ಯ ಪ್ರಸಾದ್​
Follow us on

ಬೆಂಗಳೂರು, ಫೆಬ್ರವರಿ 18: ಅಟ್ಲಾಂಟಿಕ್ ಮಹಾಸಾಗರವನ್ನ (Atlantic Ocean) ಸತತ 52 ದಿನಗಳ ಕಾಲ ಏಕಾಂಗಿಯಾಗಿ ರೋವಿಂಗ್ ಮಾಡುತ್ತಾ ದಾಟಿ ದಾಖಲೆಗೈದ ಬೆಂಗಳೂರು ಮೂಲದ ಅನನ್ಯ ಪ್ರಸಾದ್ (Ananya Prasad) ಅವರ ಸಾಧನೆ ಇಡೀ ದೇಶ ಹೆಮ್ಮೆಪಡುವಂತದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಟ್ವೀಟ್​

ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ ಅವರು, ಈ ಸಾಧನೆಯ ಶಿಖರವನ್ನೇರಿದ ಯುವತಿ ಕನ್ನಡದ ರಾಷ್ಟ್ರಕವಿ ಡಾ.ಜಿ.ಎಸ್ ಶಿವರುದ್ರಪ್ಪ ಅವರ ಮೊಮ್ಮಗಳು ಎನ್ನುವುದು ಇನ್ನಷ್ಟು ಖುಷಿಯ ವಿಷಯ. ಅನಾಥ ಮಕ್ಕಳಿಗೆ ಶಿಕ್ಷಣ ನೀಡುವ ಚಾಮರಾಜನಗರ – ರಾಮಸಮುದ್ರದ ದೀನಬಂಧು ಶಾಲೆಯ ಮಕ್ಕಳ ಭವಿಷ್ಯಕ್ಕಾಗಿ ಇಂಥದ್ದೊಂದು ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿರುವ ಅನನ್ಯ ಪ್ರಸಾದ್‌ಗೆ ಅಭಿನಂದನೆಗಳು. ಇಂತಹ ನಿಸ್ವಾರ್ಥ ಆಲೋಚನೆಗಳು ನಿಮ್ಮನ್ನು ಜೀವನದಲ್ಲಿ ಮತ್ತಷ್ಟು ಎತ್ತರೆತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸುತ್ತೇನೆ ಎಂದು ಅಭಿನಂದಿಸಿದ್ದಾರೆ.

ಯಾರು ಈ ಅನನ್ಯ ಪ್ರಸಾದ್​?

ಬೆಂಗಳೂರಿನ ಮೂಲದವರಾದ ಅನನ್ಯ ಪ್ರಸಾದ್​ ಇಂಗ್ಲೆಂಡ್​ನ ಶೆಫಿಲ್ಡ್​ನಲ್ಲಿ ನೆಲೆಸಿದ್ದಾರೆ. ಇವರು ಕವಿ ಜಿಎಸ್​ ಶಿವರುದ್ರಪ್ಪ ಅವರ ಪುತ್ರ ಶಿವಪ್ರಸಾದರ ಪುತ್ರಿ. ಅನನ್ಯ ಪ್ರಸಾದ್ ಅವರು ಅಟ್ಲಾಂಟಿಕ್​ ಮಹಾಸಾಗರದಲ್ಲಿ ಏಕಾಂಗಿಯಾಗಿ ಐದು ಸಾವಿರ ಕಿಮೀ ದೂರುವನ್ನು ಹಾಯಿದೋಣಿ ಮೂಲಕ ಕ್ರಮಿಸಿ ವಿಶ್ವಮಟ್ಟದಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ