AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗದ್ಗುರುಗಳ ವಿಶೇಷ ನಡೆ: ಧರ್ಮ ಜಾಗೃತಿಯೊಂದಿಗೆ ಸಮಾಜಿಕ ಕಳಕಳಿಯತ್ತ ಚಿತ್ತ ಹರಿಸಿದ ಸ್ವಾಮೀಜಿ;

ಕೆಲವು ಕಾವಿಧಾರಿಗಳ ಕರ್ಮಕಾಂಡಗಳ ನಡುವೆ ಆಂಧ್ರಪ್ರದೇಶದ ಶ್ರೀಶೈಲ ಪೀಠದ ಜಗದ್ಗುರುಗಳು ಧರ್ಮ ಜಾಗೃತಿ ಜೊತೆಗೆ ಉತ್ತಮ ಸಮಾಜ ನಿರ್ಮಾಣ ಹಾಗೂ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ.

ಜಗದ್ಗುರುಗಳ ವಿಶೇಷ ನಡೆ: ಧರ್ಮ ಜಾಗೃತಿಯೊಂದಿಗೆ ಸಮಾಜಿಕ ಕಳಕಳಿಯತ್ತ ಚಿತ್ತ ಹರಿಸಿದ ಸ್ವಾಮೀಜಿ;
ಧರ್ಮ ಜಾಗೃತಿಯೊಂದಿಗೆ ಸಮಾಜಿಕ ಕಳಕಳಿಯತ್ತ ಚಿತ್ತ ಹರಿಸಿದ ಶ್ರೀಶೈಲ ಪೀಠದ ಸ್ವಾಮೀಜಿ
TV9 Web
| Edited By: |

Updated on: Nov 10, 2022 | 10:57 AM

Share

ವಿಜಯಪುರ: ರಾಜ್ಯದಲ್ಲಿ ಮುರುಘಾ ಶರಣರ ಬಗ್ಗೆಯೇ ಚರ್ಚೆ ನಡೆಯುತ್ತಿದ್ದು, ಮುರುಘಾ ಮಠದಲ್ಲಿ ನಡೆದ ಕಾಮ ಕರ್ಮಕಾಂಡ ಘಟನೆ ಇನ್ನಿತರ ಮಠ ಮಾನ್ಯಗಳನ್ನೂ ಸಹ ಸಂಶಯದಿಂದ ನೋಡುವಂತೆ ಮಾಡಿದೆ. ಮಠಗಳೆಂದರೆ ಪೂಜ್ಯ ಭಾವನೆಯಿಂದ ನೋಡಲಾಗದಂತಾಗಿದೆ. ಈ ನಡುವೆ ಧರ್ಮ ಜಾಗೃತಿಯಷ್ಟೇಯಲ್ಲಾ ಸಮಾಜಿಕ ಕಳಕಳಿ, ಪರಿಸರ ಕಳಕಳಿಯತ್ತ ಓರ್ವ ಜಗದ್ಗುರುಗಳು ಚಿತ್ತ ಹರಿಸಿದ್ದಾರೆ. ಆಂಧ್ರಪ್ರದೇಶದ ಶ್ರೀಶೈಲ (Andra Pradesh Srisaila) ಪೀಠದ ಜಗದ್ಗುರುಗಳಾಗಿ ಕೇವಲ ಧಾರ್ಮಿಕ ಕಾಯಕ ಮಾಡದೇ ಜನರ ಬಳಿ ಬಂದು ಜನರಲ್ಲಿ ಜನ ಸಾಮಾನ್ಯರಾಗಿದ್ದಾರೆ.

ಇಂದು ಕಾವೀಧಾರಿಗಳ ಬಗ್ಗೆ ಸಂಶಯದಿಂದ ನೋಡುವಂತಾಗಿದೆ. ರಾಜ್ಯದಲ್ಲಿ ನಡೆದ ಕೆಲ ಮಠಾಧೀಶರ ನಡೆ ಇದಕ್ಕೆ ಕಾರಣವಾಗಿದೆ. ಇವೆಲ್ಲದರ ನಡುವೆ ನೆರೆಯ ಆಂಧ್ರಪ್ರದೇಶದ ಶ್ರೀಶೈಲ ಪೀಠದ ಜಗದ್ಗುರು ಶ್ರೀ 1008 ಡಾ ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ವಿಭಿನ್ನ ಕಾರ್ಯಕ್ರಮ ಮಾಡುತ್ತಿದ್ದಾರೆ. ಸ್ವಾಮೀಜಿ ಕಳೆದ ಅಕ್ಟೋಬರ್ 29 ರಂದು ಯಡಿಯೂರಿನಿಂದ ಶ್ರೀಶೈಲದವರೆಗೆ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಇದೇ ತಿಂಗಳು 30ಕ್ಕೆ ಜಗದ್ಗುರುಗಳ ಪಾದಯಾತ್ರೆ ಶ್ರೀಶೈಲ ತಲುಪಲಿದೆ. ಒಟ್ಟು 590 ಕಿಲೋ ಮೀಟರ್ ಪಾದಯಾತ್ರೆಯಲ್ಲಿ ನಿತ್ಯ 30 ಕಿ.ಮೀ. ಪಾದಯಾತ್ರೆಯನ್ನು ಜಗದ್ಗುರುಗಳು ಮಾಡುತ್ತಿದ್ದಾರೆ.

ಪಾದಯಾತ್ರೆ ವೇಳೆ ಧರ್ಮ ಜಾಗೃತಿ ಮಾಡುವುದರ ಜೊತೆಗೆ ವಿವಿಧ ಸಮಾಜ ಸೇವೆಗೆ ಅಣಿಯಾಗಿದ್ದಾರೆ. ಯುವಕರ ದುಶ್ಚಟ ಮುಕ್ತ ಮಾಡುವುದು, ಸಮಾಜಿಕ ಸೇವೆಗೆ ಧರ್ಮ ಸೇವೆಗೆ ಅಣಿಗೊಳಿಸುವುದು, ಪರಿಸರ ರಕ್ಷಣೆಗಾಗಿ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡುವು ಕಾರ್ಯಕವನ್ನು ಮಾಡುತ್ತಿದ್ದಾರೆ.

ಯಡಿಯೂರಿನಿಂದ ಆರಂಭವಾದ ಶ್ರೀಗಳ ಪಾದಯಾತ್ರೆ ಇದೀಗಾ ಬಸವನಬಾಗೇವಾಡಿ ಪಟ್ಟಣಕ್ಕೆ ಬಂದು ತಲುಪಿದೆ. ನಿತ್ಯ ಭಕ್ತರಿಗೆ ಲಿಂಗ ದೀಕ್ಷೆ, ಧಾರ್ಮಿಕ ಬೋಧನೆ, ಧರ್ಮಸಭೆ ಮಾಡುವುದು ನಡೆದುಕೊಂಡು ಬಂದಿದೆ. ಬಳಿಕ ಪಾದಯಾತ್ರೆಯಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಜಗದ್ಗುರುಗಳು ಮುಂದಾಗಿದ್ದಾರೆ. ಪಾದಯಾತ್ರೆಯ ವೇಳೆ ದುಶ್ಚಟಗಳಿಂದ ದೂರವಿರಬೇಕೆಂದು ಯುವ ಸಮೂಹಕ್ಕೆ ತಿಳವಳಿಕೆ ನೀಡುತ್ತಿದ್ದಾರೆ. ಅನಾರೋಗ್ಯಕ್ಕೆ ಕಾರಣವಾಗುವ ತಂಬಾಕು ಗುಟ್ಕಾ ಸೇವೆನೆ ಬಿಡಲು, ಮದ್ಯಪಾನ ಸೇವನೆ ಮಾಡದಂತೆ ಮನವಿ ಮಾಡುತ್ತಾ ಸಾಗುತ್ತಿದ್ದಾರೆ.

ನಿನ್ನೆ ಶ್ರೀಗಳ ಪಾದಯಾತ್ರೆಯಲ್ಲಿ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಹಾಗೂ ಇತರರು ಭಾಗಿಯಾಗಿದ್ದರು. ಬಸವನಬಾಗೇವಾಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಪಾದಯಾತ್ರೆ ಹೂವಿನಹಿಪ್ಪರಗಿಯತ್ತ ಸಾಗಿತು. ಶ್ರೀಶೈಲ ಪೀಠದ ಜಗದ್ಗುರು ಶ್ರೀ 1008 ಡಾ ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ವೈಶಿಷ್ಟ್ಯದ ಕಾರ್ಯಕ್ಕೆ ಜನ ಸಾಮಾನ್ಯರು, ಸ್ಥಳಿಯ ಕಾವೀಧಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾದಯಾತ್ರೆಯಲ್ಲಿ ಆನೆ ಮೆರವಣಿಗೆ, ಪುಟ್ಟ ರಥ ಯಾತ್ರೆ, ಸ್ತಬ್ದ ಚಿತ್ರ, ವಿವಿಧ ಕಲಾ ತಂಡಗಳು ಎಲ್ಲರನ್ನು ಸೆಳೆಯುವಂತಿದ್ದವು.

ಒಟ್ಟಾರೆ ರಾಜ್ಯದಲ್ಲಿ ವಿವಿಧ ಮಠಗಳ ಬಗ್ಗೆ ಇರುವ ಆರೋಪ ಪ್ರತ್ಯಾರೋಪಗಳ ಮಧ್ಯೆ ಶ್ರೀಶೈಲ ಜಗದ್ಗುರುಗಳ ವಿಶಿಷ್ಟ ಪಾದಯಾತ್ರೆ ಮಾತ್ರ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಪೀಠದಲ್ಲಿಯೇ ಇರುತ್ತಿದ್ದ ಜಗದ್ಗುರುಗಳನ್ನು ನೋಡಲು ಹರಸಾಹಸ ಪಡುತ್ತಿದ್ದ ನಮಗೆ ಇಂದು ಜಗದ್ಗುರುಗಳು ನಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ. ಜನರಲ್ಲಿ ಜನರಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ವಿವಿಧ ಸಮಾಜಿ ಕೆಲಸಗಳನ್ನು ಮಾಡುವ ಮೂಲಕ ಬದಲಾವಣೆಗೆ ನಾಂದಿ ಹಾಡಿದ್ದಾರೆಂದು ಜನರು ಸಂತಸಪಟ್ಟಿದ್ದಾರೆ. ಪಾದಯಾತ್ರೆ ಇದೀಗಾ ಮುಂದೆ ಸಾಗಿದೆ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್