ಅಂಗನವಾಡಿ ಶಾಲಾ ಶಿಕ್ಷಕಿಯ ಗಂಡನಿಂದ ಅಪ್ರಾಪ್ತ ಮೇಲೆ ಅತ್ಯಾಚಾರ.. ಬಾಲಕಿ ರಕ್ಷಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು
ಬಾಲಕಿ ಜಿಲ್ಲೆಯ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯವೊಂದರಲ್ಲಿ 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ಳು. ಆದ್ರೆ ಕೊರೊನಾ ಲಾಕ್ಡೌನ್ ಹಿನ್ನಲೆ ಬಾಲಕಿ ತನ್ನ ಸ್ವಗ್ರಾಮಕ್ಕೆ ಆಗಮಿಸಿ ತಂದೆ ತಾಯಿಯ ಜೊತೆ ವಾಸವಿದ್ದಳು.
ಚಿಕ್ಕಬಳ್ಳಾಪುರ: ಮಕ್ಕಳು ಹಾಗೂ ಅಪ್ರಾಪ್ತ ಬಾಲಕಿಯರನ್ನು ರಕ್ಷಣೆ ಮಾಡಬೇಕಾದ ಅಂಗನವಾಡಿ ಶಾಲಾ ಶಿಕ್ಷಕಿಯ ಗಂಡ, ಗ್ರಾಮದ 15 ವರ್ಷದ 8ನೇ ತರಗತಿಯ ಬಾಲಕಿಯನ್ನು ನಿರಂತರವಾಗಿ ಅತ್ಯಾಚಾರ ಎಸಗಿ ಬೆದರಿಕೆ ಹಾಕಿರುವ ಪ್ರಕರಣ ಬಯಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಹಾಗೂ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಇಂಥ ಹೀನ ಕೃತ್ಯ ನಡೆದಿದೆ.
ಬಾಲಕಿ ಜಿಲ್ಲೆಯ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯವೊಂದರಲ್ಲಿ 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ಳು. ಆದ್ರೆ ಕೊರೊನಾ ಲಾಕ್ಡೌನ್ ಹಿನ್ನಲೆ ಬಾಲಕಿ ತನ್ನ ಸ್ವಗ್ರಾಮಕ್ಕೆ ಆಗಮಿಸಿ ತಂದೆ ತಾಯಿಯ ಜೊತೆ ವಾಸವಿದ್ದಳು. ಗ್ರಾಮದ ಅಂಗನವಾಡಿ ಶಾಲಾ ಶಿಕ್ಷಕಿ ಚಂದ್ರಿಕಾಳ ಪತಿ 37 ವರ್ಷದ ಸಂತೋಷ ಎನ್ನುವ ವ್ಯಕ್ತಿ ಬಾಲಕಿಯನ್ನು ಪುಸಲಾಯಿಸಿ ನಂತರ ಆಕೆಯ ಸಂಭಾಷಣೆಯನ್ನು ರೆಕಾರ್ಡ್ಮಾಡಿಕೊಂಡು ಅಪ್ರಾಪ್ತಳಿಗೆ ಪ್ರಾಣ ಬೆದರಿಕೆ ಹಾಕಿ ಆಕೆಯನ್ನು ಗ್ರಾಮ ಹೊರಹೊಲಯದ ಕೋಳಿ ಪಾರ್ಮ್ಗೆ ಕರೆಸಿಕೊಂಡು ಕಳೆದ ವಾರದಿಂದ ಐದಾರು ಬಾರಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ಅಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾಳೆ.
ಪ್ರಥಮ ಬಾರಿಗೆ ಅತ್ಯಾಚಾರ ನಡೆಸಿದಾಗಲೆ ಬಾಲಕಿ ಈ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ಹಾಗೂ ಬಾಲಕಿ ಆರೋಪಿ ಸಂತೋಷನ ಕೃತ್ಯವನ್ನು ಅಂಗನವಾಡಿ ಶಿಕ್ಷಕಿ ಚಂದ್ರಿಕಾ ಹಾಗೂ ಆತನ ತಂದೆ ತಾಯಿಗೆ ಹೇಳಿದ್ದಕ್ಕೆ ಅವರು ಸಹ ಬಾಲಕಿ ಹಾಗೂ ಬಾಲಕಿಯ ತಂದೆ ತಾಯಿಗೆ ಬೆದರಿಕೆ ಹಾಕಿದ್ದಾರಂತೆ. ಎರಡು ಮೂರು ಭಾರಿ ಸ್ಥಳೀಯ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಡಲು ಗ್ರಾಮದಿಂದ ಆಚೆ ಬರುತ್ತಿದ್ದಂತೆ ಸ್ಥಳೀಯ ಮುಖಂಡರು ಗ್ರಾಮದಲ್ಲಿ ನ್ಯಾಯ ಪಂಚಾಯತಿ ಮಾಡೋಣ ದೂರು ಕೊಟ್ರೆ ಬಾಲಕಿಯದೆ ಮರ್ಯಾದೆ ಹೊಗುತ್ತೆ ಅಂತ ನೊಂದವರಿಗೆ ಮಿಸ್ ಗೈಡ್ ಮಾಡಿದ್ದಾರೆ.
ಇನ್ನೂ ಈ ಕುರಿತು ಇಂದು ಟಿವಿ9 ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಶಿಡ್ಲಘಟ್ಟ ಮಹಿಳಾ ಸಾಂತ್ವಾನ ಕೇಂದ್ರದ ಮುಖ್ಯಸ್ಥೆ ಡಾ.ವಿಜಯಾ.. ನೊಂದ ಬಾಲಕಿಯ ಮನೆಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದ್ದು ಬಾಲಕಿಯನ್ನು ರಕ್ಷಣೆ ಮಾಡಿ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರು ಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಬಾಲ ಮಂದಿರಲ್ಲಿ ಬಾಲಕಿಗೆ ಆಶ್ರಯ ಕಲ್ಪಿಸಿದ್ದಾರೆ. ಮತ್ತೊಂದೆಡೆ ಆರೋಪಿ ಸಂತೋಷ ವಿರುದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಿಬ್ಬೂರಹಳ್ಳಿ ಪೊಲೀಸರಿಗೆ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ಸಾಲುಸಾಲು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದರೂ ಪೊಲೀಸರು ಮಾತ್ರ ನಿಷ್ಕ್ರಿಯ