ಶೂನ್ಯದತ್ತ ಕೊರೊನಾ! ನವೆಂಬರ್ 8ರಿಂದ ರಾಜ್ಯದಲ್ಲಿ ಅಂಗನವಾಡಿ ಓಪನ್; ಸರ್ಕಾರದಿಂದ ಗೈಡ್‌ಲೈನ್ಸ್ ಬಿಡುಗಡೆ

ನವೆಂಬರ್ 8ರಿಂದ ರಾಜ್ಯದಲ್ಲಿ ಅಂಗನವಾಡಿ ಓಪನ್ ಆಗುತ್ತಿದ್ದು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಕಡ್ಡಾಯವಾಗಿ 2 ಡೋಸ್ ಲಸಿಕೆಯನ್ನು ಪಡೆದಿರಬೇಕು. ಅಂಗನವಾಡಿ ಕೇಂದ್ರವನ್ನ ಸ್ವಚ್ಛಗೊಳಿಸಬೇಕು.

ಶೂನ್ಯದತ್ತ ಕೊರೊನಾ! ನವೆಂಬರ್ 8ರಿಂದ ರಾಜ್ಯದಲ್ಲಿ ಅಂಗನವಾಡಿ ಓಪನ್;  ಸರ್ಕಾರದಿಂದ ಗೈಡ್‌ಲೈನ್ಸ್ ಬಿಡುಗಡೆ
ಅಂಗನವಾಡಿ ಕೇಂದ್ರ
Follow us
TV9 Web
| Updated By: ಆಯೇಷಾ ಬಾನು

Updated on:Nov 03, 2021 | 12:01 PM

ಬೆಂಗಳೂರು: ಮಹಾಮಾರಿ ಕಾಟದಿಂದ ಮುಚಿದ್ದ ಅಂಗನವಾಡಿಗಳನ್ನು ತೆರೆಯಲು ಸರ್ಕಾರ ಮುಂದಾಗಿದ್ದು ನವೆಂಬರ್ 8ರಿಂದ ರಾಜ್ಯದಲ್ಲಿ ಅಂಗನವಾಡಿ ಓಪನ್ ಮಾಡಲು ಮಹಿಳಾ&ಮಕ್ಕಳ ಕಲ್ಯಾಣ ಇಲಾಖೆಯಿಂದ ಗೈಡ್‌ಲೈನ್ಸ್ ಹೊರಡಿಸಲಾಗಿದೆ.

ಅಂಗನವಾಡಿ ಕೇಂದ್ರಗಳನ್ನು ಪುನರ್ ಪ್ರಾರಂಭಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಬಾಲವಿಕಾಸ ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಕರೆತರಲು ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪಾಲಿಸಬೇಕಾದ ಅಂಶಗಳ ಕುರಿತು ಮಹಿಳಾ&ಮಕ್ಕಳ ಕಲ್ಯಾಣ ಇಲಾಖೆ ಕೈಪಿಡಿ ಸಿದ್ಧಗೊಳಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಂಚಲಾಗಿದೆ. ನವೆಂಬರ್ 8ರಿಂದ ರಾಜ್ಯದಲ್ಲಿ ಅಂಗನವಾಡಿ ಓಪನ್ ಆಗುತ್ತಿದ್ದು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಕಡ್ಡಾಯವಾಗಿ 2 ಡೋಸ್ ಲಸಿಕೆಯನ್ನು ಪಡೆದಿರಬೇಕು. ಅಂಗನವಾಡಿ ಕೇಂದ್ರವನ್ನ ಸ್ವಚ್ಛಗೊಳಿಸಬೇಕು. ರಾಸಾಯನಿಕ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇನ್ನು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ರಾಜ್ಯಾದ್ಯಂತ ಒಂದೂವರೆ ವರ್ಷಗಳಿಂದ ಮುಚ್ಚಲಾಗಿದ್ದ ಅಂಗನವಾಡಿಗಳು ನವೆಂಬರ್ 8 ರಿಂದ ಪೂರ್ಣ ಪ್ರಮಾಣದಲ್ಲಿ ಪುನರಾರಂಭಗೊಳ್ಳಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಮಂಗಳವಾರ ತಿಳಿಸಿದ್ದಾರೆ. ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆದು ಅಂಗನವಾಡಿಗಳನ್ನು ಪುನರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಕೊರೊನಾ ಮೂರನೆ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಗಳಿದ್ದು, ಮೂರನೆ ಅಲೆಯಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಅಂಗನವಾಡಿ ಕೇಂದ್ರಗಳ ಪುನರಾರಂಭಕ್ಕೆ ತಜ್ಞರು ಒಪ್ಪಿಗೆ ನೀಡಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆ, ಅಂಗನವಾಡಿ, ಕಾಲೇಜುಗಳಿಗೆ ಶೌಚಾಲಯ ನಿರ್ಮಾಣ ಗಡುವು!

Published On - 11:52 am, Wed, 3 November 21