ಬೆಂಗಳೂರಿನಲ್ಲಿ ಮಂಗಳವಾರ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ
ಪಿಂಚಣಿ ಸೌಲಭ್ಯ ಸೇರಿದಂತೆ 7 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ(ಮಾರ್ಚ್ 2) ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ.
ಬೆಂಗಳೂರು: ಪಿಂಚಣಿ ಸೌಲಭ್ಯ ಸೇರಿದಂತೆ 7 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ(ಮಾರ್ಚ್ 2) ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಕೆ.ಎಸ್.ಆರ್ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‌ವರೆಗೆ ಱಲಿ ನಡೆಯಲಿದೆ. ತಮ್ಮ ಬೇಡಿಕೆಗಳ್ನು ಈಡೇರಿಸುವಂತೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ರಾಜಧಾನಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ. ಸರ್ಕಾರದ ವಿರುದ್ಧ ಬೆಳಗ್ಗೆ 11 ಗಂಟೆಗೆ ಅಂಗನವಾಡಿ ಕಾರ್ಯಕರ್ತೆಯರು ಪತ್ರಿಭಟನೆ ನಡೆಸಲು ಸಜ್ಜಾಗಿದ್ದಾರೆ. ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೆ ಪ್ರತಿಭಟನಾ ಱಲಿ ನಡೆಯಲಿದೆ. ಸೇವಾ ಹಿರಿತನದ ಆಧಾರದಲ್ಲಿ ಗೌರವಧನ ಹೆಚ್ಚಳ, ಉಚಿತ ವೈದ್ಯಕೀಯ ಸೌಲಭ್ಯ ಅಥವಾ ಇಎಸ್‌ಐ ಸೌಲಭ್ಯ ನೀಡುವಂತೆ ಆಗ್ರಹಿಸಲಿದ್ದಾರೆ.
ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳು ಈ ಕೆಳಗಿನಂತಿದೆ
* ಪಿಂಚಣಿ ಯೋಜನೆಯನ್ನ ಜಾರಿಗೆ ತರಬೇಕು * ಸೇವಾ ನಿರತ ಆಧಾರದಲ್ಲಿ ಗೌರವಧನ ನೀಡಬೇಕು * ಉಚಿತ ವೈದ್ಯಕೀಯ ಸೌಲಭ್ಯ ಹಾಗೂ ಇಎಸ್‌ಐ ಸೌಲಭ್ಯಗಳನ್ನ ಒದಗಿಸಿಕೊಟ್ಟಿಲ್ಲ * ಎಲ್ ಕೆ ಜಿ ಹಾಗೂ ಯು.ಕೆ.ಜಿ ತರಗತಿಗಳನ್ನ ಅಂಗನವಾಡಿಗಳಲ್ಲೇ ಆರಂಭಿಸಬೇಕು * ಮಿನಿ ಅಂಗನವಾಡಿಗಳನ್ನ ಉನ್ನತೀಕರಿಸುವ ಜೊತೆಗೆ, ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನ ನೇಮಕಾತಿ ಮಾಡಬೇಕು * ಬಿಎಲ್ಓ ಜವಾಬ್ದಾರಿಯಿಂದ ಕಾರ್ಯರ್ತೆಯರಿಗೆ ಬಿಡುಗಡೆ ಸಿಗಬೇಕು * ಕೊವೀಡ್ 19 ಪರಿಹಾರವನ್ನ ನೀಡಬೇಕು
ಇದನ್ನೂ ಓದಿ: Anganavadi toilet: ಅಂಗನವಾಡಿಗಳಲ್ಲಿ ಶೌಚಾಲಯ ಇಲ್ಲ! ಅಧಿಕಾರಿಗಳ ವಿರುದ್ಧ ಜಿ.ಪಂ. ಸದಸ್ಯರು ಆಕ್ರೋಶ, ಧರಣಿ
ಇದನ್ನೂ ಓದಿ: ಅಂಗನವಾಡಿ ಕೇಂದ್ರ ಪುನರಾರಂಭ: ರಾಜ್ಯ ಸರ್ಕಾರದಿಂದ ಆದೇಶ, ಕೊರೊನಾ ಮಾರ್ಗಸೂಚಿ ಅನ್ವಯ
Published On - 1:08 pm, Mon, 1 March 21