ಧಾರವಾಡ: ಜನವರಿ 31 ರಂದು ಅಂಕೋಲಾ ತಾಲೂಕಿನ ಮಾಸ್ತಿಕಟ್ಟಿ ಬಳಿ ನಡೆದಿದ್ದ ಅಪಘಾತದಲ್ಲಿ ರೇಖಾ, ಮೇಘನಾ ಎಂಬ ಇಬ್ಬರು ಯುವತಿಯರು ಮರಣ ಹೊಂದಿದ್ದರು. ಯುವತಿಯರು, ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ, ಕೃಷಿ ವಿಶ್ವವಿದ್ಯಾಲಯದ ವೈಸ್ ಛಾನ್ಸಲರ್ ಆಪ್ತ ಕಾರ್ಯದರ್ಶಿ ಮುಲ್ಲಾ ಜೊತೆ ಗೋವಾಗೆ ತೆರಳಿದ್ದರು. ಮನೆಗೆ ವಾಪಸ್ ಬರುವಾಗ ಅಪಘಾತ ಸಂಭವಿಸಿ ಇಬ್ಬರೂ ಯುವತಿಯರು ಮರಣ ಹೊಂದಿದ್ದಾರೆ. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ.
ಕೃಷಿ ವಿಶ್ವವಿದ್ಯಾಲಯದ ವೈಸ್ ಛಾನ್ಸಲರ್ ಆಪ್ತ ಕಾರ್ಯದರ್ಶಿ ಮುಲ್ಲಾ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ವಿಷಯ ಇದೀಗ ಬಹಿರಂಗವಾಗಿದೆ. ಮುಲ್ಲಾ ಕಿರುಕುಳ ನೀಡುತ್ತಿದ್ದ ವಿಷಯವನ್ನು ಮೇಘನಾ ತನ್ನ ಗೆಳೆತಿಯೊಂದಿಗೆ ಹಂಚಿಕೊಂಡಿದ್ದಳು. ಇದೀಗ ಈ ವಿಷಯ ಬಹಿರಂಗವಾಗಿದೆ. ಡಿಸೆಂಬರ್ ತಿಂಗಳೇ ನಿನ್ನ ಕೆಲಸ ಕೊನೆ ಎಂದು ಮುನ್ನ ಹೇಳುತ್ತಿರುತ್ತಾನೆ. ಇದರಿಂದ ನನಗೆ ಆತಂಕವಾಗುತ್ತಿದೆ ಎಂದು ಮೇಘನಾ ನೋವು ತೋಡಿಕೊಂಡಿದ್ದರು. ಆತಂಕವನ್ನೇ ವೈಯಕ್ತಿಕ ಲಾಭಕ್ಕೆ ಮುಲ್ಲಾ ಬಳಸಿಕೊಂಡಿದ್ದಾರಾ? ಎಂಬ ಶಂಕೆ ಇದೀಗ ಮೂಡಿದೆ.
ಪ್ರಕರಣದ ತನಿಖೆಗೆ ಜನಜಾಗೃತಿ ಸಂಘಟನೆ ಆಗ್ರಹಿಸಿದೆ. ಕೆಲಸ ಮುಂದುವರೆಸಲು ಯುವತಿಯರಿಗೆ ಕಿರುಕುಳ ನೀಡಲಾಗಿದೆ ಅನ್ನೋ ಆರೋಪ ಕೇಳಿಬರುತ್ತಿದೆ. ತನಿಖೆಗೆ ಜಯ ಕರ್ನಾಟಕ ಸಂಘಟನೆ ಕೂಡ ಆಗ್ರಹಿಸಿದ್ದು, ಯುವತಿ ಆಪ್ತರೊಡನೆ ನಡೆಸಿದ್ದ ವಾಟ್ಸಾಪ್ ಚಾಟ್ ಇದೀಗ ಬಹಿರಂಗವಾಗಿದೆ.
ಇದನ್ನೂ ಓದಿ: ಧಾರವಾಡ ಅಪಘಾತದ ಬಗ್ಗೆ ವರದಿ ನೀಡಿ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಮಿತಿ ಸೂಚನೆ
ಇದನ್ನೂ ಓದಿ: ಧಾರವಾಡ ಅಪಘಾತದಲ್ಲಿ ಮೃತದೇಹ ಅದಲುಬದಲು: ನಾಯಿಮರಿ ಟ್ಯಾಟೂ ಸಹಾಯದಿಂದ ಮಹಿಳೆಯ ಶವ ಪತ್ತೆ