ಪಿಡಿಎಸ್ ಪಡಿತರ ವಿತರಕರಿಗೆ ಗುಡ್​ನ್ಯೂಸ್: 1 ಕೆಜಿ ಅಕ್ಕಿಯ ಕಮಿಷನ್ ಮೊತ್ತ 1.5 ರೂ.ಗೆ ಹೆಚ್ಚಳ

| Updated By: Rakesh Nayak Manchi

Updated on: Mar 01, 2024 | 10:00 AM

ಪಿಡಿಎಸ್ ವಿತರಕರ ಬಹುಕಾಲದ ಬೇಡಿಕೆಯಾಗಿರುವ ಕಮಿಷನ್ ಮೊತ್ತ ಹೆಚ್ಚಳಕ್ಕೆ ಕರ್ನಾಟಕ ಸರ್ಕಾರ ಈಡೇರಿಸಿದೆ. ಒಂದು ಕೆಜಿ ಅಕ್ಕಿಯ ಪಿಡಿಎಸ್ ವಿತರಕರ ಕಮಿಷನ್ ಮೊತ್ತವನ್ನು 1.24 ರೂ.ನಿಂದ 1.5 ರೂಪಾಯಿಗೆ ಹೆಚ್ಚಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಪಿಡಿಎಸ್ ಪಡಿತರ ವಿತರಕರಿಗೆ ಗುಡ್​ನ್ಯೂಸ್: 1 ಕೆಜಿ ಅಕ್ಕಿಯ ಕಮಿಷನ್ ಮೊತ್ತ 1.5 ರೂ.ಗೆ ಹೆಚ್ಚಳ
ಪಿಡಿಎಸ್ ಪಡಿತರ ವಿತರಕರಿಗೆ ಗುಡ್​ನ್ಯೂಸ್: 1 ಕೆಜಿ ಅಕ್ಕಿಯ ಕಮನಿಷನ್ ಮೊತ್ತ 1.5 ರೂ. ಹೆಚ್ಚಳ
Follow us on

ಬೆಂಗಳೂರು, ಮಾ.1: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಫಲಾನುಭವಿಗಳಿಗೆ ನೀಡುವ ಒಂದು ಕೆಜಿ ಅಕ್ಕಿಯ ಪಿಡಿಎಸ್ ವಿತರಕರ ಕಮಿಷನ್ ಮೊತ್ತವನ್ನು 1.24 ರೂಪಾಯಿಯಿಂದ 1.5 ರೂಪಾಯಿಗೆ ಹೆಚ್ಚಿಸುವುದಾಗಿ ಗುರುವಾರ ಘೋಷಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನ್ನಭಾಗ್ಯ (Anna Bhagya) ಯೋಜನೆಯ 10 ವರ್ಷಗಳ ಸಂಭ್ರಮಾಚರಣೆಯ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ವಿತರಕರ ಬಹುಕಾಲದ ಬೇಡಿಕೆಯಾಗಿರುವ ಈ ಘೋಷಣೆಯನ್ನು ಮಾಡಿದರು.

ಈ ಯೋಜನೆಯನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೊದಲ ಅವಧಿಯಲ್ಲಿ ಘೋಷಿಸಿದ್ದರು. ಕರ್ನಾಟಕವನ್ನು ಹಸಿವು ಮುಕ್ತಗೊಳಿಸುವುದೇ ಈ ಯೋಜನೆಯ ಉದ್ದೇಶವಾಗಿದೆ ಎಂದ ಮುಖ್ಯಮಂತ್ರಿ, ಪ್ರತಿಪಕ್ಷ ಬಿಜೆಪಿಯು ಬಡವರಿಗಾಗಿ ಉದ್ದೇಶಿಸಿರುವ ಯೋಜನೆಯನ್ನು ಲೇವಡಿ ಮಾಡಿರುವುದು ದುರಂತ ಎಂದು ಹೇಳಿದರು. ಬಿಜೆಪಿ ಭಾರತವನ್ನು ‘ಕಾಂಗ್ರೆಸ್ ಮುಕ್ತ’ ಮಾಡಲು ಬಯಸುತ್ತದೆ, ಆದರೆ ಕಾಂಗ್ರೆಸ್ ಭಾರತ ‘ಹಸಿವು ಮುಕ್ತ’ ಮಾಡಲು ಬಯಸುತ್ತದೆ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಸಚಿವ ಸಂಪುಟ ಸಭೆ: ಬರ, ಆರೋಗ್ಯ ಸೇರಿ ಮಹತ್ವದ ನಿರ್ಣಯಗಳಿಗೆ ಅನುಮೋದನೆ

ಬಸವೇಶ್ವರರು ಪ್ರಚಾರ ಮಾಡಿದ ಅನ್ನ ದಾಸೋಹದ ಪರಿಕಲ್ಪನೆಯಿಂದ ಈ ಯೋಜನೆಯು ಪ್ರೇರಿತವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಹೀಗಾಗಿ ನಾವು ಫಲಾನುಭವಿಗಳಿಗೆ ಐದು ಕೆಜಿ ಹೆಚ್ಚುವರಿ ಅಕ್ಕಿಯ ಹಣ ನೀಡುತ್ತಿದ್ದೇವೆ. ನೀವು ಮತ ಹಾಕಿದಾಗ ಬಡವರ ಪರವಾಗಿ ಯಾರು ಇದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:53 am, Fri, 1 March 24