AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಸಿಗರನ್ನು ಸೆಳೆಯುತ್ತಿರುವ ದಕ್ಷಿಣ ಕಾಶಿ ಕ್ಷೇತ್ರ ‘ಅಂತರಗಂಗೆ ಬೆಟ್ಟ’ ಇಲ್ಲಿದೆ ಕೆಲವು ವಿಶೇಷತೆಗಳು

Antara Gange Hill: ಕೋಲಾರ ಜಿಲ್ಲೆಯಲ್ಲಿರುವ ಅಂತರಗಂಗೆ ಬೆಟ್ಟವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ನಿರಂತರ ಮಳೆಯಿಂದ ಕಿರು ಜಲಪಾತಗಳು ಹರಿಯುತ್ತಿದ್ದು, ಇದನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ಕೊಡುತ್ತಿದ್ದಾರೆ.

ಪ್ರವಾಸಿಗರನ್ನು ಸೆಳೆಯುತ್ತಿರುವ ದಕ್ಷಿಣ ಕಾಶಿ ಕ್ಷೇತ್ರ 'ಅಂತರಗಂಗೆ ಬೆಟ್ಟ' ಇಲ್ಲಿದೆ ಕೆಲವು ವಿಶೇಷತೆಗಳು
ಅಂತರ ಗಂಗೆ ಬೆಟ್ಟ
TV9 Web
| Updated By: Rakesh Nayak Manchi|

Updated on:Sep 14, 2022 | 5:58 PM

Share

ಕೋಲಾರ: ಜಿಲ್ಲೆಯಲ್ಲಿರುವ ಅಂತರಗಂಗೆ ಬೆಟ್ಟವು ಸ್ಥಳೀಯರನ್ನು ಮಾತ್ರವಲ್ಲದೆ ನೂರಾರು ಸಂಖ್ಯೆಯಲ್ಲಿ  ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ದಕ್ಷಿಣ ಕಾಶಿ ಕ್ಷೇತ್ರವೆಂದೇ ಹೇಳಲಾಗುವ ಅಂತರಗಂಗೆ ಬೆಟ್ಟದಲ್ಲಿನ ದೇವಾಲಯದ ಬಳಿ ನಿರಂತರವಾಗಿ ನೀರು ಚಿಮ್ಮುತ್ತಿರುತ್ತದೆ. ಹಚ್ಚ ಹಸಿರು ಬಣ್ಣದಿಂದ ಕೂಡಿರುವ ಈ ಪ್ರದೇಶ ಪೈರು ಪಚ್ಚೆಗಳು, ಮರ ಗಿಡಗಳು ಹಾಗೂ ಸಣ್ಣ-ದೊಡ್ಡ ಗಾತ್ರದ ಬಂಡೆಗಲ್ಲಿನಿಂದ ಕೂಡಿ ಕಂಗೊಳಿಸುತ್ತಿದೆ. ಅನೇಕ ನಿಗೂಢಗಳನ್ನು ಹೊಂದಿರುವ ಪುಣ್ಯ ಕ್ಷೇತ್ರವೂ ಹೌದು. ಸದ್ಯ ಈ ಕ್ಷೇತ್ರಕ್ಕೆ ನಿತ್ಯ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿರಂತರ ಮಳೆಯಿಂದ ಅಲ್ಲಿರುವ ಕಿರು ಜಲಪಾತಗಳು ಹರಿಯುತ್ತಿರುವುದೇ ಇದಕ್ಕೆ ಕಾರಣ.

ಅಂತರಗಂಗೆಯ ವಿಶೇಷತೆ

ಅಂತರಗಂಗೆಯು ವಿಶಿಷ್ಟವಾದ ಪ್ರಾಕೃತಿಕ ಸೌಂದರ್ಯದಿಂದ ಕೂಡಿದ ಬೆಟ್ಟ ಶ್ರೇಣಿಯಾಗಿದೆ. ಬೆಂಗಳೂರಿನಿಂದ ಸರಿಸುಮಾರು 70 ಕಿ.ಮೀ ದೂರದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 1226 ಮೀಟರ್ ಎತ್ತರದಲ್ಲಿ ಇದೆ. ಅಂತರಗಂಗೆಯ ಪ್ರಮುಖ ಆಕರ್ಷಣೆಗಳೆಂದರೆ ಬಂಡೆಗಳಿಂದ ರೂಪುಗೊಂಡ ನೈಸರ್ಗಿಕ ಗುಹೆಗಳ ಸರಣಿ. ಅಂತರಗಂಗೆ ಎಂಬ ಹೆಸರು ಗುಡ್ಡಗಾಡು ಪ್ರದೇಶದ ಕಾಶಿ ವಿಶ್ವೇಶ್ವರ ದೇವಸ್ಥಾನದ ಬಳಿ ಕಂಡುಬರುವ ದೀರ್ಘಕಾಲಿಕ ಚಿಲುಮೆಯನ್ನು ಸೂಚಿಸುತ್ತದೆ. ಗುಡ್ಡಗಾಡು ಪ್ರದೇಶವು ಚಾರಣಿಗರು ಮತ್ತು ಸಾಹಸ ಪ್ರಿಯರಿಗೆ ಆಶ್ರಯ ತಾಣವಾಗಿದೆ. ಕೆಲವು ಹಳೆಯ ದೇವಾಲಯಗಳು ಕಾಣಸಿಗುವುದು ಅಂತರಗಂಗೆಯ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.

ಚಿಲುಮೆಯು ಬಂಡೆಯ ಸಣ್ಣ ಸಂದಿಯಿಂದ ಹೊರಬಂದು ವರ್ಷವಿಡೀ ಹರಿಯುತ್ತದೆ. ಇದರ ಮೂಲವು ಎಲ್ಲರಿಗೂ ತಿಳಿದಿಲ್ಲ. ಅದಾಗ್ಯೂ ಚಿಲುಮೆಯಿಂದ ಹೊರಡುವ ನೀರು ದೇಶದ ಪೂರ್ವ ಭಾಗದಲ್ಲಿ ಹರಿಯುವ ಪವಿತ್ರ ಗಂಗಾ ನದಿಯ ಮೂಲವಾಗಿದೆ ಎಂದು ನಂಬಲಾಗಿದೆ. ಅಂತರಗಂಗೆ ಎಂದರೆ ಒಳ ಹೊಳೆ ಅಥವಾ ಆಳದಿಂದ ಬಂದ ಗಂಗೆ ಎಂಬೂದಾಗಿದೆ. ನೀರಿನ ಹರಿವು ಹತ್ತಿರದ ಕೊಳಕ್ಕೆ ಹರಿಯುತ್ತದೆ. ಈ ಅಂತರಗಂಗೆಯ ಚಿಲುಮೆಯ ನೀರನ್ನು ಸ್ಥಳೀಯ ಜನರು ಮತ್ತು ಪ್ರವಾಸಿಗರು ಆಧ್ಯಾತ್ಮಿಕ ಮನಸ್ಸಿನಿಂದ ಪವಿತ್ರವೆಂದು ಪರಿಗಣಿಸುತ್ತಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:14 pm, Wed, 14 September 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ