ರಾಜಧಾನಿಯಲ್ಲಿ ಒತ್ತುವರಿಯಾದ ಕೆರೆಗಳ ಮಾಹಿತಿ ಕೊಡುತ್ತೇನೆ: ಸಚಿವ ಆರ್.ಅಶೋಕ್
ರಾಜಧಾನಿಯಲ್ಲಿಒತ್ತುವರಿಯಾದ ಕೆರೆಗಳ ಮಾಹಿತಿ ಕೊಡುತ್ತೇನೆ ಎಂದು ವಿಧಾನಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರು: ರಾಜಧಾನಿಯಲ್ಲಿ ಒತ್ತುವರಿಯಾದ ಕೆರೆಗಳ (Lake Encroachment) ಮಾಹಿತಿ ಕೊಡುತ್ತೇನೆ ಎಂದು ವಿಧಾನಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ (R Ashok) ಹೇಳಿದ್ದಾರೆ. ಕೆರೆ ಒತ್ತುವರಿ ಮಾಡಿಕೊಂಡವರಿಗೆ ಶಿಕ್ಷೆ ಆಗಬೇಕಲ್ಲವೇ? ಕೆರೆಗಳನ್ನು ಮುಚ್ಚಿದ ಕಾರಣಕ್ಕೆ ಇಂತಹ ಪರಿಸ್ಥಿತಿ ಬಂದಿದೆ. ಅದು ಬಿಟ್ಟು ನಮ್ಮ ಮೇಲೆ ಆರೋಪ ಮಾಡಿದರೆ ಹೇಗೆ? ಎಂದು ಪ್ರತಿಪ್ರಕ್ಷಗಳಿಗೆ ಪ್ರಶ್ನಿಸಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಹಾಳಾದರೆ ನಮಗೆ ಕೆಟ್ಟ ಹೆಸರು. ಬೆಂಗಳೂರಿನಲ್ಲಿ ಸುಮಾರು 30 ಕೆರೆಗಳನ್ನು ಮುಚ್ಚಹಾಕಲಾಗಿದೆ. ಒತ್ತುವರಿ ಆದಾಗ ಅಂದಿನ ಸರ್ಕಾರ ಏನು ಮಾಡುತ್ತಿತ್ತು? ಒಣಗಿರುವ ಕೆರೆ ಮುಚ್ಚಲು ಸಂಪುಟ ಒಪ್ಪಿಗೆ ಪಡೆಯಲಾಗಿದೆ. ಈ ತಪ್ಪು ನಿರ್ಧಾರದಿಂದಾಗಿ ನಾವು ಸಮಸ್ಯೆ ಎದುರಿಸುತ್ತಿದ್ದೇವೆ ಎಂದರು.
ಸಿಂಗಾಪುರ ಕೆರೆಯ ತೂಬುಕಾಲುವೆ ಒತ್ತುವರಿ ತೆರವು ಕಾರ್ಯ: ಬಿಬಿಎಂಪಿ ಮಾಜಿ ಸದ್ಯಸೆ ಪತಿಯಿಂದ ಗಲಾಟೆ
ರಾಜಧಾನಿಯಲ್ಲಿ ಕೆರೆ, ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಭರಪೂರದಿಂದ ಸಾಗುತ್ತಿದ್ದು, ಬೆಂಗಳೂರಿನ ಸಿಂಗಾಪುರ ಕೆರೆಯ ತೂಬುಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಲಾದ ಕಟ್ಟಡವನ್ನು ತೆರವು ಕಾರ್ಯ ವೇಳೆ ಹೈಡ್ರಾಮಾ ನಡೆದಿದೆ. ತೂಬುಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಲ್ಯಾಂಡ್ ಮಾರ್ಕ್ ಡ್ರೀಮ್ ಅಪಾರ್ಟ್ಮೆಂಟ್ ಕಟ್ಟಲಾಗಿತ್ತು.
ಹೀಗಾಗಿ ಬಿಬಿಎಂಪಿ ಸಿಬ್ಬಂದಿಯಿಂದ ಒತ್ತುವರಿಯಾದ 2.4 ಮೀಟರ್ 7 ಅಡಿ ಜಾಗವನ್ನು ತೆರವು ಮಾಡಲಾಗುತ್ತಿತ್ತು. ಈ ಲ್ಯಾಂಡ್ ಮಾರ್ಕ್ ಡ್ರೀಮ್ ಅಪಾರ್ಟ್ಮೆಂಟ್ ಮಹಾನಗರಪಾಲಿಕೆ ಮಾಜಿ ಸದಸ್ಯೆ ನಂದಿನಿ ಪತಿ ಶ್ರೀನಿವಾಸ್ಗೆ ಸೇರಿದ್ದಾಗಿದೆ. ಹಾಗಾಗಿ ತೂಬುಕಾಲುವೆ ತೆರವು ಕಾರ್ಯಾಚರಣೆ ವೇಳೆ ಶ್ರೀನಿವಾಸ್ ಗಲಾಟೆ ಮಾಡಿದ್ದಾನೆ. ಯಾಕೆ ಹೊಡೆಯುತ್ತಿದ್ದೀರಿ ಎಂದು ರಂಪಾಟ ಮಾಡಿದ್ದಲ್ಲದೇ ಮಾದ್ಯಮಗಳ ಜೊತೆ ಗಲಾಟೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Wed, 14 September 22