AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗ್ಮನೆ ಟೆಕ್ ಪಾರ್ಕ್​ನಿಂದ ರಾಜಕಾಲುವೆ ಒತ್ತುವರಿ : 3 ವಿಲ್ಲಾಗಳಿಗೆ ಮಾರ್ಕ್ ಮಾಡಿದ ಬಿಬಿಎಂಪಿ

ನಗರದ ಪೂರ್ವ ಪಾರ್ಕ್ರಿಡ್ಜ್​​ನಲ್ಲಿರುವ ವಿಲ್ಲಾಗಳಿಂದ ರಾಜಕಾಲುವೆ ಒತ್ತುವರಿಯಾಗಿದ್ದು, ಒತ್ತುವರಿ ಮಾಡಿದ 3 ವಿಲ್ಲಾಗಳಿಗೆ ಬಿಬಿಎಂಪಿ ಮಾರ್ಕ್​ ಮಾಡಿದೆ.

ಬಾಗ್ಮನೆ ಟೆಕ್ ಪಾರ್ಕ್​ನಿಂದ ರಾಜಕಾಲುವೆ ಒತ್ತುವರಿ : 3 ವಿಲ್ಲಾಗಳಿಗೆ ಮಾರ್ಕ್ ಮಾಡಿದ ಬಿಬಿಎಂಪಿ
ಬಿಬಿಎಂಪಿ
TV9 Web
| Edited By: |

Updated on:Sep 14, 2022 | 8:37 PM

Share

ಬೆಂಗಳೂರು: ಬಿಬಿಎಂಪಿಯಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಯಾವುದೇ ಮುಲಾಜಿಲ್ಲದೆ ಬಿಬಿಎಂಪಿ ಒತ್ತವರಿಯನ್ನು ತೆರವುಗೊಳಿಸುತ್ತಿದೆ. ಮಹಾದೇವಪುರ ನಗರದಲ್ಲಿರುವ  ಪೂರ್ವ ಪಾರ್ಕ್ರಿಡ್ಜ್​​ನ ವಿಲ್ಲಾಗಳಿಂದ ರಾಜಕಾಲುವೆ ಒತ್ತುವರಿಯಾಗಿದೆ. ಹೀಗಾಗಿ ಒತ್ತುವರಿ ಮಾಡಿದ 3 ವಿಲ್ಲಾಗಳಿಗೆ ಬಿಬಿಎಂಪಿ ಮಾರ್ಕ್​ ಮಾಡಿದೆ. ಮಹಾದೇವಪುರದ ಬಾಗ್​ಮನೆ ಟೆಕ್​ಮಾರ್ಕ್​ನಿಂದ ಕೂಡ ಕೋಟ್ಯಂತರ ಮೌಲ್ಯದ ರಾಜಕಾಲುವೆ ಜಾಗ ಒತ್ತುವರಿಯಾಗಿದೆ. ರಾಜಕಾಲುವೆ ವಿಲ್ಲಾದೊಳಗಿಂದ ಬಾಗಮನೆ ಟೆಕ್​ಪಾರ್ಕ್ ಒಳಗೆ ಹಾದುಹೋಗುತ್ತದೆ. ಕೋಟ್ಯಾಂತರ ಬೆಲೆ ಬಾಳುವ ಇಂತಹ ವಿಲ್ಲಾಗಳಿಗೆ ಬಿಬಿಎಂಪಿ ಮಾರ್ಕ್​ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಸರ್ಕಾರ ನಾಳೆ (ಸೆ. 15) ಕೆವಿಯೆಟ್​ ಅರ್ಜಿ ಸಲ್ಲಿಸಲು ನಿರ್ಧರಿಸಿದೆ. ಬಿಬಿಎಂಪಿ ಆಯುಕ್ತರ ಮೇಲೆ ಒತ್ತುವರಿ ತೆರವು ಮಾಡದಂತೆ ಶಾಸಕ ಹ್ಯಾರಿಸ್ ಸೇರಿ ಹಲವರು ಒತ್ತಡ ಹೇರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ  ಕೆವಿಯೆಟ್​ ಸಲ್ಲಿಸಲು ನಿರ್ಧರಿಸಿದೆ. ಈ ಸಂಬಂಧ ಅಡ್ವೋಕೇಟ್ ಜನರಲ್​ಗೆ ಕಂದಾಯ ಸಚಿವ ಆರ್ ಅಶೋಕ್ ಸೂಚನೆ ನೀಡಿದ್ದಾರೆ.

 ಒತ್ತುವರಿ ಜಾಗ ತೆರವುಗೊಳಿಸುವಂತೆ ಬೆಂಗಳೂರಿನ ರೈನ್​ಬೋ ಡ್ರೈವ್​ ಲೇಔಟ್ ವಿಲ್ಲಾಗಳಿಗೆ ನೋಟಿಸ್

ಮಳೆ ನೀರು ನಿಂತು ರೈನ್ ಬೋ ಡ್ರೈವ್ ಲೇಔಟ್ ದೇಶಾದ್ಯಂತ ಹೆಸರುವಾಸಿಯಾಗಿತ್ತು. ಸದ್ಯ ಕಾಲುವೆ ಒತ್ತುವರಿ ಜಾಗ ತೆರವುಗೊಳಿಸುವಂತೆ ನಗರದ ರೈನ್​ಬೋ ಡ್ರೈವ್​ ಲೇಔಟ್ ವಿಲ್ಲಾಗಳಿಗೆ ಬೆಂಗಳೂರು ಪೂರ್ವ ತಹಶೀಲ್ದಾರ್ ನೋಟಿಸ್ ಜಾರಿ ಮಾಡಿದ್ದಾರೆ. ಒತ್ತುವರಿ ಜಾಗವನ್ನು ತೆರವು ಮಾಡದಿದ್ದರೆ ನಾವೇ ಮಾಡುತ್ತೇವೆ. ತೆರವು ಕಾರ್ಯಾಚರಣೆ ವೆಚ್ಚ ನೀವೇ ಭರಿಸಬೇಕೆಂದು, 15ಕ್ಕೂ ಹೆಚ್ಚು ವಿಲ್ಲಾಗಳಿಗೆ ತಹಶೀಲ್ದಾರ್​ ನೋಟಿಸ್​ ಜಾರಿಗೊಳಿಸಿದ್ದರು. ಮಳೆಯಿಂದ ರೈನ್​ಬೋ ಡ್ರೈವ್ ಲೇಔಟ್ ಜಲಾವೃತಗೊಂಡಿತ್ತು. ರೈನ್​ಬೋ ಡ್ರೈವ್ ಲೇಔಟ್​​ನಲ್ಲಿ ಜಿಲ್ಲಾಡಳಿತ ಸರ್ವೆ ನಡೆಸಿದ್ದು, ಕಾಲುವೆ ಒತ್ತುವರಿ ಮಾಡಿ ವಿಲ್ಲಾಗಳನ್ನ ನಿರ್ಮಿಸಿರುವುದು ಬಹಿರಂಗವಾಗಿದೆ. ಇದೀಗ ವಿಲ್ಲಾಗಳ‌ನ್ನ ತೆರವುಗೊಳಿಸುವಂತೆ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ಮಳೆ ನಿಂತು ಹೋದ ಮೇಲೆ ರೈನ್ ಬೋ ಡ್ರೈವ್​ಗೆ ಆತಂಕ ಶುರುವಾಗಿದ್ದು, ಮಳೆ‌ ಹಿನ್ನೆಲೆ ಸುಮ್ಮನಿದ್ದ ಅಧಿಕಾರಿಗಳು, ಈಗ ತೆರವು ಮಾಡಲೇ ಬೇಕೆಂದು ಪಟ್ಟು ಹಿಡಿದಿದ್ದರು.

ಒತ್ತುವರಿ ಜಾಗ ತೆರವು: ರೈನ್​ಬೋ ಡ್ರೈವ್​ ಲೇಔಟ್ ವಿಲ್ಲಾಗಳಿಗೆ ನೋಟಿಸ್

ಮಳೆ ನೀರು ನಿಂತು ರೈನ್ ಬೋ ಡ್ರೈವ್ ಲೇಔಟ್ ದೇಶಾದ್ಯಂತ ಹೆಸರುವಾಸಿಯಾಗಿತ್ತು. ಸದ್ಯ ಕಾಲುವೆ ಒತ್ತುವರಿ ಜಾಗ ತೆರವುಗೊಳಿಸುವಂತೆ ನಗರದ ರೈನ್​ಬೋ ಡ್ರೈವ್​ ಲೇಔಟ್ ವಿಲ್ಲಾಗಳಿಗೆ ಬೆಂಗಳೂರು ಪೂರ್ವ ತಹಶೀಲ್ದಾರ್ ನೋಟಿಸ್ ಜಾರಿ ಮಾಡಿದ್ದರು. ಒತ್ತುವರಿ ಜಾಗವನ್ನು ತೆರವು ಮಾಡದಿದ್ದರೇ ನಾವೇ ಮಾಡುತ್ತೇವೆ. ತೆರವು ಕಾರ್ಯಾಚರಣೆ ವೆಚ್ಚ ನೀವೇ ಭರಿಸಬೇಕೆಂದು, 15ಕ್ಕೂ ಹೆಚ್ಚು ವಿಲ್ಲಾಗಳಿಗೆ ತಹಶೀಲ್ದಾರ್​ ನೋಟಿಸ್​ ಜಾರಿಗೊಳಿಸಿದ್ದರು. ಮಳೆಯಿಂದ ರೈನ್​ಬೋ ಡ್ರೈವ್ ಲೇಔಟ್ ಜಲಾವೃತಗೊಂಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:36 pm, Wed, 14 September 22

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು