ದೇಶದಲ್ಲಿ ಹಿಂದಿ ದಿವಸ್​, ತ್ರಿಭಾಷಾ ಸೂತ್ರ ಹೇರಿದ್ದು ಕಾಂಗ್ರೆಸ್: ಆದ್ರೆ ಮಾತೃಭಾಷೆಯಲ್ಲೇ ಶಿಕ್ಷಣ ಕಲ್ಪಿಸಿರುವುದು ಮೋದಿ ಸರ್ಕಾರ- ಕರ್ನಾಟಕ ಬಿಜೆಪಿ ಟ್ವೀಟ್

ದೇಶದಲ್ಲಿ ಹಿಂದಿ ದಿವಸ್​, ತ್ರಿಭಾಷಾ ಸೂತ್ರ ಹೇರಿದ್ದು ಕಾಂಗ್ರೆಸ್. ನಿಮ್ಮ ಅಧಿಕಾರದ ಕನಸಿನಲ್ಲಾದರೂ ಹಿಂದಿ ದಿವಸ್ ರದ್ದು ಮಾಡ್ತೀವಿ ಎಂದು ಸೋನಿಯಾ ಗಾಂಧಿ ಮತ್ತು ರಾಹುಲ್​ರಿಂದ ಹೇಳಿಕೆ ಕೊಡಿಸುವ ಧಮ್ ಇದೆಯಾ? ಎಂದು ಟ್ವೀಟ್​ ಮೂಲಕ ಕಾಂಗ್ರೆಸ್​ ಅನ್ನು ಬಿಜೆಪಿ ಛೇಡಿಸಿದೆ.

ದೇಶದಲ್ಲಿ ಹಿಂದಿ ದಿವಸ್​, ತ್ರಿಭಾಷಾ ಸೂತ್ರ ಹೇರಿದ್ದು ಕಾಂಗ್ರೆಸ್: ಆದ್ರೆ ಮಾತೃಭಾಷೆಯಲ್ಲೇ ಶಿಕ್ಷಣ ಕಲ್ಪಿಸಿರುವುದು ಮೋದಿ ಸರ್ಕಾರ- ಕರ್ನಾಟಕ ಬಿಜೆಪಿ ಟ್ವೀಟ್
ಎನ್‌ಇಪಿ ಮೂಲಕ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವ ಅವಕಾಶವನ್ನು ಮೋದಿ ಸರ್ಕಾರ ಈಗಾಗಲೇ ಕಲ್ಪಿಸಿದೆ: ಕಾಂಗ್ರೆಸ್​ ವಿರುದ್ಧ ರಾಜ್ಯ ಬಿಜೆಪಿ ಟ್ವೀಟ್​​​​​​ ವಾರ್​
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 14, 2022 | 5:09 PM

ಬೆಂಗಳೂರು: ಹಿಂದಿ ಭಾಷೆ (Hindi) ಹೇರಿಕೆಗೆ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರಕ್ಕೆ ಪ್ರತಿಯಾಗಿ ಕಾಂಗ್ರೆಸ್​ ವಿರುದ್ಧ ರಾಜ್ಯ ಬಿಜೆಪಿ ಘಟಕ (Karnataka BJP) ಟ್ವೀಟ್​​​​​​ ಮಾಡಿ, ವಾಸ್ತವಾಂಶ ತೆರೆದಿಟ್ಟಿದೆ. ಈ ಹಿಂದಿನಿಂದಲೂ, ಮಾತೃಭಾಷೆಯಲ್ಲೇ (Mother Tongue) ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಪ್ರಧಾನಿ ಮೋದಿ ಸರ್ಕಾರ ಎನ್‌ಇಪಿ (National Education Policy -NEP) ಮೂಲಕ ಈ ಅವಕಾಶ ಕಲ್ಪಿಸಿದೆ ಎಂದು ಸ್ಪಷ್ಟನೆ ನೀಡಿದೆ.

ಆದರೆ ದೇಶದಲ್ಲಿ ಹಿಂದಿ ದಿವಸ್​, ತ್ರಿಭಾಷಾ ಸೂತ್ರ ಹೇರಿದ್ದು ಕಾಂಗ್ರೆಸ್. ನಿಮ್ಮ ಅಧಿಕಾರದ ಕನಸಿನಲ್ಲಾದರೂ ಹಿಂದಿ ದಿವಸ್ ರದ್ದು ಮಾಡ್ತೀವಿ ಎಂದು ಸೋನಿಯಾ ಗಾಂಧಿ ಮತ್ತು ರಾಹುಲ್​ರಿಂದ ಹೇಳಿಕೆ ಕೊಡಿಸುವ ಧಮ್ ಇದೆಯಾ? ಎಂದು ಟ್ವೀಟ್​ ಮೂಲಕ ಕಾಂಗ್ರೆಸ್​ ಅನ್ನು ಬಿಜೆಪಿ ಛೇಡಿಸಿದೆ.

ಬಿಜೆಪಿ ಟ್ವೀಟ್ ಸಾರಾಂಶ ಹೀಗಿದೆ: ಸಿದ್ದರಾಮಯ್ಯನವರೇ, ಮೋದಿ ಸರ್ಕಾರ ಎನ್‌ಇಪಿ ಮೂಲಕ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿದೆ. ಆದರೆ @INCIndia ರಾಷ್ಟ್ರವ್ಯಾಪಿ #HindiDiwas, ತ್ರಿಭಾಷಾ ಸೂತ್ರ ಹೇರಿತು. ನಿಮ್ಮ ಅಧಿಕಾರದ ಕನಸಿನಲ್ಲಾದರೂ ಹಿಂದಿ ದಿವಸ್‌ ರದ್ದು ಮಾಡುತ್ತೇವೆ ಎಂದು ಸೋನಿಯಾ, ರಾಹುಲ್‌ ಗಾಂಧಿ ಅವರಿಂದ ಹೇಳಿಕೆ ಕೊಡಿಸುವ ಧಮ್‌ ಇದೆಯೇ?

ಕನ್ನಡದಲ್ಲೇ ಇಂಜಿನಿಯರಿಂಗ್ ಪರೀಕ್ಷೆ ಬರೆಯಲು ಈಗಾಗಲೇ ಅವಕಾಶ ಕಲ್ಪಿಸಲಾಗಿದೆ:

ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಿಂದಿ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ, ಯಾವುದೇ ಅತಂಕಬೇಡ. ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮೀರಿ ನಡೆದುಕೊಂಡಿದ್ದೇವೆ. ಕನ್ನಡ ಕಡ್ಡಾಯಗೊಳಿಸಲು ಹೊಸ ಕಾನೂನು ತರುತ್ತೇವೆ. ಇದೇ ಅಧಿವೇಶನದಲ್ಲಿ ಹೊಸ ಕಾನೂನು ಜಾರಿ ಮಾಡ್ತೇವೆ. ಕನ್ನಡದಲ್ಲೇ ಇಂಜಿನಿಯರಿಂಗ್ ಪರೀಕ್ಷೆ ಬರೆಯಲು ಸಹ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ