ಹಾಸನ ಕಾಂಗ್ರೆಸ್ ಸಭೆಯಲ್ಲಿ ಗಲಾಟೆ: ಪರಸ್ಪರ ತಳ್ಳಾಡಿಕೊಂಡ ಕಾರ್ಯಕರ್ತರು, ಸಚಿವ ರಾಜಣ್ಣಗೆ ಅವಾಜ್

| Updated By: ಗಂಗಾಧರ​ ಬ. ಸಾಬೋಜಿ

Updated on: Mar 27, 2024 | 3:37 PM

ಹಾಸನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ತಯಾರಿಗಾಗಿ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್​ ಮುಖಂಡರ ನಡುವೆ ಕಿತ್ತಾಟವಾಗಿದೆ. ಸಚಿವ ಕೆ.ಎನ್.ರಾಜಣ್ಣ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಸಭೆಯಲ್ಲಿ ಕಾರ್ಯಕರ್ತನ ಭಾಷಣಕ್ಕೆ ಅಡ್ಡಿ ಹಿನ್ನೆಲೆ ಪರಸ್ಪರ ಮಾತಿನ ಚಕಮಕಿ ಉಂಟಾಗಿದೆ. ಸಚಿವ ರಾಜಣ್ಣ ಎದುರೇ ಪರಸ್ಪರ ಕಾರ್ಯಕರ್ತರು ತಳ್ಳಾಡಿಕೊಂಡಿದ್ದಾರೆ.

ಹಾಸನ ಕಾಂಗ್ರೆಸ್ ಸಭೆಯಲ್ಲಿ ಗಲಾಟೆ: ಪರಸ್ಪರ ತಳ್ಳಾಡಿಕೊಂಡ ಕಾರ್ಯಕರ್ತರು, ಸಚಿವ ರಾಜಣ್ಣಗೆ ಅವಾಜ್
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗಲಾಟೆ
Follow us on

ಹಾಸನ, ಮಾರ್ಚ್​​ 27: ಜಿಲ್ಲಾ ಕಾಂಗ್ರೆಸ್ (Congress) ಕಚೇರಿಯಲ್ಲಿ ನಡೆದ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ತಯಾರಿಗಾಗಿ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್​ ಮುಖಂಡರ ನಡುವೆ ಕಿತ್ತಾಟವಾಗಿದೆ. ಸಚಿವ ಕೆ.ಎನ್.ರಾಜಣ್ಣ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಸಭೆಯಲ್ಲಿ ಕಾರ್ಯಕರ್ತನ ಭಾಷಣಕ್ಕೆ ಅಡ್ಡಿ ಹಿನ್ನೆಲೆ ಪರಸ್ಪರ ಮಾತಿನ ಚಕಮಕಿ ಉಂಟಾಗಿದೆ. ಸಚಿವ ರಾಜಣ್ಣ ಎದುರೇ ಪರಸ್ಪರ ಕಾರ್ಯಕರ್ತರು ತಳ್ಳಾಡಿಕೊಂಡಿದ್ದಾರೆ. ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಶಾಸಕ ಶಿವಲಿಂಗೇಗೌಡ, ಅಭ್ಯರ್ಥಿ ಶ್ರೇಯಸ್‌ ಪಟೇಲ್, ಮಾಜಿ ಶಾಸಕ ಸಿಎಸ್.ಪುಟ್ಟೇಗೌಡ ಸೇರಿ ಹಲವರು ಭಾಗಿ ಆಗಿದ್ದರು.

ತಮ್ಮ ಭಾಷಣದ ವೇಳೆ ಈ ಬಾರಿ ಅರಕಲಗೂಡಿನಲ್ಲಿ 30 ಸಾವಿರ ಲೀಡ್ ಕೊಡುತ್ತೇವೆ ಎಂದು ಪರಾಜಿತ ಅಭ್ಯರ್ಥಿ ಶ್ರೀಧರ್ ಗೌಡ ಹೇಳಿದ್ದಾರೆ. ಶ್ರೀಧರ್ ಗೌಡ ಮಾತನ್ನ ತನ್ನ ಭಾಷಣದಲ್ಲಿ ಉಲ್ಲೇಖಿಸಿದ ಸಚಿವ ರಾಜಣ್ಣ, 30 ಸಾವಿರ ಲೀಡ್ ನೀಡುವವನು ಯಾಕಪ್ಪ ಮೂರನೇ ಸ್ಥಾನಕ್ಕೆ ಹೋದೆ ಎಂದು ಕಿಡಿಕಾರಿದ್ದಾರೆ.  ಈ ವೇಳೆ ರಾಜಣ್ಣ ವಿರುದ್ಧ ಶ್ರೀಧರ್ ಗೌಡ ಬೆಂಬಲಿಗರು ಮುಗಿಬಿದಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ದೋಸ್ತಿ ಕುಸ್ತಿ: ಬೀದಿಗೆ ಬಂತು ಜೆಡಿಎಸ್, ಬಿಜೆಪಿ ಅಂತಃ ಕಲಹ

ರಾಜಣ್ಣ ಮಾತಿನಿಂದ ರೊಚ್ಚಿಗೆದ್ದ ಶ್ರೀದರ್ ಗೌಡ ಬೆಂಬಲಿಗರಿಂದ ಸಚಿವರ ಭಾಷಣಕ್ಕೆ ಅಡ್ಡಿ ಪಡೆಸಲಾಗಿದೆ. ಈ ವೇಳೆ ತನ್ನ ಅಭಿಮಾನಿಗಳನ್ನು ಶ್ರೀಧರ್ ಗೌಡ ಸಮಾಧಾನ ಮಾಡಿದ್ದಾರೆ. ಮಾತನಾಡುವ ವೇಳೆ ಬಾಡಿಗೆ ಗಿರಾಕಿಗಳು ಎಂಬ ಪದವನ್ನು ರಾಜಣ್ಣ ಉಲ್ಲೇಖಿಸಿದ್ದಾರೆ. ಈ ವೇಳೆ ಮತ್ತೆ ರಾಜಣ್ಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಸಬಾ ಚುನಾವಣೆ ಹತ್ತಿರವಾಗುತ್ತಿದೆ. ಆಡಳಿತಾರೂಢ ಕಾಂಗ್ರೆಸ್​ ಮಣಿಸಲು ಜೆಡಿಎಸ್ ಬಿಜೆಪಿ ಮೈತ್ರಿ ಹೋರಾಟ ಶುರುಮಾಡಿದ್ದರೆ, ಏಕಾಂಗಿಯಾಗೇ ಅಖಾಡಕ್ಕಿಳಿಯಲು ಸಜ್ಜಾಗಿರುವ ಕಾಂಗ್ರೆಸ್​ ಪಾಳಯ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಮಣಿಸೋಕೆ ರಣತಂತ್ರ ಹೆಣೆದಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ಸನಿಹದಲ್ಲಿ ಬಿಜೆಪಿ-ಜೆಡಿಎಸ್​ಗೆ ಆಘಾತ: ಪ್ರಮುಖ ನಾಯಕರು ಕಾಂಗ್ರೆಸ್ ಸೇರ್ಪಡೆ

ಒಂದೇ ವಾರದಲ್ಲಿ ಎರಡನೆಬಾರಿಗೆ ಹಾಸನಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದ ಹೆಸರಿನಲ್ಲಿ ಬೃಹತ್ ಬಹಿರಂಗ ಸಭೆ ನಡೆಸಿ ಜನರಪರವಾಗಿ ಕೆಲಸ ಮಾಡ್ತಿರೊ ನಮನ್ನ ಬೆಂಬಲಿಸಿ, ಬಿಜೆಪಿ ಅವರು ದಿಕ್ಕು ತಪ್ಪಿಸ್ತಾರೆ ಅವರ ಮಾತಿಗೆ ಕಿವಿಗೊಡಬೇಡಿ ಎನ್ನುತ್ತಲೆ ಫಲಾನುಭವಿಗಳ ಮತಬುಟ್ಟಿಗೆ ಕೈ ಹಾಖಿದ್ದರು. ಡಿಸಿಎಂ ಡಿಕೆ ಕೂಡ ನೇರಾ ನೇರಾ ನಿಮ್ಮಪರವಾಗಿರೊ ನಮ್ಮನ್ನ ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.