ಕರ್ನಾಟಕ ರಾಜ್ಯದಲ್ಲಿ ಒಟ್ಟು 200 ಅಫ್ಘಾನಿಸ್ತಾನದ ಪ್ರಜೆಗಳು ವಾಸವಿದ್ದಾರೆ; ಟಿವಿ9ಗೆ ಮಾಹಿತಿ ಲಭ್ಯ
ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈ ವಶವಾದ ಬೆನ್ನಲ್ಲೇ ಬೆಂಗಳೂರಿನಲ್ಲಿರುವ ಆಫ್ಘನ್ ವಿದ್ಯಾರ್ಥಿಗಳಿಗೆ ಆತಂಕ ಆರಂಭವಾಗಿದೆ. ಹೀಗಾಗಿ ಅಫ್ಘಾನಿಸ್ತಾನ ತಾಲಿಬಾನರ ಕೈವಶವಾದ ಬೆನ್ನಲ್ಲೇ ಟಿವಿ 9 ಅಪ್ಘಾನಿಸ್ತಾನದ ವಿದ್ಯಾರ್ಥಿಗಳನ್ನು ಮಾತನಾಡಿಸಿತ್ತು.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಒಟ್ಟು 200 ಅಫ್ಘಾನಿಸ್ತಾನ (Afghanistan) ಪ್ರಜೆಗಳ ವಾಸ ಇದೆ ಎಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಮಾಹಿತಿ ನೀಡಿದೆ. ಶೈಕ್ಷಣಿಕ ವೀಸಾದಡಿ 192 ಆಫ್ಘನ್ ವಿದ್ಯಾರ್ಥಿಗಳು (Students) ವಾಸವಾಗಿ ಇದ್ದಾರೆ. ಮೆಡಿಕಲ್, ಬ್ಯುಸಿನೆಸ್ ಇತರೆ ವೀಸಾದಡಿ 8 ಜನರು ವಾಸವಾಗಿದ್ದಾರೆ ಎಂದು ಎಫ್ಆರ್ಆರ್ಒ ಉನ್ನತ ಮೂಲಗಳಿಂದ ಟಿವಿ9ಗೆ ಮಾಹಿತಿ ಲಭ್ಯವಾಗಿದೆ.
ವೈದ್ಯಕೀಯ ಚಿಕಿತ್ಸೆಗೆಂದು ಬೆಂಗಳೂರಿಗೆ ಆಗಮಿಸಿ ವೀಸಾ ಅವಧಿ ಮುಗಿದರೂ ಮರಳಿ ತೆರಳದ 15 ಅಪ್ಘನ್ ಪ್ರಜೆಗಳು ಬೆಂಗಳೂರು ನಗರದಲ್ಲಿದ್ದಾರೆ ಎಂಬ ಮಾಹಿತಿ ಮಂಗಳವಾರ ತಿಳಿದುಬಂದಿದೆ. ವೀಸಾ ಅವಧಿ ಮುಗಿದರೂ ಅಪ್ಘಾನಿಸ್ತಾನದ 15 ಪ್ರಜೆಗಳು ಅಕ್ರಮ ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಪ್ಘಾನಿಸ್ತಾನದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈ ವಶವಾದ ಬೆನ್ನಲ್ಲೇ ಬೆಂಗಳೂರಿನಲ್ಲಿರುವ ಆಫ್ಘನ್ ವಿದ್ಯಾರ್ಥಿಗಳಿಗೆ ಆತಂಕ ಆರಂಭವಾಗಿದೆ. ಹೀಗಾಗಿ ಅಫ್ಘಾನಿಸ್ತಾನ ತಾಲಿಬಾನರ ಕೈವಶವಾದ ಬೆನ್ನಲ್ಲೇ ಟಿವಿ 9 ಅಪ್ಘಾನಿಸ್ತಾನದ ವಿದ್ಯಾರ್ಥಿಗಳನ್ನು ಮಾತನಾಡಿಸಿತ್ತು.
ಈ ಹಿಂದೆ ಇದ್ದ ತಾಲಿಬಾನರ ಸರ್ಕಾರ ಸಾಕಷ್ಟು ಕ್ರೌರ್ಯ ಮೆರೆದಿತ್ತು. ಈ ಹಿನ್ನೆಲೆ ಜೀವ ಉಳಿಸಿಕೊಳ್ಳಲು ಹೆದರಿ ದೇಶ ತೊರೆಯುತ್ತಿದ್ದಾರೆ. ನಾವು ನಮ್ಮ ಕುಟುಂಬದವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಅವರ ಪ್ರಕಾರ ಈ ಬಾರಿ ಕ್ರೌರ್ಯ, ಅಟ್ಟಹಾಸ ಮೆರೆಯದೆ ಅಫ್ಘಾನಿಸ್ತಾನ್ ಅನ್ನು ತಾಲಿಬಾನರು ವಶಪಡಿಸಿಕೊಂಡಿದ್ದಾರೆ. ಸದ್ಯಕ್ಕೆ ಇಲ್ಲಿ ಏನೂ ತೊಂದರೆ ಇಲ್ಲ ಅಂತ ಕುಟುಂಬಸ್ಥರು ಹೇಳಿದ್ದಾರೆ. ಆದರೂ ಅಲ್ಲಿನ ಪರಿಸ್ಥಿತಿ ನೋಡಿದ್ರೆ ನಮಗೆ ಭಯ ಆಗುತ್ತಿದೆ. ಮುಂದೆ ಏನಾಗುತ್ತೆ ಅಂತ ಹೇಳೋಕೆ ಸಾಧ್ಯ ಆಗುತ್ತಿಲ್ಲ. ಇಂದಿನವರೆಗೂ ಎಲ್ಲ ಸರಿಯಿದ್ದರೂ ಸಹ, ನಾಳೆ ಏನು ಬೇಕಾದರೂ ಆಗುವ ಸ್ಥಿತಿ ಅಲ್ಲಿದೆ ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಯಾವುದೇ ದೇಶಕ್ಕೆ ಬೆದರಿಕೆಯಿಲ್ಲ: ಮೊದಲ ಸುದ್ದಿಗೋಷ್ಠಿಯಲ್ಲಿ ತಾಲಿಬಾನ್ ಅಭಯ
ತಾಲಿಬಾನ್ ಆಡಳಿತದ 2ನೇ ದಿನ: ಅಫ್ಘಾನಿಸ್ತಾನದಲ್ಲಿ ಮನೆ ಮಾಡಿದೆ ಭಯ, ಆತಂಕ