AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಲಿಬಾನ್ ಆಡಳಿತದ 2ನೇ ದಿನ: ಅಫ್ಘಾನಿಸ್ತಾನದಲ್ಲಿ ಮನೆ ಮಾಡಿದೆ ಭಯ, ಆತಂಕ

ಅಫ್ಘಾನಿಸ್ತಾನದ ಜನರಲ್ಲಿ ಆತಂಕ ಮನೆ ಮಾಡಿದೆ. ಮಹಿಳೆಯರು, ಮಕ್ಕಳಿಗೂ ನೆಮ್ಮದಿ ಇಲ್ಲದಂತಾಗಿದೆ. ಮುಂದೇನಾಗುತ್ತೋ ಎಂಬ ಆತಂಕದಲ್ಲಿ ಜನರಿದ್ದಾರೆ.

ತಾಲಿಬಾನ್ ಆಡಳಿತದ 2ನೇ ದಿನ: ಅಫ್ಘಾನಿಸ್ತಾನದಲ್ಲಿ ಮನೆ ಮಾಡಿದೆ ಭಯ, ಆತಂಕ
ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​ನಲ್ಲಿ ಗಸ್ತು ತಿರುಗುತ್ತಿರುವ ತಾಲಿಬಾನ್ ಹೋರಾಟಗಾರರು
S Chandramohan
| Edited By: |

Updated on: Aug 17, 2021 | 8:47 PM

Share

ಕಾಬೂಲ್: ತಾಲಿಬಾನ್ ಉಗ್ರಗಾಮಿಗಳು ಅಫ್ಘಾನಿಸ್ತಾನ ರಾಜಧಾನಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು 2 ದಿನ ಕಳೆದಿದೆ. ಅಲ್ಲಿನ ಜನರಲ್ಲಿ ಭಾರಿ ಆತಂಕ ಮನೆ ಮಾಡಿದೆ. ಮಹಿಳೆಯರು, ಮಕ್ಕಳಿಗೂ ನೆಮ್ಮದಿ ಇಲ್ಲದಂತಾಗಿದೆ. ಮುಂದೇನಾಗುತ್ತೋ ಎಂಬ ಆತಂಕದಲ್ಲಿ ಜನರಿದ್ದಾರೆ.

ಭಾರತದ ನೆರೆಯ ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರಗಾಮಿಗಳು ತಮ್ಮ ನೇರ ನಿಯಂತ್ರಣಕ್ಕೆ ತೆಗೆದುಕೊಂಡು ಎರಡು ದಿನ ಕಳೆದಿದೆ. ಅಲ್ಲಿನ ಜನರಲ್ಲಿ ಭಯ, ಆತಂಕ ಮನೆ ಮಾಡಿದೆ. ತಾಲಿಬಾನ್ ಉಗ್ರಗಾಮಿಗಳು ಬಂದೂಕು ಹಿಡಿದು ಗುಂಪುಗುಂಪಾಗಿ ಸುತ್ತಾಡುತ್ತಿದ್ದಾರೆ. ರಾಜಧಾನಿ ಕಾಬೂಲ್​ನ ವಿವಿಧೆಡೆ ಚೆಕ್​ಪೋಸ್ಟ್​ಗಳನ್ನು ತಾಲಿಬಾನ್ ತೆರೆದಿದೆ. ರಸ್ತೆಯಲ್ಲಿ ವಾಹನ ಸಂಚಾರ ಎಂದಿನಂತೆ ಇದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೊದಲಿನಂತೆ ಬೀದಿಗಿಳಿದಿಲ್ಲ. ತಾಲಿಬಾನ್ ಉಗ್ರಗಾಮಿಗಳ ಬಗೆಗಿನ ಭಯ, ಆತಂಕದಿಂದ ಜನರು ಮನೆ ಬಿಟ್ಟು ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.

ಬ್ಯಾಂಕ್, ಎಟಿಎಂಗಳ ಮುಂದೆ ಉದ್ದನೆಯ ಜನರ ಸಾಲು ಕಂಡು ಬಂತು. ಬ್ಯಾಂಕ್​ಗಳಲ್ಲಿ ಇಟ್ಟಿರುವ ಠೇವಣಿಯನ್ನು ವಾಪಸ್ ಪಡೆಯಲು ಜನರು ಮುಗಿಬಿದ್ದಿದ್ದರು. ಅಫ್ಘಾನಿಸ್ತಾನದಲ್ಲಿ ಯಾವುದೇ ಕ್ಷಣದಲ್ಲಾದರೂ ಬ್ಯಾಂಕ್​ಗಳ ಬಾಗಿಲು ಮುಚ್ಚಬಹುದು. ಅದಕ್ಕೂ ಮುನ್ನವೇ ತಮ್ಮ ಠೇವಣಿ ಹಣವನ್ನು ವಾಪಸ್ ಪಡೆಯಬೇಕು ಎಂಬ ಧಾವಂತದಲ್ಲಿ ಜನರಿದ್ದರು.

ಕಾಬೂಲ್​ ನಗರದ ಬೀದಿಗಳಲ್ಲಿ ಹೆಜ್ಜೆಹೆಜ್ಜೆಗೂ ತಾಲಿಬಾನ್ ಉಗ್ರಗಾಮಿಗಳು ಎಕೆ 47 ಬಂದೂಕು ಹಿಡಿದು ಸುತ್ತಾಡುತ್ತಿದ್ದುದು ಕಂಡು ಬಂತು. ಉದ್ಯಾನಗಳು ಮತ್ತು ಅಮ್ಯೂಸ್​ಮೆಂಟ್​ಪಾರ್ಕ್​ಗಳಲ್ಲಿದ್ದ ಮಕ್ಕಳ ಕಾರ್​ಗಳಲ್ಲಿ ಉಗ್ರರೇ ಆಟ ಆಡುತ್ತಿದ್ದರು. ರಾಷ್ಟ್ರಾಧ್ಯಕ್ಷರ ಜಿಮ್​ನಲ್ಲಿ ಕಸರತ್ತು ಮಾಡುತ್ತಿದ್ದರು. ಮಾಧ್ಯಮ ಕಚೇರಿಗೂ ನೆನ್ನೆಯೇ ಭೇಟಿ ಕೊಟ್ಟಿದ್ದರು. ಹೊಟೆಲ್​ಗಳ ಭದ್ರತೆಯ ಜವಾಬ್ದಾರಿಯನ್ನು ತಾಲಿಬಾನ್ ಉಗ್ರರು ನಿರ್ವಹಿಸುತ್ತಿದ್ದಾರೆ. ಆಮೆರಿಕಾ ರಾಯಭಾರ ಕಚೇರಿ, ವಿಶ್ವಸಂಸ್ಥೆ ಕಚೇರಿ ಸುತ್ತಲೂ ತಾಲಿಬಾನ್ ಉಗ್ರರು ತುಂಬಿದ್ದರು.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೆನ್ನೆ ಸಾವಿರಾರು ಜನರು ಜಮಾಯಿಸಿದ್ದರು. ಸಿಕ್ಕಸಿಕ್ಕ ವಿಮಾನ ಹತ್ತಿ ವಿದೇಶಗಳಿಗೆ ಓಡಿ ಹೋಗಲು ಯತ್ನಿಸುತ್ತಿದ್ದರು. ಇಂದು ಕಾಬೂಲ್​ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಚಿತ್ರಣ ಬದಲಾಗಿದೆ. ವಿಮಾನ ನಿಲ್ದಾಣದಲ್ಲಿ ಹೆಚ್ಚು ಜನರಿರಲಿಲ್ಲ. ವಿಮಾನ ನಿಲ್ದಾಣದಲ್ಲಿ ಜನರ ಬಿಟ್ಟು ಹೋದ ಚಪ್ಪಲಿಗಳೇ ನಿನ್ನೆಯ ನೂಕುನುಗ್ಗಲಿನ ಕಥೆ ಹೇಳುತ್ತಿದ್ದವು. ವಿಮಾನ ನಿಲ್ದಾಣದ ಗೋಡೆ ಹತ್ತಿ ಒಳ ಹೋಗಲು ಯತ್ನಿಸಿದ ಅಫ್ಘನ್ ನಾಗರಿಕನೊಬ್ಬನ ಮೇಲೆ ತಾಲಿಬಾನ್ ಉಗ್ರನೊಬ್ಬ ಗುಂಡು ಹಾರಿಸಿದ ಘಟನೆಯೂ ವರದಿಯಾಗಿದೆ.

ತಾಲಿಬಾನ್ ಮಾಧ್ಯಮ ವಿಭಾಗದ ಕಮ್ಯಾಂಡರ್ ಒಬ್ಬ ಇಂದು ಕಾಬೂಲ್​ನಲ್ಲಿರುವ ಟೋಲೋ ನ್ಯೂಸ್ ಚಾನಲ್​ನಲ್ಲಿ ಸಂದರ್ಶನ ನೀಡಿದ. ಮಹಿಳಾ ಆ್ಯಂಕರ್ ಹಿಜಬ್ ಧರಿಸಿ, ತಾಲಿಬಾನ್ ಉಗ್ರನ ಸಂದರ್ಶನ ಮಾಡಿದ್ದರು. ಈ ಮೊದಲು 1996-2001ರವರೆಗೆ ಮಹಿಳೆಯರು ಮನೆಯಿಂದ ಹೊರಹೋಗುವಂತಿಲ್ಲ, ಉದ್ಯೋಗ ಮಾಡುವಂತಿಲ್ಲ ಎಂದಿದ್ದ ತಾಲಿಬಾನ್ ಈಗ ಮಹಿಳೆಯರು ಉದ್ಯೋಗಕ್ಕೆ ಹೋಗಲು ಅವಕಾಶ ನೀಡಿದೆ. ಅಪ್ಘನ್ ಮಾಧ್ಯಮಗಳ ಮಹಿಳಾ ವರದಿಗಾರ್ತಿಯರು ಧೈರ್ಯವಾಗಿ ಕಾಬೂಲ್​ನ ಬೀದಿಗಿಳಿದು ಕಾರ್ಯನಿರ್ವಹಿಸಿದ್ದು ಗಮನ ಸೆಳೆಯಿತು. ಸಿಎನ್ಎನ್ ನ್ಯೂಸ್ ವರದಿಗಾರ್ತಿ ಈ ಮೊದಲು ಹಿಜಬ್ ಇಲ್ಲದೇ, ಅಫ್ಘಾನಿಸ್ತಾನದಿಂದ ವರದಿ ಮಾಡುತ್ತಿದ್ದರು. ಆದರೆ, ಇಂದು ಹಿಜಬ್ ಧರಿಸಿ ಧೈರ್ಯದಿಂದ ಕಾಬೂಲ್ ನಿಂದ ವರದಿ ಮಾಡಿದರು. ಅವರ ಧೈರ್ಯವನ್ನು ಎಲ್ಲರೂ ಪ್ರಶಂಸಿಸಿದರು.

ಕಾಬೂಲ್​ನಲ್ಲಿರುವ ಸರ್ಕಾರಿ ಆಸ್ಪತ್ರೆ, ಸಂಸ್ಕೃತಿ ಇಲಾಖೆಯ ಕಚೇರಿಗಳಿಗೆ ತಾಲಿಬಾನ್ ನಾಯಕರು ಭೇಟಿ ನೀಡಿದ್ದರು. ಅಫ್ಘಾನಿಸ್ತಾನದ ಎಲ್ಲ ಸರ್ಕಾರಿ ನೌಕರರಿಗೂ ನಾವು ಕ್ಷಮಾದಾನ ನೀಡಿದ್ದೇವೆ. ಎಂದಿನಂತೆ ಸರ್ಕಾರಿ ಕಚೇರಿಗಳಿಗೆ ಬಂದು ಕೆಲಸ ಮುಂದುವರಿಸಬಹುದು ಎಂದು ತಾಲಿಬಾನ್ ಹೇಳಿದೆ. ಕಾಬೂಲ್ ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸರು ರಸ್ತೆಗಿಳಿದು ಕೆಲಸ ಮಾಡಿದರು.

ಕಾಬೂಲ್ ನಗರದ ಗೋಡೆಗಳಲ್ಲಿದ್ದ ಮಾಡೆಲ್​ಗಳ ಫೊಟೊಗಳಿಗೆ ತಾಲಿಬಾನಿಗಳು ಬಿಳಿ ಬಣ್ಣ ಬಳಿದಿದ್ದಾರೆ. ಈ ಮೂಲಕ ಕಟ್ಟರ್ ಷರಿಯಾ ಕಾನೂನುನ್ನು ಮತ್ತೆ ಜಾರಿಗೊಳಿಸುವ ಸೂಚನೆಯನ್ನು ನೀಡಿದ್ದಾರೆ. ಒಂದೆಡೆ ಮಹಿಳೆಯರು ಶಿಕ್ಷಣ ಪಡೆಯಬಹುದು, ಉದ್ಯೋಗ ಮಾಡಬಹುದು ಎಂದು ತಾಲಿಬಾನ್ ಹೇಳುತ್ತಿದೆ. ಮತ್ತೊಂದೆಡೆ ರಸ್ತೆಯ ಗೋಡೆಗಳಲ್ಲಿದ್ದ ಮಾಡೆೆಲ್ ಫೋಟೊಗಳಿಗೆ ಬಿಳಿ ಬಣ್ಣ ಬಳಿದಿದೆ. ತಾಲಿಬಾನ್ ಈ ಬಾರಿ ಕಟ್ಟರ್ ಷರಿಯಾ ಕಾನೂನು ಜಾರಿಗೊಳಿಸುತ್ತೋ, ಉದಾರವಾದಿ ಧೋರಣೆ ಅನುಸರಿಸುತ್ತೋ ಎಂಬ ಗೊಂದಲ ಅಪ್ಘನ್ ಜನರಲ್ಲಿ ಶುರುವಾಗಿದೆ.

(Day 2 of Taliban Administration in Afghanistan People Afraid of Uncertain Future)

ಇದನ್ನೂ ಓದಿ: Taliban and Kashmir: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚುವ ಆತಂಕ

ಇದನ್ನೂ ಓದಿ: Impact on India: ತಾಲಿಬಾನ್ ವಶಕ್ಕೆ ಅಫ್ಘಾನಿಸ್ತಾನ, ಭಾರತದ ಭದ್ರತೆಗೆ ಹಲವು ಆತಂಕ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?