Russia Aircraft Crash: ರಷ್ಯಾದಲ್ಲಿ ಮಿಲಿಟರಿ ವಿಮಾನ ಪತನ; ಕೊನೆ ಕ್ಷಣದ ಶಾಕಿಂಗ್ ವಿಡಿಯೋ ಇಲ್ಲಿದೆ
ಕುಬಿಂಕ ಏರ್ಫೀಲ್ಡ್ನಲ್ಲಿ ಲ್ಯಾಂಡ್ ಆಗಬೇಕಿದ್ದ ಈ ವಿಮಾನ ಪತನಗೊಂಡಿದೆ. ಈ ವಿಮಾನದಲ್ಲಿ ಮಿಲಿಟರಿ ಶಸ್ತ್ರಾಸ್ತ್ರಗಳು, ಉಪಕರಣಗಳನ್ನು ಸಾಗಾಟ ಮಾಡಲಾಗುತ್ತಿತ್ತು.
ರಷ್ಯಾದ ಮಾಸ್ಕೋ ಹೊರಭಾಗದಲ್ಲಿ ಮಿಲಿಟರಿ ವಿಮಾನವೊಂದು ಪತನವಾಗಿದ್ದು, ವಿಮಾನದಲ್ಲಿದ್ದ ಮೂವರು ಸಾವನ್ನಪ್ಪಿರುವ ಅನುಮಾನ ವ್ಯಕ್ತವಾಗಿದೆ. ಈ ವಿಮಾನದಲ್ಲಿ ಇಬ್ಬರು ಟೆಸ್ಟ್ ಪೈಲಟ್ಗಳು ಹಾಗೂ ಓರ್ವ ಫ್ಲೈಟ್ ಇಂಜಿನಿಯರ್ ಇದ್ದರು. ಆ ಮೂವರು ಬದುಕಿದ್ದಾರೋ ಅಥವಾ ಮೃತಪಟ್ಟಿದ್ದಾರೋ ಎಂಬ ಕುರಿತು ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ.
ಈ ಮಿಲಿಟರಿ ವಿಮಾನ ಸರಕು, ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಟ ನಡೆಸುತ್ತಿತ್ತು. ಮೇಲೆ ಹಾರುತ್ತಿದ್ದಂತೆ ಈ ವಿಮಾನದ ಒಂದು ರೆಕ್ಕೆಗೆ ಬೆಂಕಿ ತಗುಲಿದೆ. ಬಳಿಕ ತಿರುವು ತೆಗೆದುಕೊಂಡು ವಿಮಾನ ಕೆಳಗೆ ಇಳಿಯುವುದರೊಳಗೆ ಪತನವಾಗಿದೆ. ಈ ದುರಂತದ ಆಘಾತಕಾರಿ ವಿಡಿಯೋ ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ. ವಿಮಾನ ಪತನಕ್ಕೂ ಮೊದಲು ಚಿತ್ರೀಕರಿಸಲಾಗಿರುವ ಶಾಕಿಂಗ್ ವಿಡಿಯೋ ಇಲ್ಲಿದೆ.
Horrifying, terribly tragic. Russian new Ilyushin Il-112V prototype aircraft crashes outside Moscow today after what appears to be an engine fire — final moments on camera. Three on board dead. pic.twitter.com/OXwBkZ1ACd
— Shiv Aroor (@ShivAroor) August 17, 2021
ಮಾಹಿತಿ ಪ್ರಕಾರ ಆ ವಿಮಾನದಲ್ಲಿದ್ದ ಮೂವರೂ ಸಾವನ್ನಪ್ಪಿದ್ದಾರೆ. ಆದರೆ, ಅವರ ಮೃತದೇಹಗಳು ಇನ್ನೂ ಪತ್ತೆಯಾಗದ ಕಾರಣ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ದಟ್ಟ ಕಾಡುಗಳಿದ್ದ ಪ್ರದೇಶದ ಮೇಲ್ಭಾಗದಲ್ಲಿ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕುಬಿಂಕ ಏರ್ಫೀಲ್ಡ್ನಲ್ಲಿ ಲ್ಯಾಂಡ್ ಆಗಬೇಕಿದ್ದ ಈ ವಿಮಾನ ಪತನಗೊಂಡಿದೆ. ಈ ವಿಮಾನದಲ್ಲಿ ಮಿಲಿಟರಿ ಶಸ್ತ್ರಾಸ್ತ್ರಗಳು, ಉಪಕರಣಗಳನ್ನು ಸಾಗಾಟ ಮಾಡಲಾಗುತ್ತಿತ್ತು.
ಇದನ್ನೂ ಓದಿ: Shocking Video: ಗ್ರಾಹಕರಿಗೆ ಕೊಡಬೇಕಾಗಿದ್ದ ಊಟ ಕದ್ದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
Viral Video: ರಾಷ್ಟ್ರಗೀತೆ ಸಾಲನ್ನೇ ಮರೆತ ಸಂಸದ; ಜಯಹೇ ಎಂದು ಹಾಡಿ ಮುಗಿಸಿದ ವಿಡಿಯೋ ವೈರಲ್
(Three feared dead as military transport aircraft crashes in Russia Shocking Video Viral)