TV9 Big Impact ಮೃತ ಕೊರೊನಾ ವಾರಿಯರ್ಸ್​ಗೆ ವಿಮೆ ಕೊಡಿಸ್ತೇವೆ: ಸಚಿವ ಶ್ರೀರಾಮುಲು

ಬೆಂಗಳೂರು: ಕೊರೊನಾ ಸೋಂಕು ವಿರುದ್ಧದ ಯುದ್ಧದಲ್ಲಿ ಹಗಲು ರಾತ್ರಿ ಅನ್ನದೆ, ಕುಟುಂಬ, ಅದೂ ಇದೂ ಅನ್ನದೆ ತಮ್ಮನ್ನು ಸಮರೋಪಾದಿಯಲ್ಲಿ ತೊಡಗಿಸಿಕೊಂಡಿರುವ ಕೊರೊನಾ ವಾರಿಯರ್ಸ್​ಗೆ ವಿಮೆ ಕೊಡಿಸುವ ವಿಷಯದಲ್ಲಿ ರಾಜ್ಯ ಸರ್ಕಾರ ಹಿಂದೇಟು ಹಾಕಿತ್ತು. ಆದ್ರೆ ಕೊರೊನಾ ವಾರಿಯರ್ಸ್ ಅದರಲ್ಲೂ ಆಶಾ ಕಾರ್ಯಕರ್ತೆಯರು ಅಪಘಾತಗಳಲ್ಲಿ ಅಸುನೀಗಿದಾಗ ಅವೆಲ್ಲ ಅಪಘಾತ ಪ್ರಕರಣಗಳು ಎಂಬ ಮೊಂಡುತನ ಪ್ರದರ್ಶಿಸಿ ಸರ್ಕಾರ ಅವರನ್ನು ವಿಮೆ ವ್ಯಾಪ್ತಿಯಿಂದ ಹೊರಗಿಟ್ಟಿತ್ತು. ಇದರ ವಿರುದ್ಧ ಟಿವಿ9 ನಿರಂತರವಾಗಿ ವರದಿಗಳನ್ನು ಪ್ರಸಾರ ಮಾಡತೊಡಗಿತು. ಇಂದೂ ಸಹ ಅಂತಹ ವರದಿ ಪ್ರಸಾರ […]

TV9 Big Impact ಮೃತ ಕೊರೊನಾ ವಾರಿಯರ್ಸ್​ಗೆ ವಿಮೆ ಕೊಡಿಸ್ತೇವೆ: ಸಚಿವ ಶ್ರೀರಾಮುಲು
Edited By:

Updated on: May 23, 2020 | 12:59 PM

ಬೆಂಗಳೂರು: ಕೊರೊನಾ ಸೋಂಕು ವಿರುದ್ಧದ ಯುದ್ಧದಲ್ಲಿ ಹಗಲು ರಾತ್ರಿ ಅನ್ನದೆ, ಕುಟುಂಬ, ಅದೂ ಇದೂ ಅನ್ನದೆ ತಮ್ಮನ್ನು ಸಮರೋಪಾದಿಯಲ್ಲಿ ತೊಡಗಿಸಿಕೊಂಡಿರುವ ಕೊರೊನಾ ವಾರಿಯರ್ಸ್​ಗೆ ವಿಮೆ ಕೊಡಿಸುವ ವಿಷಯದಲ್ಲಿ ರಾಜ್ಯ ಸರ್ಕಾರ ಹಿಂದೇಟು ಹಾಕಿತ್ತು. ಆದ್ರೆ ಕೊರೊನಾ ವಾರಿಯರ್ಸ್ ಅದರಲ್ಲೂ ಆಶಾ ಕಾರ್ಯಕರ್ತೆಯರು ಅಪಘಾತಗಳಲ್ಲಿ ಅಸುನೀಗಿದಾಗ ಅವೆಲ್ಲ ಅಪಘಾತ ಪ್ರಕರಣಗಳು ಎಂಬ ಮೊಂಡುತನ ಪ್ರದರ್ಶಿಸಿ ಸರ್ಕಾರ ಅವರನ್ನು ವಿಮೆ ವ್ಯಾಪ್ತಿಯಿಂದ ಹೊರಗಿಟ್ಟಿತ್ತು. ಇದರ ವಿರುದ್ಧ ಟಿವಿ9 ನಿರಂತರವಾಗಿ ವರದಿಗಳನ್ನು ಪ್ರಸಾರ ಮಾಡತೊಡಗಿತು.

ಇಂದೂ ಸಹ ಅಂತಹ ವರದಿ ಪ್ರಸಾರ ವಾಗುತ್ತಿದ್ದಂತೆ ಟಿವಿ9 ಜೊತೆ ದೂರವಾಣಿ ಮೂಲಕ ಮಾತನಾಡತೊಡಗಿದ ಆರೋಗ್ಯ ಖಾತೆ ಸಚಿವ ಬಿ. ಶ್ರೀರಾಮುಲು ಮೃತಪಟ್ಟ ನಾಲ್ವರು ಕೊರೊನಾ ವಾರಿಯರ್ಸ್​ಗೆ ವಿಮೆ ಕೊಡಿಸುತ್ತೇನೆ. ನಾಲ್ವರ ಕುಟುಂಬಕ್ಕೂ ವಿಮೆ ಕೊಡಿಸೋದು ನನ್ನ ಜವಾಬ್ದಾರಿ ಎಂದು ಘೋಷಿಸಿದರು. ಇದನ್ನು ಕೇಳಿದ ಆ ನಾಲ್ಕೂ ಕುಟುಂಬದವರು ಸ್ವಲ್ಪಮಟ್ಟಿಗೆ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಸರ್ಕಾರದ ಕಣ್ಣು ತೆರೆಸಿದ ಟಿವಿ9 ವರದಿಯನ್ನು ಶ್ಲಾಘಿಸುತ್ತಾ ಆರೋಗ್ಯ ಸಚಿವ ಶ್ರೀರಾಮುಲು ಕೇಂದ್ರದ ವಿಮಾ ಯೋಜನೆಯಲ್ಲಿ 50 ಲಕ್ಷ ರೂ. ಪರಿಹಾರ ಕಲ್ಪಿಸುತ್ತೇವೆ. ಇದರಲ್ಲಿ ಯಾವುದೇ ಲೋಪ ಆಗದಂತೆ ನೋಡಿಕೊಳ್ಳುತ್ತೇವೆ. ಕೊರೊನಾ ವಾರಿಯರ್ಸ್​ಗೆ ಅನ್ಯಾಯ ಆಗುವ ಪ್ರಶ್ನೆಯಿಲ್ಲ. ಕೊರೊನಾ ವಾರಿಯರ್ಸ್​ ಹೇಗೇ ಮೃತಪಟ್ಟರೂ ಅವರನ್ನು ಈ ವಿಮಾ ವ್ಯಾಪ್ತಿಗೆ ಒಳಪಡಿಸುತ್ತೇವೆ ಎಂದು ಪ್ರಕಟಿಸಿದರು.

Published On - 12:00 pm, Sat, 23 May 20