ಸಿಎಂ ಕುರ್ಚಿ ಅಲ್ಲಾಡುತ್ತಿರುವ ಸಮಯದಲ್ಲಿ ಸಿದ್ದರಾಮಯ್ಯ ಜಾತಿಗಣತಿ ವರದಿ ಮುನ್ನೆಲೆಗೆ ತಂದಿದ್ದಾರೆ: ವಿಜಯೇಂದ್ರ

|

Updated on: Jan 17, 2025 | 1:13 PM

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಧಿಕಾರಾವಧಿಯನ್ನು ಪೂರ್ತಿಗೊಳಿಸುವುದು ಸಾಧ್ಯವಿಲ್ಲ, ಡಿಕೆ ಶಿವಕುಮಾರ್ ಸಿಎಂ ಸ್ಥಾನಕ್ಕೇರಲು ವೇದಿಕೆಯನ್ನು ಸಿದ್ಧಮಾಡಿಕೊಳ್ಳುತ್ತಿದ್ದಾರೆ, ಪಕ್ಷದೊಳಗೆ ನಡೆಯುತ್ತಿರುವ ಕಲಹಗಳು ಬೀದಿರಂಪವಾಗಿ ಬದಲಾಗೋದ್ರಲ್ಲಿ ಹೆಚ್ಚು ದಿನ ಉಳಿದಿಲ್ಲ, ಕಾಂಗ್ರೆಸ್ ಒಳಜಗಳ ಯಾವ ರಾಜಕೀಯ ತಿರುವು ತೆಗೆದುಕೊಳ್ಳುತ್ತದೋ ಕಾದು ನೋಡಬೇಕು ಎಂದು ವಿಜಯೇಂದ್ರ ಹೇಳಿದರು.

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿಯನ್ನು ಚುನಾವಣೆಗೋಸ್ಕರ ಅವಸರದಲ್ಲಿ ಮಾಡಿಸಿದ್ದರು, 2016 ರಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದರೂ ಅದನ್ನು ಜಾರಿಮಾಡಲಿಲ್ಲ, ಅದೊಂದು ಅವೈಜ್ಞಾನಿಕ ವರದಿ ಎಂದು ಬಿಜೆಪಿ ರಾಜ್ಯದ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಜಯೇಂದ್ರ, ಜಾತಿಗಣತಿಯನ್ನು ಒಕ್ಕಲಿಗ ಮತ್ತು ವೀರಶೈವ ಲಿಂಗಾಯತ ಸಮುದಾಯಗಳು ವಿರೋಧಿಸುತ್ತಿವೆ, ವಂಚಿತ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಕ್ಕರೆ ಬಿಜೆಪಿಯ ತಕರಾರೇನೂ ಇಲ್ಲ, ಆದರೆ ವರದಿಯನ್ನು ಸಿದ್ದರಾಮಯ್ಯ ರಾಜಕೀಯ ದಾಳವಾಗಿ ಬಳಸುತ್ತಿದ್ದಾರೆ, ಸಿಎಂ ಕುರ್ಚಿ ಅಲುಗಾಡುತ್ತಿರುವುದು ಮನವರಿಕೆಯಾಗುತ್ತಿದ್ದಂತೆಯೇ ಜಾತಿಗಣತಿ ವರದಿಯನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಮೇಶ್ ಜಾರಕಿಗೊಳಿಯನ್ನು ಎಚ್ಚರಿಸಿದಂತೆ ಬಸನಗೌಡ ಯತ್ನಾಳ್​ಗೆ ತಾಕೀತು ಮಾಡದ ವಿಜಯೇಂದ್ರ