Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರ್ಮಿಷನ್ ಕೊಟ್ರು! ಗಣರಾಜ್ಯೋತ್ಸವ ಪರೇಡ್​​​​ನಲ್ಲಿ ಕೊನೆ ಕ್ಷಣದಲ್ಲಿ ಕರ್ನಾಟಕದ ‘ನಾರಿ ಶಕ್ತಿ’ ಸ್ತಬ್ಧಚಿತ್ರಕ್ಕೆ ಮಣೆ

Delhi Republic Day Parade 2023: ಗಣರಾಜ್ಯೋತ್ಸವ ಪರೇಡ್​​​​ನಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ಸಿಕ್ಕಿದೆ. ಕೊನೆ ಕ್ಷಣದಲ್ಲಿ ಕರ್ನಾಟಕದ ‘ನಾರಿ ಶಕ್ತಿ’ ಸ್ತಬ್ಧಚಿತ್ರ ಸೇರ್ಪಡೆಗೊಂಡಿದೆ.

ಪರ್ಮಿಷನ್ ಕೊಟ್ರು! ಗಣರಾಜ್ಯೋತ್ಸವ ಪರೇಡ್​​​​ನಲ್ಲಿ ಕೊನೆ ಕ್ಷಣದಲ್ಲಿ ಕರ್ನಾಟಕದ ‘ನಾರಿ ಶಕ್ತಿ’ ಸ್ತಬ್ಧಚಿತ್ರಕ್ಕೆ ಮಣೆ
ಹಳೆ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jan 12, 2023 | 12:27 PM

ದೆಹಲಿ: ಜನವರಿ 26ರಂದು ದೆಹಲಿಯ ರಾಜಪಥ್‍ನಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್‍ನಲ್ಲಿ(Delhi Republic Day Parade) ಈ ವರ್ಷ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ(Karnataka Tableau) ಅವಕಾಶ ನಿರಾಕರಿಸಲಾಗಿತ್ತು. ಕೇಂದ್ರದ ಈ ನಿರ್ಧಾರಕ್ಕೆ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಈಗ ಕೊನೆ ಕ್ಷಣದಲ್ಲಿ ಕರ್ನಾಟಕದ ‘ನಾರಿ ಶಕ್ತಿ’ ಸ್ತಬ್ಧಚಿತ್ರ ಸೇರ್ಪಡೆಗೊಂಡಿದೆ.

ಗಣರಾಜ್ಯೋತ್ಸವ ಪರೇಡ್​​​​ನಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ಸಿಕ್ಕಿದೆ. ಕೊನೆ ಕ್ಷಣದಲ್ಲಿ ಕರ್ನಾಟಕದ ‘ನಾರಿ ಶಕ್ತಿ’ ಸ್ತಬ್ಧಚಿತ್ರ ಸೇರ್ಪಡೆಗೊಂಡಿದೆ. 14ನೇ ಬಾರಿ ರಾಜ್ಯದ ಟ್ಯಾಬ್ಲೋ ಕರ್ತವ್ಯವ ಪಥದಲ್ಲಿ ಸಾಗಲಿದೆ. ಸ್ತಬ್ಧಚಿತ್ರ ಅನುಮತಿ ನಿರಾಕರಿಸಿದ್ದ ಬಗ್ಗೆ ಟಿವಿ9 ವರದಿ ಮಾಡಿತ್ತು. ಟಿವಿ9 ವರದಿ ಬಳಿಕ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಈಗ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಣೆ ಹಾಕಿದ್ದು ಕರ್ನಾಟಕದ ಸ್ತಬ್ಧಚಿತ್ರಕ್ಕೆ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್‍: ಕರ್ನಾಟಕ ಸ್ತಬ್ಧಚಿತ್ರಕ್ಕೆ ಅನುಮತಿ ನೀಡದ ಕೇಂದ್ರ ಸರ್ಕಾರ

ಈ ಬಾರಿ ಸ್ತಬ್ಧಚಿತ್ರದ ಕಲ್ಪನೆ ‘ನಾರಿ ಶಕ್ತಿ’

ಪದ್ಮಶ್ರೀ ಪುರಸ್ಕೃತ ಮಹಿಳಾ ಸಾಧಕರ ಸಾಧನೆ ಅನಾವರಣಗೊಳಿಸಲು ರಾಜ್ಯ ನಾರಿ ಶಕ್ತಿ ಕಲ್ಪನೆಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದ ಮೂವರು ಮಹಿಳಾ ಸಾಧಕಿಯರ ಬಗ್ಗೆ ಸ್ತಬ್ಧಚಿತ್ರ ತಯಾರಾಗಿದೆ. ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ, ತುಳಿಸಿಗೌಡ ಇವರ ಸಾಧನೆ ಅನಾವರಣಗೊಳ್ಳಲಿದೆ.

ಕಳೆದ ವರ್ಷ ಎರಡನೇ ಸ್ಥಾನ ಪಡೆದಿದ್ದ ಕರ್ನಾಟಕ ಸ್ಥಬ್ದ ಚಿತ್ರ

ಕಳೆದ ವರ್ಷ ದೆಹಲಿಯ ರಾಜಪಥ್‍ನಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳಗಳ ತೊಟ್ಟಿಲು ವಿಷಯಧಾರಿತ ರಾಜ್ಯದ ಸ್ತಬ್ಧಚಿತ್ರಕ್ಕೆ ದ್ವಿತೀಯ ಸ್ಥಾನ ಸಿಕ್ಕಿತ್ತು. ಸತತ 13 ವರ್ಷಗಳಿಂದ ಪ್ರದರ್ಶನಗೊಳ್ಳುತ್ತ ಬಂದಿದ್ದ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಈ ವರ್ಷವೂ ಅವಕಾಶ ಸಿಕ್ಕಿದ್ದು ಸತತ 14ನೇ ಬಾರಿ ರಾಜ್ಯದ ಸ್ಥಬ್ದ ಚಿತ್ರ ಪ್ರದರ್ಶನಗೊಳ್ಳಲಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ