ಹಿಂದೂ ಯುವಕನ ಮೇಲೆ ಹಲ್ಲೆ; ದೂರು ಸ್ವೀಕರಿಸದ ಪೊಲೀಸರ ಮೇಲೆ ಕ್ರಮ: ಎನ್ ಯತೀಶ್, ಮಂಡ್ಯ ಎಸ್ ಪಿ

|

Updated on: May 28, 2024 | 11:29 AM

ಮಹಿಳೆಯರು ದೂರು ನೀಡಲು ಬಂದಾಗ ಪೊಲೀಸರು ಅದನ್ನು ಸ್ವೀಕರಿಸಿಲ್ಲ ಅಂತ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಆರೋಪವನ್ನು ಪರಿಶೀಲಿಸಲಾಗುವುದು ಮತ್ತು ಹಾಗೆ ನಡೆದಿದ್ದರೆ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ಪೊಲೀಸರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು. ಹಲ್ಲೆಗೊಳಗಾಗಿರುವ ಯುವಕ ಅಭಿಲಾಷ್ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಡ್ಯ: ನಿನ್ನೆ ರಾತ್ರಿ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ (Bellur village) ಹಿಂದೂ ಯುವಕನ (Hindu youth) ಮೇಲೆ ಹಲ್ಲೆ ನಡೆದಿದ್ದು ಊರಲ್ಲಿ ಪ್ರಕ್ಷುಬ್ದ ಸ್ಥಿತಿ ನಿರ್ಮಾಣವಾಗಿದೆ. ಹಲ್ಲೆ ನಡೆಸಿರುವ ಅನ್ಯಕೋಮಿನ ಯುವಕರು ಹಲ್ಲೆಗೊಳಗಾದವರ ಮನೆ ನುಗ್ಗಿ ಮಹಿಳೆ ಮತ್ತು ಮಕ್ಕಳನ್ನು ಹೆದರಿಸಿರುವರೆಂದು ಗೊತ್ತಾಗಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ (N Yatish, SP) ಬೆಳ್ಳೂರು ಗ್ರಾಮದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಿದ್ದಾರೆ ಮತ್ತು ಪರಿಸ್ಥಿತಿ ಹತೋಟಿಯಲ್ಲಿದೆಯೆಂದು ಗೊತ್ತಾಗಿದೆ. ನಿನ್ನೆ ರಾತ್ರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯತೀಶ್, ಹಲ್ಲೆ ಯಾಕೆ ನಡೆದಿದೆ ಅದನ್ನು ನಡೆಸಿದವರು ಯಾರೆಂದು ಇನ್ನೂ ಗೊತ್ತಾಗಿಲ್ಲ, ಹಲ್ಲೆಗೊಳಗಾಗಿರುವ ವ್ಯಕ್ತಿ ಹೇಳಿಕೆಯನ್ನು ದಾಖಲಿಸಿ ಹಲ್ಲೆ ಮಾಡಿದವರ ಪರಿಚಯ ನೀಡಿದರೆ ಅವರನ್ನು ಬಂಧಿಸಲು ನೆರವಾಗುತ್ತದೆ ಎಂದು ಹೇಳಿದರು. ಮಹಿಳೆಯರು ದೂರು ನೀಡಲು ಬಂದಾಗ ಪೊಲೀಸರು ಅದನ್ನು ಸ್ವೀಕರಿಸಿಲ್ಲ ಅಂತ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಆರೋಪವನ್ನು ಪರಿಶೀಲಿಸಲಾಗುವುದು ಮತ್ತು ಹಾಗೆ ನಡೆದಿದ್ದರೆ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ಪೊಲೀಸರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು. ಹಲ್ಲೆಗೊಳಗಾಗಿರುವ ಯುವಕ ಅಭಿಲಾಷ್ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಇದನ್ನೂ ಓದಿ:   ಮುಸ್ಲಿಂ ಯುವಕರ ಗುಂಪಿನಿಂದ ಹಿಂದೂಗಳ ಮೇಲೆ ಹಲ್ಲೆ: ರೊಚ್ಚಿಗೆದ್ದ ಗ್ರಾಮಸ್ಥರು, ಬೆಳ್ಳೂರು ಪ್ರಕ್ಷುಬ್ಧ

Follow us on