AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂಡಲಗಾ ಕಾರಾಗೃಹದಲ್ಲಿ ಕೈದಿಯೊಬ್ಬನಿಂದ ವಾರ್ಡನ್ ಮೇಲೆ ಗಂಭೀರ ಹಲ್ಲೆ, ಬಿಮ್ಸ್​ನಲ್ಲಿ ಚಿಕಿತ್ಸೆ

ಹಿಂಡಲಗಾ ಕಾರಾಗೃಹದಲ್ಲಿ ಕೈದಿಯೊಬ್ಬನಿಂದ ವಾರ್ಡನ್ ಮೇಲೆ ಗಂಭೀರ ಹಲ್ಲೆ, ಬಿಮ್ಸ್​ನಲ್ಲಿ ಚಿಕಿತ್ಸೆ

ಅರುಣ್​ ಕುಮಾರ್​ ಬೆಳ್ಳಿ
|

Updated on: May 28, 2024 | 10:30 AM

ರಾಹಿಲ್​ ಹಾಸನದಿಂದ ಗಡೀಪಾರಾಗಿ ಜಿಲ್ಲೆಯ ಹಿಂಡಲಗಾ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ಕೈದಿ. ಇವನ ಹಿನ್ನೆಲೆ ಆಧಾರದಲ್ಲಿ ಜೈಲಿನ ಅತಿ ಭದ್ರತಾ ವಿಭಾಗದಲ್ಲಿ ಇರಿಸಲಾಗಿದೆಯಂತೆ. ಇಲ್ಲಿಗೆ ಬಂದಾಗಿನಿಂದ ಒಂದಿಲ್ಲೊಂದು ಕಾರಣಕ್ಕೆ ಕಾರಾಗೃಹ ಅಧಿಕಾರಿಗಳ ಜಗಳ ಕಾಯುತ್ತಿದ್ದ ರಾಹಿಲ್ ನಿನ್ನೆ ಸಾಯಂಕಾಲ ತನಗೆ ಆಸ್ಪತ್ರೆಗೆ ಹೋಗಬೇಕೆಂದು ವಿನೋದ್ ಬಳಿ ವರಾತ ತೆಗೆದಿದ್ದಾನೆ.

ಬೆಳಗಾವಿ: ಸೆರೆವಾಸದಲ್ಲಿದ್ದರೂ ಕೆಲ ಕೈದಿಗಳ ಸೊಕ್ಕಡಗುವುದಿಲ್ಲ, ಇದಕ್ಕೆ ಉದಾಹರಣೆಯೆಂದರೆ ನಿನ್ನೆ ಸಾಯಂಕಾಲ ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿ (Hindalaga Central Jail) ಕೈದಿಯೊಬ್ಬ ವಾರ್ಡನ್ ಮೇಲೆ ಮಾಡಿರುವ ತೀವ್ರ ಸ್ವರೂಪದ ಹಲ್ಲೆ. ನಗರದ ಬಿಮ್ಸ್ ಆಸ್ಪತ್ರೆಯಲ್ಲಿ (BIMS) ದಾಖಲಾಗಿ ಮಾಧ್ಯಮಗಳೊಂದಿಗೆ ಮಾತಾಡುತ್ತಿರುವ ವಿನೋದ್ ಲೋಕಾಪುರ್ (Vinod Lokapur) ಅವರು ರಾಹಿಲ್ ಅಲಿಯಾಸ್ ರೋಹನ್ (Rohan) ಹೆಸರಿನ ಕೈದಿಯಿಂದ ಹಲ್ಲೆಗೊಳಗಾಗಿದ್ದಾರೆ. ರಾಹಿಲ್​ ಹಾಸನದಿಂದ ಗಡೀಪಾರಾಗಿ ಜಿಲ್ಲೆಯ ಹಿಂಡಲಗಾ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ಕೈದಿ. ಇವನ ಹಿನ್ನೆಲೆ ಆಧಾರದಲ್ಲಿ ಜೈಲಿನ ಅತಿ ಭದ್ರತಾ ವಿಭಾಗದಲ್ಲಿ ಇರಿಸಲಾಗಿದೆಯಂತೆ. ಇಲ್ಲಿಗೆ ಬಂದಾಗಿನಿಂದ ಒಂದಿಲ್ಲೊಂದು ಕಾರಣಕ್ಕೆ ಕಾರಾಗೃಹ ಅಧಿಕಾರಿಗಳ ಜಗಳ ಕಾಯುತ್ತಿದ್ದ ರಾಹಿಲ್ ನಿನ್ನೆ ಸಾಯಂಕಾಲ ತನಗೆ ಆಸ್ಪತ್ರೆಗೆ ಹೋಗಬೇಕೆಂದು ವಿನೋದ್ ಬಳಿ ವರಾತ ತೆಗೆದಿದ್ದಾನೆ. ಆಸ್ಪತ್ರೆಗೆ ಕಳಿಸುವ ಉಸ್ತುವಾರಿ ಬೇರೆ ವಾರ್ಡನ್ ಕೈಲಿದೆ ಅವರು ಬರೋವರೆಗೆ ಕಾಯಬೇಕು ಅಂದಿದ್ದಕ್ಕೆ ರೊಚ್ಚಿಗೆದ್ದ ರಾಹಿಲ್ ಮನಬಂದಂತೆ ಹಲ್ಲೆ ಮಾಡಿದ್ದಾನೆ. ವಿನೋದ್ ಮಾತಾಡಲು ಕಷ್ಟಪಡುತ್ತಿರುವುದನ್ನು ಗಮನಿಸಬಹುದು. ಅವನ ವಿರುದ್ಧ ಕ್ರಮ ಜರುಗಿಸಬೇಕೆಂದು ವಿನೋದ್ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹಿಂಡಲಗಾ ಬಳಿಕ ಶಿವಮೊಗ್ಗ ಕೇಂದ್ರ ಕಾರಾಗೃಹದ ಅಕ್ರಮ ಬಯಲು; ದುಡ್ಡು ಕೊಟ್ರೆ ಸಾಕು ಕೈದಿಗೂ ಸಿಗತ್ತೆ ವಿಐಪಿ ಸೌಲಭ್ಯ