AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಗನಕ್ಕೇರಿದ ತರಕಾರಿ ಬೆಲೆ, ಒಂದು ಕಟ್ಟು ನಾಟಿ ಕೊತ್ತಂಬರಿ ಸೊಪ್ಪುಗೆ 100 ರೂ.

Vegetables Price in Bengaluru: ಬೆಂಗಳೂರಿನಲ್ಲಿ ತರಕಾರಿ ಬೆಲೆ ಏರಿಕೆಯ ನಾಗಾಲೋಟ ಮುಂದುವರಿದಿದೆ. ಈ ವಾರವೂ ಬೀನ್ಸ್ ದರ 220 ರೂ. ಆಸುಪಾಸಿನಲ್ಲೇ ಇದ್ದು ಇತರ ತರಕಾರಿಗಳ ಬೆಲೆಯೂ ಗಗನಕ್ಕೇರಿವೆ. ಇನ್ನು ಸರಿಯಾಗಿ ಮಳೆಯಾಗದಿದ್ದರೆ ಬೆಲೆ ಏರಿಕೆ ಇನ್ನಷ್ಟು ಹೆಚ್ಚಾಗಬಹುದು ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಬೆಂಗಳೂರು ನಗರದಲ್ಲಿ ಯಾವ ತರಕಾರಿಯ ಬೆಲೆ ಎಷ್ಟಿದೆ ಎಂಬ ವಿವರ ಇಲ್ಲಿದೆ.

ಗಗನಕ್ಕೇರಿದ ತರಕಾರಿ ಬೆಲೆ, ಒಂದು ಕಟ್ಟು ನಾಟಿ ಕೊತ್ತಂಬರಿ ಸೊಪ್ಪುಗೆ 100 ರೂ.
Poornima Agali Nagaraj
Poornima Agali Nagaraj| Edited By: |

Updated on: May 29, 2024 | 11:01 AM

Share

ಬೆಂಗಳೂರು, ಮೇ 29: ದಿನದಿಂದ ದಿನಕ್ಕೆ ತರಕಾರಿ ಬೆಲೆ ಏರುತ್ತಿದೆ. ಇಂದು ಕೂಡ ತರಕಾರಿ ಬೆಲೆ ಏರಿಕೆಯಾಗಿದೆ. ಇದರಿಂದ ಸಾಮಾನ್ಯ ಜನ ರೋಸಿ ಹೋಗಿದ್ದಾರೆ. ಇನ್ನು ಬೆಂಗಳೂರಿನ ಜನ ತಕಕಾರಿ ಬೆಲೆ ಕೇಳಿ ಶಾಕ್ ಆಗಿದ್ದಾರೆ. ಕೆಜಿಗೆ 20 ರೂ. ಇದ್ದ ತರಕಾರಿಗಳ ಬೆಲೆ ಒಮ್ಮೆಯೇ ಬರೋಬ್ಬರಿ 80 ರೂ. ಗಡಿ ದಾಟಿವೆ. ಒಂದು ಕಡೆ ಬಿಸಿಲಿನ ಬಿಸಿಗೆ ಹೆಚ್ಚಿನ ಪ್ರಮಾಣದಲ್ಲಿ‌ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ.‌ ಇನ್ನು ಕಡೆ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಈ ವಾರ ಕೂಡ ಬೆಲೆ‌ ಗಗನಕ್ಕೇರಿದೆ.

ರೈತರು ಹೇಳುವಂತೆ ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು, ಮಳೆಯ ಕೊರತೆಯಿಂದ ನಾವು ಅದುಕೊಂಡಷ್ಟು ಫಸಲು ಬಂದಿಲ್ಲ ಎಂದು ಹೇಳುತ್ತಾರೆ. ಮಾರುಕಟ್ಟೆಯಲ್ಲಿ ವ್ಯಾಪರಿಗಳು ಕೂಡ ತರಕಾರಿಗಳು ನಮಗೆ ಹೇಳಿದಷ್ಟು ಪೂರೈಕೆ ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಒಂದು ವಾರದಿಂದ ಅಕಾಲಿಕವಾಗಿ ಮಳೆಯೂ‌ ಬರುತ್ತಿದ್ದು, ಬೆಳೆ ಹಾಳಾಗುತ್ತಿದೆ. ಹೀಗಾಗಿ ಬರುವ ಅಲ್ಪ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ‌ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿಗಳ‌ ಬೆಲೆ‌ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ‌. ಮಾರುಕಟ್ಟೆಗಳಲ್ಲಿ ಸ್ವಲ್ಪ ಪರವಾಗಿಲ್ಲವೆಂಬ ಬೆಲೆ ಇದ್ದರೂ ಬಡವಾಣೆಗಳ, ಮನೆಗಳ ಬಳಿಯ ತರಕಾರಿ ಅಂಗಡಿಗಳು, ತಳ್ಳುವ ಗಾಡಿ ವ್ಯಾಪಾರಸ್ಥರು, ಹಾಪ್ ಕಾಮ್ಸ್​​​​ಗಗಳಲ್ಲಿ ಬೆಲೆ ವಿಪರೀತ ಹೆಚ್ಚಾಗಿದೆ ಎಂದು ವ್ಯಾಪಾರಸ್ಥರು‌ ಹೇಳುತ್ತಿದ್ದಾರೆ.

ಯಾವ ತರಕಾರಿಗೆ ಎಷ್ಟಿದೆ ಬೆಲೆ?

ತರಕಾರಿ – ಹಿಂದಿನ ಬೆಲೆ – ಈಗಿನ ಬೆಲೆ (ಕೆಜಿಗೆ ರೂಪಾಯಿಗಳಲ್ಲಿ)

  • ಬೀನ್ಸ್ – 220 – 220
  • ಬೆಂಡೆಕಾಯಿ – 60 – 66
  • ಬದನೆಕಾಯಿ – 60 – 70
  • ಕ್ಯಾರೇಟ್ – 80 – 82
  • ದಪ್ಪ ಮೆಣಸಿನಕಾಯಿ – 40 – 65
  • ಸೋರೆಕಾಯಿ – 40 – 50
  • ಹಾಗಲಕಾಯಿ – 60 – 82
  • ನವಿಲುಕೋಸು – 60 – 102
  • ಆಲೂಗೆಡ್ಡೆ -30 – 56
  • ಗೋರಿಕಾಯಿ – 50 – 89
  • ಬಟಾಣಿ – 140 – 180
  • ಟೊಮಾಟೋ – 30 – 60
  • ಬೆಳ್ಳುಳ್ಳಿ – 300 – 338
  • ಶುಂಠಿ – 180 – 195
  • ಪಡುವಲಕಾಯಿ – 30 – 60
  • ಈರುಳ್ಳಿ – 20 – 39
  • ಬಿಟ್ರೋಟ್ – 40 – 46
  • ಹಸಿ ಮೆಣಸಿಕಾಯಿ – 80 – 106

ಕಡಿಮೆಯಾದ ವ್ಯಾಪಾರ

ಹೊಸ ಬೆಳೆ ಬರುವರೆಗೂ ಬೆಲೆ‌ ಹೀಗೆ‌ ಮುಂದುವರೆಯಲಿದೆ.‌ ಆದರೆ ತರಕಾರಿಗಳ‌ ಬೆಲೆ ಕೇಳಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಒಂದು ಕೆಜಿ ಖರೀದಿಸುವವರು ಅರ್ಧ ಕೆಜಿ ಖರೀದಿ‌ ಮಾಡುತ್ತಿದ್ದಾರೆ. ವ್ಯಾಪಾರ ತುಂಬ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.

ನಾಟಿ ಕೊತ್ತಂಬರಿ ಸೊಪ್ಪು ದರ 100 ರೂ!

ವಿಜಯ ನಗರವೂ ಸೇರಿದಂತೆ ನಗರದ ವಿವಿಧೆಡೆ ಒಂದು ಕಟ್ಟು ನಾಟಿ ಕೊತ್ತಂಬರಿ ಸೊಪ್ಪು ಬರೋಬ್ಬರಿ 100 ರೂಪಾಯಿಗೆ ಮಾರಾಟವಾಗುತ್ತಿದೆ.

200 ರೂ. ಗಡಿ ದಾಟಿದ ಬೀನ್ಸ್ ದರ

ಕಳೆದ ವಾರವೇ ಬೀನ್ಸ್ ಬೆಲೆ 200 ರೂ. ಗಡಿದಾಟಿತ್ತು. ಇದೀಗ 220 ರೂ. ಹಾಗೂ ಅದಕ್ಕಿಂತಲೂ ಹೆಚ್ಚು ದರದಲ್ಲಿ ಮಾರಾಟವಾಗುತ್ತಿದೆ. ಈ ಮಧ್ಯೆ ಸೌತೆಕಾಯಿ ಹಾಗೂ ಲಿಂಬೆಹಣ್ಣಿನ ಬೆಲೆ ಕೂಡ ವಿಪರೀತ ಜಾಸ್ತಿಯಾಗಿ ಹೋಗಿದೆ. ತರಕಾರಿ ಬೆಲೆ ನಿಯಂತ್ರಣದ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಜೂನ್ 1 ರಿಂದ ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ವಿತರಣೆ: ಎಲ್ಲೆಲ್ಲಿ ಸಿಗುತ್ತೆ? ಇಲ್ಲಿದೆ ವಿವರ

ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
Poornima Agali Nagaraj
Poornima Agali Nagaraj
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?