ಸ್ವಾತಂತ್ರ್ಯದ ಅಮೃತ ಮಹೋತ್ಸವ; ಶಾಸಕ ಎಂ.ಪಿ. ರೇಣುಕಾಚಾರ್ಯ, ಅಧಿಕಾರಿಗಳಿಂದ ಕಾಲ್ನಡಿಗೆ, ಸೈಕಲ್ ಜಾಥಾ

|

Updated on: Apr 02, 2021 | 2:11 PM

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರ್ಕಾರದ ಆದೇಶದ ಹಿನ್ನೆಲೆ ಕಾಲ್ನಡಿಗೆ ಜಾಥ ಮಾಡಿದ್ರು. ಇನ್ನು ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒಯಿಂದ ಸೈಕಲ್ ಜಾಥ ನಡೆದಿದೆ. ನಗರದ ಹೊಸ ಗಡಿಯಾರ ಕಂಬದ ಬಳಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಅಧಿಕಾರಿಗಳಿಂದ ಸೈಕಲ್ ಜಾಥ ಮಾಡಲಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ; ಶಾಸಕ ಎಂ.ಪಿ. ರೇಣುಕಾಚಾರ್ಯ, ಅಧಿಕಾರಿಗಳಿಂದ ಕಾಲ್ನಡಿಗೆ, ಸೈಕಲ್ ಜಾಥಾ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ
Follow us on

ದಾವಣಗೆರೆ:ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಅಧಿಕಾರಿಗಳಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿ ಜಾಥಾ ನಡೆಯುತ್ತಿದೆ.

ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನೆರೆದಿದ್ದ ಸಾರ್ವಜನಿಕರು ಸ್ವಾತಂತ್ರ್ಯ ಹೋರಾಟಗಾರರ ಪರ ಘೋಷಣೆ ಕೂಗಿ ಜೈಕಾರ ಹಾಕಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರ್ಕಾರದ ಆದೇಶದ ಹಿನ್ನೆಲೆ ಕಾಲ್ನಡಿಗೆ ಜಾಥಾ ಮಾಡಿದ್ರು. ಜೊತೆಗೆ ಮಹಾತ್ಮ ಗಾಂಧಿ ಜೀ ಮತ್ತು ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಗಳಿಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಹೂವಿನ ಮಾಲೆಯನ್ನು ಹಾಕಿದ್ರು.

ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ

ಇನ್ನು ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒಯಿಂದ ಸೈಕಲ್ ಜಾಥಾ ನಡೆದಿದೆ. ನಗರದ ಹೊಸ ಗಡಿಯಾರ ಕಂಬದ ಬಳಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಅಧಿಕಾರಿಗಳಿಂದ ಸೈಕಲ್ ಜಾಥಾ ಮಾಡಲಾಗಿದೆ. ಈ ವೇಳೆ ಡೋಲುಗಳ ಸದ್ದು ಜೋರಾಗಿತ್ತು.

ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು (Azadi ka Amrit Mohotsav) ಈ ಬಾರಿ ದೇಶಾದ್ಯಂತ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ತೀರ್ಮಾನಿಸಿದ್ದರು. ಇದರ ಅಂಗವಾಗಿ ದೇಶದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದೂ ಮೋದಿ ತಿಳಿಸಿದ್ದರು. ಅದರಂತೆ ಇಂದು (ಏಪ್ರಿಲ್ 02) ದಾವಣೆಗೆರೆಯಲ್ಲಿ ಕಾಲ್ನಡಿಗೆ ಜಾಥ, ಸೈಕಲ್ ಜಾಥಾ ಮಾಡುವ ಮೂಲಕ ಮಾಡಲಾಗಿದೆ.

ಸೈಕಲ್ ಜಾಥ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಡೋಲು ಕುಣಿತ

ಕಾಲ್ನಡಿಗೆ ಜಾಥ

ಇದನ್ನೂ ಓದಿ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ: ಚಿಕ್ಕಬಳ್ಳಾಪುರದ ವಿದುರಾಶ್ವತ್ಥದಲ್ಲಿ ರಾಜ್ಯಪಾಲರಿಂದ ಕಾರ್ಯಕ್ರಮಕ್ಕೆ ಚಾಲನೆ

(Azadi Ka Amrut Mahotsav 75 Years of Independence Celebration in Davangere)

Published On - 1:44 pm, Fri, 2 April 21