AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಐಟಿ ತನಿಖೆಗೆ ಸಂತ್ರಸ್ತ ಯುವತಿ ಹಾಜರ್​​, ಶಾಸಕ ರಮೇಶ್ ಜಾರಕಿಹೊಳಿ ಆಬ್ಸೆಂಟ್​; ಮುಂದೇನು?

ಈಗಾಗಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್ ಎಸ್ಐಟಿ ತಂಡದ ಬಳಿ ತೆರಳಿದ್ದಾರೆ. ಅನಾರೋಗ್ಯ ಕಾರಣ ನೀಡಿ ವಿಚಾರಣೆಗೆ ಗೈರುಹಾಜರು ಆಗಲು ವಕೀಲರ ಮೂಲಕ ಶಾಸಕ ರಮೇಶ್ ಜಾರಕಿಹೊಳಿ ಮನವಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು.

ಎಸ್​ಐಟಿ ತನಿಖೆಗೆ ಸಂತ್ರಸ್ತ ಯುವತಿ ಹಾಜರ್​​, ಶಾಸಕ ರಮೇಶ್ ಜಾರಕಿಹೊಳಿ ಆಬ್ಸೆಂಟ್​; ಮುಂದೇನು?
ರಮೇಶ್​ ಜಾರಕಿಹೊಳಿ
guruganesh bhat
| Edited By: |

Updated on:Apr 02, 2021 | 2:05 PM

Share

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಲೈಂಗಿಕ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ನೊಟೀಸ್ ಜಾರಿ ಮಾಡಿತ್ತು. ಆದರೆ ಹನ್ನೆರಡು ಗಂಟೆ ಆದರೂ ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗಿಲ್ಲ. ಈ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್, ‘ತಮಗೆ ಅನಾರೋಗ್ಯ ಇದೆ ಎಂದು ರಮೇಶ್ ಜಾರಕಿಹೊಳಿ ಅವರು ಎಸ್ಐಟಿ ತಂಡಕ್ಕೆ ತಿಳಿಸಲು ಹೇಳಿದ್ದರು. ಹಾಗಾಗಿ, ನಾನು ಅದನ್ನು ತನಿಖಾ ತಂಡಕ್ಕೆ ತಿಳಿಸಿದ್ದೇನೆ. ಸದ್ಯ ರಮೇಶ್ ಜಾರಕಿಹೊಳಿ ಗೋಕಾಕ್​ನಲ್ಲಿದ್ದಾರೆ. ಅನಾರೋಗ್ಯದ ಕಾರಣದಿಂದ ಎರಡು ದಿನ ವಿಚಾರಣೆಗೆ ಬರಲು ಆಗುವುದಿಲ್ಲ ಎಂದು ತನಿಖಾ ತಂಡಕ್ಕೆ ಹೇಳಿದ್ದೇವೆ. ಇನ್ನೂ ಎರಡು ಮೂರು ದಿನದಲ್ಲಿ ಅವರು ಬರುತ್ತಾರೆ’ ಎಂದು ಎಸ್​ಐಟಿ ತಂಡಕ್ಕೆ ತಿಳಿಸಿದ್ದಾಗಿ ಹೇಳಿದರು.

ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಬಂಧನ ಮಾಡಬೇಕಾದರೆ ಬೆಂಗಳೂರಿಗೇ ಬಂದು ಬಂಧಿಸಬೇಕು ಎಂದಿಲ್ಲ. ಗೋಕಾಕ್​ನಲ್ಲಿ ಇದ್ದರೂ ಅಲ್ಲೇ ಹೋಗಿ ಬಂಧಿಸಬಹುದು ಎಂದೂ ವಕೀಲ ಶ್ಯಾಮ್ ಸುಂದರ್ ತಿಳಿಸಿದ್ದಾರೆ. ಇನ್ನು ವಿಚಾರಣೆಗೆ ಸಂತ್ರಸ್ತ ಯುವತಿ ಇಂದು ತಡವಾಗಿ ಹಾಜರಾದರು. ನಿನ್ನೆ ಸುಮಾರು 12 ಗಂಟೆ ಕಾಲ ಯುವತಿಯ ವಿಚಾರಣೆ ನಡೆದಿತ್ತು. ಬಳಲಿಕೆಯ ಹಿನ್ನೆಲೆ ಯುವತಿ ಇಂದು ತಡವಾಗಿ 12 ಗಂಟೆಗೆ ವಿಚಾರಣೆಗೆ ಆಗಮಿಸಿದ್ದಾರೆ.

ಈ ಮಧ್ಯೆ, ಬೆಂಗಳೂರಿನಲ್ಲಿ ಎಸ್‌ಐಟಿ ಅಧಿಕಾರಿಗಳು ನಡೆಸುತ್ತಿದ್ದ ಸಭೆ ಮುಕ್ತಾಯಗೊಂಡಿದೆ. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಭೆಯ ನೇತೃತ್ವವನ್ನು SIT ಮುಖ್ಯಸ್ಥ ಸೌಮೇಂದು ಮುಖರ್ಜಿ ವಹಿಸಿಕೊಂಡಿದ್ದರು.

ನಿನ್ನೆಯ ಎಸ್ಐಟಿ ವಿಚಾರಣೆ ವೇಳೆ ಸಂತ್ರಸ್ಥೆ ಕಣ್ಣೀರು..! ನಿನ್ನೆ ಎಸ್​ಐಟಿ ಅಧಿಕಾರಿಗಳ ತಂಡ ಯುವತಿಯ ವಿಚಾರಣೆ ಮತ್ತು ಮಹಜರು ನಡೆಸಿತ್ತು. ಜಡ್ಜ್​ ಮುಂದೆ ಧೈರ್ಯವಾಗಿ ಮಾತನಾಡಿದ್ದ ಸಂತ್ರಸ್ಥೆ ಎಸ್ಐಟಿ ವಿಚಾರಣೆ ವೇಳೆ ಕಣ್ಣೀರು ಸುರಿಸಿದ್ದಳು. ಮೊದಲ ದಿನ ಹೇಳಿಕೆ ದಾಖಲಿಸುವಲ್ಲಿ ಇದ್ದ ಆಸಕ್ತಿ ಎರಡನೇ ದಿನ ಹಾಜರಾದ ವೇಳೆ ಇರಲಿಲ್ಲ. ಮೆಡಿಕಲ್ ಟೆಸ್ಟ್ ಆದ ಬಳಿಕ ಸಂತ್ರಸ್ಥೆ ಮಾನಸಿಕವಾಗಿ ಕೊಂಚ ಡಿಸ್ಟರ್ಬ್ ಆದಂತೆ ಕಂಡು ಬಂದಿತ್ತು. ವಿಚಾರಣೆ ವೇಳೆ ಮರುಪ್ರಶ್ನೆಗಳನ್ನ ಕೇಳದೆ ಐಓ ಎಸಿಪಿ‌ ಕವಿತಾ ಸಂತ್ರಸ್ಥೆಗೆ ಆತ್ಮವಿಶ್ವಾಸ ತುಂಬಿದ್ದರು. ವಿಚಾರಣೆ ವೇಳೆ ಮಧ್ಯೆ ಮಧ್ಯೆ ನೀರನ್ನು ನೀಡಿ ಸಂತೈಸಿ, ಸಮಯ ಕೊಟ್ಟು ಹೇಳಿಕೆ ದಾಖಲಿಸಲು ಸಲಹೆ ನೀಡಿದ್ದರು.

ವಕೀಲರ ಪಕ್ಕದಲ್ಲೇ ಕುಳಿತು ಹೇಳಿಕೆ ದಾಖಲಿಸಿದ ಸಂತ್ರಸ್ಥೆ ರಮೇಶ್ ಜಾರಕಿ ಹೊಳಿ ಮೊದಲ ಬಾರಿ, ಆ ನಂತರ ಸಂಪರ್ಕ ಮಾಡಿದ್ದು ಯಾವಾಗ…? ಎಲ್ಲಿ..? ಹಾಗೂ ರಮೇಶ್ ಜಾರಕಿಹೊಳಿ ನೀಡಿದ್ದ ಗಿಫ್ಟ್ ಗಳ ಕುರಿತು ಸಂತ್ರಸ್ಥೆ ಹೇಳಿಕೆ ದಾಖಲಿಸಿದ್ದಾಳೆ. ಬಳಿಕ ಸಿಡಿ ವೈರಲ್ ಆಗಿರುವ ಆಡಿಯೋ ಮತ್ತು ವಿಡಿಯೋದಲ್ಲಿರುವುದು ತಾನೇ, ತನ್ನದೇ ಧ್ವನಿ ಅಂತ ಹೇಳಿಕೆ ನೀಡಲಾಗಿದೆ. ಈ ಸಂಬಂಧ ಸಂತ್ರಸ್ಥೆ ವಾಯ್ಸ್ ಸ್ಯಾಂಪಲ್ ರೆಕಾರ್ಡ್ ಮಾಡಿರುವ ಎಸ್ಐಟಿ, ಸಂತ್ರಸ್ಥೆಯ ವಾಯ್ಸ್ ರೆಕಾರ್ಡ್ ಮಾಡಿ ಮಾದರಿ ಸಂಗ್ರಹಿಸಿ ಎಫ್ಎಸ್ ಎಲ್ ಗೆ ಕಳುಹಿಸಿದ್ದರು.. ಇದುವರೆಗೂ ಕೇವಲ ಕಬ್ಬನ್ ಪಾರ್ಕ್ ಠಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರ ವಿಚಾರಣೆ ನಡೆಸಲಾಗಿತ್ತು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಅಂತ್ಯವಾಗಿ ಬಂಧಿಸದಿದ್ದರೆ ಆಗ ಪ್ರಶ್ನಿಸಿ -ಡಿಜಿಪಿ ಪ್ರವೀಣ್ ಸೂದ್

ರಮೇಶ್ ಜಾರಕಿಹೊಳಿ ಒಟ್ಟು 2 ಬಾರಿ ಲೈಂಗಿಕ ಕ್ರಿಯೆ ನಡೆಸಿದ್ರು ಎಂದ ಸಿಡಿ ಲೇಡಿ: ಇಂದು ರಮೇಶ್ ಬಂಧನವಾಗುತ್ತಾ?

(MLA Ramesh Jarkiholi didnot attend SIT investigation today sources said)

Published On - 12:47 pm, Fri, 2 April 21